Meghana Raj : ರಾಯನ್ ರಾಜ್ ಜೊತೆ ಸೇರಿ ಸಖತ್ ಡ್ಯಾನ್ಸ್ ಮಾಡಿದ ಮೇಘನಾ ರಾಜ್ / ಡ್ಯಾನ್ಸ್ ನೋಡಿ ಧ್ರುವ ಸರ್ಜಾ ಮಾಡಿದ್ದೇನು ಗೊತ್ತಾ.?

Meghana Raj : ನಟಿ ಮೇಘನಾ ರಾಜ್ ಅವರು ಹಲವು ವರ್ಷಗಳ ಬಳಿಕ ಮತ್ತೆ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಅವರ ಮಗ ರಾಯನ್ ರಾಜ್ ಅಂದ್ರೆ ತಪ್ಪಾಗಲಾರದು. ಮಗ ರಾಯನ್ ನ ಖುಷಿಯಲ್ಲಿ ತಮ್ಮ ಖುಷಿಯನ್ನ ಕಾಣುತ್ತಿದ್ದಾರೆ ಮೇಘನಾ ರಾಜ್. ಮೊನ್ನೆ ತಾನೇ ಮಗ ರಾಯನ್ ರಾಜ್ ಮೂರನೇ ವರ್ಷದ ಹುಟ್ಟುಹಬ್ಬವನ್ನ ಸರಳವಾಗಿ ಆಚರಿಸಿದ್ದಾರೆ ಮೇಘನಾ.

Whatsapp Group Join
Telegram channel Join

ಚಿರು ಇಲ್ಲದೇ ಇದ್ದರೂ ರಾಯನ್ ಗೆ ತಂದೆ ಇಲ್ಲವೆನ್ನುವ ಭಾವನೆ ಬಾರದಂತೆ ತುಂಬಾನೇ ಪ್ರೀತಿಯಿಂದ ಬೆಳೆಸಿದ್ದಾರೆ ಮೇಘನಾ. ನಟ ಧ್ರುವ ಸರ್ಜಾ ಕೂಡ ಸಹೋದರ ಚಿರು ಮಗ ರಾಯನ್ ನನ್ನು ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದಾರೆ. ರಾಯನ್ ನನ್ನ ದೊಡ್ಡ ಮಗ ಅಂತಾನೇ ಹೇಳಿಕೊಂಡಿದ್ದಾರೆ. ಇದೀಗ ರಾಯನ್ ಗೆ ಮೂರು ವರ್ಷ ತುಂಬಿದ್ದು,ರಾಯನ್ ಹುಟುಹಬ್ಬವನ್ನ ಚಿಕ್ಕಪ್ಪ ಧ್ರುವ ಸರ್ಜಾ ಅದ್ಧೂರಿಯಾಗಿ ಆಚರಿಸಿದ್ದಾರೆ.

ಇದನ್ನೂ ಕೂಡ ಓದಿ : ತಾಯಿಯನ್ನು ಉಳಿಸಲು ಈ ಪುಟ್ಟ ಕಂದಮ್ಮ ಮಾಡಿರುವ ಸಾಹಸ ನೋಡಿದ್ರೆ ನಿಜಕ್ಕೂ ಶಾಕ್ ಆಗ್ತೀರಾ.!

Whatsapp Group Join
Telegram channel Join

ಇನ್ನು ಬರ್ತ್ ಡೇ ವೇಳೆ ರಾಯನ್ ಸಖತ್ತಾಗಿ ಡ್ಯಾನ್ಸ್ ಮಾಡಿದ್ದು, ರಾಯನ್ ಜೊತೆ ಚಿಕ್ಕಪ್ಪ ಧ್ರುವ ಸರ್ಜಾ ಕೂಡ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ. ರಾಯನ್ ಡ್ಯಾನ್ಸ್ ನೋಡಿ ಮೇಘನಾ ರಾಜ್ ಅವರು ಬಿದ್ದು ಬಿದ್ದು ನಕ್ಕಿದ್ದಾರೆ. ಬಳಿಕ ರಾಯನ್ ಜೊತೆ ಚಿರು ಅವರ ವಾಟ್ ಎ ಬ್ಯೂಟಿಫುಲ್ ಹುಡುಗಿ ಶಿವ ಶಿವ ಹಾಡಿಗೆ ಸಖತ್ತಾಗಿ ಡ್ಯಾನ್ಸ್ ಮಾಡಿದ್ದಾರೆ. ಮನೆಯವರೆಲ್ಲಾ ಸುತ್ತಲೂ ಕುಳಿತುಕೊಂಡು ರಾಯನ್ ನ ಡ್ಯಾನ್ಸ್ ನೋಡಿ ತುಂಬಾ ಖುಷಿಯಾಗಿದ್ದಾರೆ.

ಅಷ್ಟೇ ಅಲ್ಲದೇ ರಾಯನ್ ಚಿರು ರೀತಿ ಸ್ಟೆಪ್ ಹಾಕಿ ಅಲ್ಲಿದ್ದವರಿಗೆ ಆಶ್ಚರ್ಯ ಮೂಡಿಸಿದ್ದಾರೆ. ಧ್ರುವ ಸರ್ಜಾ, ಮೇಘನಾ ಕೂಡ ರಾಯನ್ ನ ಡ್ಯಾನ್ಸ್ ನೋಡಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ತಮ್ಮ ತಂದೆಯ ಸಿನಿಮಾಗಳನ್ನ ತೋರಿಸಿ ಚಿರು ಅವರ ಹಾಡುಗಳನ್ನೇ ಕೇಳಿಸಿ ಚಿರು ಅವರ ನೆನಪು ಮಗನ ಮನಸ್ಸಿನಲ್ಲಿ ಸದಾ ಇರುವಂತೆ ನೋಡಿಕೊಂಡಿದ್ದಾರೆ. ರಾಯನ್ ಅವರನ್ನ ಕೂಡ ತಂದೆ ಚಿರಂಜೀವಿ ಸರ್ಜಾ ಅವರಂತೆ ದೊಡ್ಡ ನಟನಾಗಿ ಮಾಡಬೇಕು ಎನ್ನುವ ಉದ್ದೇಶದಿಂದ ಮೇಘನಾ ಈವಾಗಲೇ ಸಕಲ ತಯಾರಿ ನಡೆಸಿದ್ದಾರೆ.

ಇದನ್ನೂ ಕೂಡ ಓದಿ : ಪ್ರತೀದಿನ ಕೋತಿಗೆ ತಿಂಡಿ ಕೊಡುತ್ತಿದ್ದ ಬೀದಿಬದಿ ವ್ಯಾಪಾರಿ / ಅದಕ್ಕೆ ಕೋತಿ ಮಾಡಿದ್ದೇನು ಗೊತ್ತಾ.?

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply