ರಾತ್ರಿಪೂರ್ತಿ ಯಾರಿಗೂ ತಿಳಿಯದಂತೆ ರಸ್ತೆಯಲ್ಲೇ ಕೂತಿದ್ದ ಪುನೀತ್! ಅಷ್ಟಕ್ಕೂ ಅವತ್ತು ಏನಾಗಿತ್ತು ಗೊತ್ತಾ.? | Puneeth Rajkumar

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಅವರಿಗೆ ಪ್ರವಾಸಗಳು ಅಂದ್ರೆ ಎಷ್ಟು ಇಷ್ಟ ಅಂತ ಪ್ರತಿಯೊಬ್ಬರಿಗೂ ತಿಳಿದಿದೆ. ಅದರಲ್ಲೂ ದೇಶ-ವಿದೇಶಗಳನ್ನ ಸುತ್ತಾಡಬೇಕು, ಪ್ರವಾಸ ಹೋದ ಕಡೆಯಲ್ಲಿನ ಪರಿಸರ, ಸಂಸ್ಕೃತಿ ಹಾಗು ಅಲ್ಲಿನ ಆಹಾರ ಎಲ್ಲವನ್ನ ಆಸ್ವಾದಿಸಬೇಕು ಎನ್ನುವುದು ಅಪ್ಪು ಅವರ ಆಸೆ ಆಗಿತ್ತು. ಅದೇ ರೀತಿ ಎಷ್ಟೇ ಕೆಲಸ ಇದ್ದರೂ ಕೂಡ ಬಿಡುವು ಮಾಡಿಕೊಂಡು ತಪ್ಪದೇ ಪ್ರತಿವರ್ಷ ತಮ್ಮ ಕುಟುಂಬವನ್ನ ವಿದೇಶ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದರು. ಪುನೀತ್ ಅವರು ಪತ್ನಿ ಅಶ್ವಿನಿ, ಮಕ್ಕಳಾದ ದೃತಿ ಹಾಗು ವಂಧಿತ ಜೊತೆಗೆ ಕಂಪ್ಲೀಟ್ ಫ್ಯಾಮಿಲಿ ಮ್ಯಾನ್ ಆಗಿ ಎಂಜಾಯ್ ಮಾಡುತ್ತಿದ್ದರು.

Puneeth rajkumar was sitting on the road all night without anyone knowing

ಅಪ್ಪು ಅವರು ಬೇರೆ ಯಾರನ್ನೂ ಅಂದ್ರೆ, ಸ್ವತಃ ತಮ್ಮ ಆಪ್ತರನ್ನು ಕೂಡ ಕರೆದುಕೊಂಡು ಹೋಗುತ್ತಿರಲಿಲ್ಲ. ಪತ್ನಿ ಹಾಗು ಮಕ್ಕಳ ಕೈಯಲ್ಲಿ ಯಾವುದೇ ಭಾರವಾದ ಲಗೇಜ್ ಗಳನ್ನು ಕೊಡದೇ ಸಂಪೂರ್ಣವಾಗಿ ತಾವೇ ಪ್ರವಾಸಕ್ಕಾಗುವಷ್ಟು ಲಗೇಜ್ ಸೇರಿದಂತೆ ಎಲ್ಲವನ್ನು ಅಪ್ಪು ಅವರೇ ತೆಗೆದುಕೊಂಡು ಹೋಗುತ್ತಿದ್ದರು. ಇದರ ಬಗ್ಗೆ ಒಮ್ಮೆ ಸೃಜನ್ ಲೋಕೇಶ್ ಅವರು ಮಜಾ ಟಾಕೀಸ್ ನಲ್ಲಿಯೂ ಹೇಳಿಕೊಂಡಿದ್ದರು. ಅಷ್ಟು ಸಿಂಪಲ್ ಕಮ್ ಫ್ಯಾಮಿಲಿ ಮ್ಯಾನ್ ಆಗಿದ್ದರು ನಮ್ಮ ಅಪ್ಪು. ಆಪ್ತ ಸಹಾಯಕರು ಯಾರು ಇರಲ್ವಾ? ಅವರು ಏನ್ ಮಾಡ್ತಾರೆ? ಅಂತ ಸೃಜನ್ ಕೇಳಿದಾಗ… ಇಲ್ಲ, ನಮ್ಮ ಲಗೇಜ್ ಅನ್ನ ಇನ್ಯಾರು ತೆಗೆದುಕೊಂಡು ಹೋಗ್ತಾರೆ? ನಾನೇ ತೆಗೆದುಕೊಂಡು ಹೋಗಬೇಕು ಎಂದು ಮಗುವಿನಂತೆ ಮುಗ್ದರಾಗಿ ನಕ್ಕಿದ್ದರು.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Kiccha Sudeep | ಕಿಚ್ಚ ಸುದೀಪ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (1997-2023) | Kiccha Sudeep Hit And Flop Movies

Puneeth rajkumar was sitting on the road all night without anyone knowing

ಇನ್ನು ಅಪ್ಪು ಅವರಿಗೆ ಸೌತ್ ಅಮೆರಿಕಾಗೆ ಹೋಗಬೇಕು ಎನ್ನುವ ಆಸೆಯಂತೆ ಎರಡು ವರ್ಷದ ಹಿಂದೆಯೇ ಪತ್ನಿ ಅಶ್ವಿನಿ ಹಾಗು ಮಕ್ಕಳೊಂದಿಗೆ ಹೋಗಿ ಖುಷಿಪಟ್ಟಿದ್ದರು. ಇನ್ನು ಪುನೀತ್ ರಾಜ್ ಕುಮಾರ್ ಅವರ ಕೊನೆಯ ವಿದೇಶ ಪ್ರವಾಸ ಅಂದ್ರೆ, ಅದು ಎರಡು ವರ್ಷದ ಹಿಂದೆ ಕನ್ನಡ ಸಮ್ಮೇಳನಕ್ಕಾಗಿ ಸೇಹಿತರೊಂದಿಗೆ ಹೋಗಿದ್ದು, ಅನಂತರ ಕೊರೋನಾ ಬಂದು ಲಾಕ್ ಡೌನ್ ಆಗಿತ್ತು. ಈವಾಗ ಅಪ್ಪು ಅವರು ನಮ್ಮೊಂದಿಗೆ ಇಲ್ಲವಾದರೂ, ಅವರ ಪ್ರವಾಸವೂ ಕೂಡ ಕೊನೆಗೆ ಅಲ್ಲಿಗೆ ನಿಂತು ಹೋಯ್ತು. ಆದ್ರೆ ಅಪ್ಪು ಅವರು ಇದ್ದಷ್ಟು ದಿನ ಪ್ರತೀ ಕ್ಷಣವನ್ನು ಕೂಡ ಸಂತೋಷದಿಂದ ಅನುಭವಿಸುತ್ತಿದ್ದರು. ಒಮ್ಮೆ ಬೇರೆ ದೇಶಕ್ಕೆ ಪ್ರವಾಸಕ್ಕೆ ಹೋಗಿದ್ದಾಗ ಮಧ್ಯರಾತ್ರಿಯಲ್ಲಿ ದಾರಿ ತಪ್ಪಿದ ಘಟನೆ ಬಗ್ಗೆ ತಿಳಿಯೋಣ.

WhatsApp Group Join Now
Telegram Group Join Now

ನಿಜಕ್ಕೂ ಆ ಸಮಯದಲ್ಲಿ ಎಷ್ಟು ಸೌಮ್ಯದಿಂದ ಇದ್ದರು ಅಂದ್ರೆ, ಅವರ ಗುಣ ಮೆಚ್ಚಲೇಬೇಕು, ಹೌದು,ಒಮ್ಮೆ ಆಸ್ಟ್ರಿಯಾ ದೇಶಕ್ಕೆ ಶೂಟಿಂಗ್ ನಿಮಿತ್ತ ಹೋಗಿದ್ದರು, ಸಿನಿಮಾ ಶೂಟಿಂಗ್ ಮುಗಿದು ಅಪ್ಪು ಅವರು ತಮ್ಮ ಮ್ಯಾನೇಜರ್ ಕುಮಾರ್ ಅವರೊಂದಿಗೆ ರಾತ್ರಿ ಹೊರಗೆ ಊಟಕ್ಕೆಂದು ಕರೆದುಕೊಂಡು ಹೋದರು. ಊಟ ಮುಗಿವಷ್ಟರಲ್ಲಿ ರಾತ್ರಿ ಸಮಯ 11:30 ಆಗಿತ್ತು. ಊಟ ಮುಗಿಸಿಕೊಂಡು ಅವರಿಬ್ಬರೂ ವಾಸವಿದ್ದ ಹೋಟೆಲ್ ಕಡೆ ನಡೆದುಕೊಂಡು ಬರುತ್ತಿದ್ದರು. ಆಗ ಸಮಯ ರಾತ್ರಿ ಒಂದು ಗಂಟೆ ಆಗಿತ್ತು. ದಾರಿಯಲಿ ಯಾರೊಬ್ಬರ ಸುಳಿವೂ ಕೂಡ ಇಲ್ಲ, ಆಗೆಲ್ಲ ವಿದೇಶಕ್ಕೆ ಚಿತ್ರೀಕರಣಕ್ಕೆ ಹೋದಾಗ ಅಲ್ಲಿ ಸಂಪೂರ್ಣವಾಗಿ ಸಿನಿಮಾ ಪ್ರೊಡಕ್ಷನ್ ತಂಡದವರು ಒಂದು ಫೋನ್ ಮಾತ್ರ ಇಟ್ಟುಕೊಳ್ಳುತ್ತಿದ್ದರು. ಅದರಲ್ಲಿಯೇ ಪ್ರತಿಯೊಬ್ಬರೂ ತಮ್ಮ ಕುಟುಂಬಗಳಿಗೆ ಫೋನ್ ಮಾಡಲು ಬಳಸುತ್ತಿದ್ದರಂತೆ.

Puneeth rajkumar was sitting on the road all night without anyone knowing

ಅಪ್ಪು ಹಾಗು ಕುಮಾರ್ ಅವರಿಗೆ ತಮ್ಮ ಹೋಟೆಲ್ ಹೆಸರು ಬಿಟ್ಟರೆ ಅಲ್ಲಿ ಬೇರೆ ಯಾವ ದಾರಿ ಕೂಡ ಗೊತ್ತಿರಲಿಲ್ಲವಂತೆ. ಅವರು ದಾರಿ ತಪ್ಪಿ ಹೋಗುತ್ತಿದ್ದಂತೆ ಬೆಳಗಿನ ಜಾವ ಸಮಯ ಮೂರು ಗಂಟೆ ಆಗಿತ್ತು.. ಯಾವುದಾದರೂ ಮನೆಯ ಬಾಗಿಲು ತಟ್ಟಿ ತಮ್ಮ ಹೋಟೆಲ್ ಹೆಸರು ಹೇಳಿ ದಾರಿ ಕೇಳೋಣ ಅಂತ ಅಂದ್ರೆ, ಅವರೆಲ್ಲಿ ತಮ್ಮನ್ನು ತಪ್ಪಾಗಿ ತಿಳಿದುಕೊಂಡು ಬಿಟ್ರೆ ಏನು ಮಾಡುವುದು.? ಎಂದು ಸುಮ್ಮನಾಗಿಬಿಟ್ಟರಂತೆ. ಜೊತೆಗೆ ನಮ್ಮ ಕತ್ತಲ್ಲಿ ಚೈನ್ ಬೇರೆ ಇತ್ತು ಎಂದು ಆ ದಿನ ಅಪ್ಪು ಅವರು ಭಯ ಪಟ್ಟಿರುವುದನ್ನ ಮ್ಯಾನೇಜರ್ ಕುಮಾರ್ ಅವರು ನೆನಪು ಮಾಡಿಕೊಂಡರು.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Dr. Puneeth Rajkumar ಪುನೀತ್ ರಾಜ್ ಕುಮಾರ್ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2021) | Puneeth Rajkumar Hit And Flop Movies

ಆಗಲು ಸಹ ಆ ರಾತ್ರಿಯಲ್ಲಿ ಸ್ವತಃ ತಾವೇ ದಾರಿ ತಪ್ಪಿ ಕುಳಿತಿದ್ದರೂ ಕೂಡ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಚಿತ್ರತಂಡದವರ ಬಗ್ಗೆ ಯೋಚನೆ ಮಾಡಿ, ನಾನು ಬೆಳಿಗ್ಗೆ ಚಿತ್ರೀಕರಣಕ್ಕೆ ಹೋಗಬೇಕು, ನನ್ನಿಂದ ಅವರಿಗೆ ಯಾವುದೇ ತೊಂದರೆ ಆಗಬಾರದು ಎಂದು ಹೇಳುತ್ತಿದ್ದರಂತೆ.. ನೋಡಿದ್ರಲ್ಲಾ ಸ್ನೇಹಿತರೇ, ಅಪ್ಪು ಅವರ ಈ ಒಳ್ಳೆಯ ಮನಸ್ಸಿನ ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನ ತಪ್ಪದೇ ಕಾಮೆಂಟ್ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply