RTO Karnataka : ಎಲ್ಲಾ ವಾಹನ ಮಾಲೀಕರಿಗೆ ಬಿಗ್ ಶಾಕ್ | ಜೂನ್ 1 ಒಳಗಾಗಿ ಈ ಕೆಲಸ ಕಡ್ಡಾಯ | ಇಲ್ಲಾಂದ್ರೆ ದಂಡ ಫಿಕ್ಸ್

RTO Karnataka : ನಮಸ್ಕಾರ ಸ್ನೇಹಿತರೇ, ಸ್ವಂತ ವಾಹನ ಹೊಂದಿರುವ ಎಲ್ಲ ವಾಹನ ಸವಾರರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್.! ಇದೇ ತಿಂಗಳು ಅಂದ್ರೆ ಮೇ 31 ರೊಳಗೆ ಈ ಕೆಲಸ ಕಡ್ಡಾಯ. ಸ್ವಂತ ವಾಹನ ಇರುವ ಎಲ್ಲ ವಾಹನ ಮಾಲೀಕರಿಗೂ ಈ ಹೊಸ ರೂಲ್ಸ್ ಅನ್ವಯ. ನಿಮ್ಮ ಬಳಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಅಥವಾ ನಾಲ್ಕು ಚಕ್ರದ ವಾಹನ ಸೇರಿದಂತೆ ಯಾವುದೇ ವಾಹನ ಇರುವ ಎಲ್ಲ ವಾಹನ ಸವಾರರಿಗೂ ಕೂಡ ಈ ಹೊಸ ರೂಲ್ಸ್ ಅನ್ವಯಿಸುತ್ತದೆ.

ಸ್ವಂತ ವಾಹನ ಮಾಲೀಕರು ಈ ಹೊಸ ರೂಲ್ಸ್ ಪಾಲಿಸದೇ ಹೋದಲ್ಲಿ ಜೂನ್ ಒಂದರಿಂದ ದಂಡ ಕಟ್ಟಿಟ್ಟ ಬುತ್ತಿ. ಟ್ರಾಫಿಕ್ ಪೊಲೀಸರಿಗಂತೂ ಜೂನ್ ಒಂದರಿಂದ ಹಬ್ಬವೋ ಹಬ್ಬ. ಹಣದ ಸುರಿಮಳೆ ಸುರಿಯತ್ತೆ. ನಿಮ್ಮ ವಾಹನವನ್ನು ಎಲ್ಲೆಂದರಲ್ಲಿ ಟ್ರಾಫಿಕ್ ಪೊಲೀಸರು ತಡೆಗಟ್ಟಿ ದಂಡ ವಸೂಲಾತಿ ಮಾಡುವುದಕ್ಕೆ ಮುಂದಾಗಿದ್ದಾರೆ. ಹಾಗಾದ್ರೆ ಇದೇ ಮೇ 31 ರ ಒಳಗಾಗಿ ಎಲ್ಲ ವಾಹನ ಮಾಲೀಕರು ಕಡ್ಡಾಯವಾಗಿ ಮಾಡಿಸಲೇಬೇಕಾದ ಹೊಸ ಕೆಲಸ ಏನು? ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಕೂಡ ಓದಿ : Bara Parihara Amount Status Check : ಇನ್ನೂ ನಿಮಗೆ ಬೆಳೆ ಪರಿಹಾರ ಹಣ ಬಾರದಿದ್ದರೆ ಈ 1 ಕೆಲಸ ಮಾಡಿ 5 ನಿಮಿಷದಲ್ಲಿ ಹಣ ನಿಮ್ಮ ಖಾತೆಗೆ ಜಮೆ

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್(HSRP Number Plate) ವಿಚಾರದಲ್ಲಿ ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ಮೇ 31 ಕೊನೆಯ ದಿನಾಂಕ ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ಈ ಹಿಂದೆ ಕೂಡ ಸಾಕಷ್ಟು ದಿನಾಂಕಗಳ ಗಡುವನ್ನ ರಾಜ್ಯದ ಜನರಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್(HSRP Number Plate) ಅಳವಡಿಸುವ ವಿಚಾರದಲ್ಲಿ ಗಡುವನ್ನ ನೀಡಿತ್ತು.

ಇನ್ನು ಆಶ್ಚರ್ಯಕರ ವಿಚಾರವೇನೆಂದರೆ 2 ಕೋಟಿ ನಂಬರ್ ಪ್ಲೇಟ್‌ಗಳು ರಿಜಿಸ್ಟರ್ ಆಗಬೇಕಾಗಿತ್ತು. ಆದರೆ ಇದುವರೆಗೂ ರಿಜಿಸ್ಟರ್ ಆಗಿರೋದು ಕೇವಲ ಮೂವತೈದು ಲಕ್ಷ ನಂಬರ್ ಪ್ಲೇಟ್ ಗಳು ಮಾತ್ರ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಈಗ ಮತ್ತೆ ಸಾರಿಗೆ ಇಲಾಖೆಯ ಗಡುವಿನ ದಿನಾಂಕದ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ. ಇದನ್ನ ಇನ್ನಷ್ಟು ದಿನಗಳಿಗೆ ಮುಂದೂಡಬಹುದಾ.? ಅನ್ನುವಂತಹ ಪ್ರಶ್ನೆಗಳು ಹೆಚ್ಚಾಗಿ ಕೇಳಿ ಬರುತ್ತಿದೆ.

ಇದನ್ನೂ ಕೂಡ ಓದಿ : Labour Card Scholarship : ಕಾರ್ಮಿಕ ಇಲಾಖೆ ವತಿಯಿಂದ ವಿದ್ಯಾರ್ಥಿ ವೇತನ – ಅರ್ಜಿ ಹೇಗೆ ಸಲ್ಲಿಸುವುದು.?

ಆದ್ರೆ ಈ ಸಂದರ್ಭದಲ್ಲಿ ಒಂದಂತೂ ಕನ್ಫರ್ಮ್ ಆಗಿದೆ. ಒಂದು ವೇಳೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್(HSRP Number Plate) ಮಾಡಿಸುವಂತಹ ಸಮಯಾವಧಿ ಮುಂದುವರೆಯದೇ ಹೋದಲ್ಲಿ ದೊಡ್ಡ ಮಟ್ಟದಲ್ಲಿ ದಂಡ ವಿಧಿಸುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್(HSRP Number Plate)ನ್ನ ಮೇ 31 ರ ಒಳಗೆ ಹಾಕಿಸದೇ ಹೋದಲ್ಲಿ ₹500 ರೂಪಾಯಿಗಳಿಂದ ₹1,000 ರೂಪಾಯಿಗಳ ದಂಡವನ್ನ ಕಟ್ಟಬೇಕಾದ ಸಾಧ್ಯತೆ ಇದೆ. ದಂಡದಿಂದ ತಪ್ಪಿಸಿಕೊಳ್ಳುವುದಕ್ಕೆ ಈ ಕೆಲಸವನ್ನ ನೀವು ಮಾಡಲೇಬೇಕಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply