Labour Card Scholarship : ಕಲಿಕಾ ಭಾಗ್ಯ ಯೋಜನೆ : ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನ ಸಹಾಯ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ – Apply Online

Labour Card Scholarship : ನಮಸ್ಕಾರ ಸ್ನೇಹಿತರೇ, ಶಾಲಾ-ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಶಿಕ್ಷಣಕ್ಕಾಗಿ ನೆರವಾಗಲು ಕರ್ನಾಟಕ ಸರ್ಕಾರದಿಂದ ನೀಡಲಾಗುವ ಶೈಕ್ಷಣಿಕ ಧನ ಸಹಾಯ ಅಂದ್ರೆ ವಿದ್ಯಾರ್ಥಿವೇತನವನ್ನ (Labour Card Scholarship 2024) ಹೇಗೆ ಅರ್ಜಿ ಸಲ್ಲಿಸುವುದು..? ಎನ್ನುವುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಶೈಕ್ಷಣಿಕ ಧನ ಸಹಾಯ ವಿದ್ಯಾರ್ಥಿವೇತನಕ್ಕಾಗಿ(Labour Card Scholarship 2024) ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಯೋಜನೆಯ ಪ್ರಯೋಜನ ಪಡೆಯಲು ಏನೆಲ್ಲಾ ಅರ್ಹತೆಗಳಿರಬೇಕು? ಹೇಗೆ ಅರ್ಜಿ ಸಲ್ಲಿಸುವುದು.? ಎಷ್ಟು ಶೈಕ್ಷಣಿಕ ಧನ ಸಹಾಯ ನೀಡಲಾಗುತ್ತದೆ.? ಎನ್ನುವ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ನೀವು ಸಂಪೂರ್ಣವಾಗಿ ಓದಿ. ಸರ್ಕಾರದ ಈ ಯೋಜನೆಯ ಪ್ರಯೋಜನವನ್ನ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಪಡೆಯುವಂತಾಗಲಿ.

WhatsApp Group Join Now
Telegram Group Join Now

ಲೇಬರ್ ಕಾರ್ಡ್ ಸ್ಕಾಲರ್ಷಿಪ್ (Labour Card Scholarship 2024) :-

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಹಲವಾರು ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ. ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕಲಿಕಾ ಭಾಗ್ಯ(Kalika Bhagya Scholarship) ಯೋಜನೆಯ ಮೂಲಕ ಶೈಕ್ಷಣಿಕ ಧನ ಸಹಾಯ ಅಂದ್ರೆ ವಿದ್ಯಾರ್ಥಿವೇತನವನ್ನು ನೀಡಿ ಪ್ರೋತ್ಸಾಹಿಸುತ್ತಿದೆ.

ಕಲಿಕಾ ಭಾಗ್ಯ ಯೋಜನೆಗೆ(Kalika Bhagya Scholarship) ನೀವು ಅರ್ಜಿ ಸಲ್ಲಿಸಬೇಕೆ? ನೀವು ಕೂಡ ನೊಂದಾಯಿತ ಕಟ್ಟಡ ಕಾರ್ಮಿಕರೆ.? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್. ಈ ಕಲಿಕಾ ಭಾಗ್ಯ ಯೋಜನೆಗೆ(Kalika Bhagya Scholarship) ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ ನೋಡೋಣ.

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯವನ್ನು(Kalika Bhagya Scholarship) ಪ್ರತಿ ವರ್ಷ ನೀಡಲಾಗುತ್ತಿದೆ. ಅರ್ಹ ಫಲಾನುಭವಿ ವಿದ್ಯಾರ್ಥಿಗಳು ಶೈಕ್ಷಣಿಕ ಧನ ಸಹಾಯವನ್ನ ಪಡೆದುಕೊಳ್ಳಬಹುದು.

ಶೈಕ್ಷಣಿಕ ಧನ ಸಹಾಯವನ್ನು ಪಡೆಯಲು ಎಲ್ಲಾ ಅರ್ಹ ಫಲಾನುಭವಿ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ (SSP) ಮೂಲಕ ಆನ್‌ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಬಹುದು. 2023-24 ನೇ ಸಾಲಿಗಾಗಿ ಈಗಾಗಲೇ ಎಸ್ಎಸ್ ಪಿ(SSP) ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಪುನಃ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

ಲೇಬರ್ ಕಾರ್ಡ್ ಸ್ಕಾಲರ್ಷಿಪ್ (Labour Card Scholarship 2024)

WhatsApp Group Join Now
Telegram Group Join Now

ಬೇಕಾಗುವ ದಾಖಲೆಗಳು :-

  1. ವಿದ್ಯಾರ್ಥಿಯ ಆಧಾ‌ರ್ ಕಾರ್ಡ್ ಸಂಖ್ಯೆ
  2. ಸ್ಪೂಡೆಂಟ್ ಐಡಿ
  3. ವ್ಯಾಸಂಗ ಪ್ರಮಾಣ ಪತ್ರ
  4. ನೋಂದಣಿದಾರರು ಮತ್ತು ಅವರ ಪತಿ ಅಥವಾ ಪತ್ನಿಯ ಆಧಾ‌ರ್ ಕಾರ್ಡ್ ಪ್ರತಿ
  5. ಮಂಡಳಿಯಿಂದ ನೀಡಲಾದ ನೋಂದಣಿ ಕಾರ್ಡ್
  6. ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ
  7. ನೋಂದಣಿದಾರರ ಬ್ಯಾಂಕ್ ಖಾತೆಯ ವಿವರ

ಅರ್ಹ ಫಲಾನುಭವಿ ವಿದ್ಯಾರ್ಥಿಗಳು ಅಗತ್ಯ ದಾಖಲೆಯನ್ನು ಒದಗಿಸಿ ಕಲಿಕಾ ಭಾಗ್ಯ(Kalika Bhagya Scholarship) ಯೋಜನೆಯ ಪ್ರಯೋಜನವನ್ನ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-05-2024

ಪ್ರಮುಖ ಆನ್ ಲೈನ್ ಲಿಂಕ್‌ಗಳು :-

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ : Apply ಮಾಡಿ

ಅಧೀಕೃತ ವೆಬ್ ಸೈಟ್ : karbwwb.karnataka.gov.in, ssp.postmatric.karnataka.gov.in

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply