Agriculture Land : ಜಮೀನಿಗೆ ಹೋಗಲು ರಸ್ತೆ, ದಾರಿ, ಕಾಲುದಾರಿ, ಬಂಡಿ ದಾರಿ, ಇಲ್ಲದವರಿಗೆ | ರಾತ್ರೋರಾತ್ರಿ ಗುಡ್ ನ್ಯೂಸ್ ಕೊಟ್ಟ ಸರ್ಕಾರ!

Agriculture Land : ನಮಸ್ಕಾರ ಸ್ನೇಹಿತರೇ, ಜಮೀನುಗಳಿಗೆ ಹೋಗುವ ರಸ್ತೆಗಳಿಗಾಗಿ ಸಾಕಷ್ಟು ಜಗಳಗಳನ್ನ ನೋಡಿದ್ದೇವೆ. ಯಾವ ಜಮೀನುಗಳಿಗೆ ಹೋಗಲು ರಸ್ತೆ ಅಥವಾ ದಾರಿ ಇಲ್ಲವೋ, ಅಂತಹ ಜಮೀನುಗಳ ಮಾಲೀಕರುಗಳಿಗೆ ರಾಜ್ಯ ಸರ್ಕಾರ ಹೊಸ ರೂಲ್ಸ್ ಜಾರಿಗೊಳಿಸಿ ರಾಜ್ಯದ ಎಲ್ಲ ರೈತರಿಗೆ ಸಿಹಿಸುದ್ಧಿ ನೀಡಿದೆ.

ಇನ್ನು ಮುಂದೆ ಯಾವ ಜಮೀನುಗಳಿಗೆ ಹೋಗಲು ರಸ್ತೆ, ದಾರಿ, ಕಾಲುದಾರಿ ಅಥವಾ ಬಂಡಿ ದಾರಿ ಇಲ್ಲವೋ ಅಂತಹ ಜಮೀನುಗಳಿಗೆ ರಸ್ತೆ ಮಾಡಿಕೊಡಲು ರಾಜ್ಯ ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ. ಯಾವ ಜಮೀನಿಗೆ ಹೋಗಲು ಎಷ್ಟು ಹೊಲಗಳನ್ನ ಅಥವಾ ಜಮೀನುಗಳನ್ನ ದಾಟಿಕೊಂಡು ಹೋಗುವಂತಹ ಜಮೀನುಗಳ ಮಾಲೀಕರು ಯಾವುದೇ ತಂಟೆ ತಕರಾರು ಮಾಡದಂತೆ ರಾಜ್ಯ ಸರ್ಕಾರ ಹೊಸ ರೂಲ್ಸ್ ಜಾರಿಗೊಳಿಸಿ ಆದೇಶವನ್ನು ಹೊರಡಿಸಲಾಗಿದೆ.

ಇದನ್ನೂ ಕೂಡ ಓದಿ : Bara Parihara Amount Failed : ನಿಮಗಿನ್ನೂ ಬರ ಪರಿಹಾರದ ಹಣ ಬ್ಯಾಂಕ್ ಖಾತೆಗೆ ಜಮಾ ಆಗದಿರಲು ಈ ತಪ್ಪುಗಳೇ ಕಾರಣ! ಸಂಪೂರ್ಣ ಮಾಹಿತಿ

ನಮ್ಮ ಜಮೀನುಗಳಿಗೆ ಹೋಗಲು ರಸ್ತೆ ಅಥವಾ ದಾರಿ ಇಲ್ಲ ಅಂದ್ರೆ ಹೇಗೆ ಮತ್ತು ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು? ಯಾವಾಗ ಬಂದು ನಮಗೆ ರಸ್ತೆ ಮಾಡಿಕೊಡುತ್ತಾರೆ. ಎಷ್ಟು ಅಗಲ ಮತ್ತು ಎಷ್ಟು ಉದ್ದದವರೆಗೆ ಮಾಡಿಕೊಡ್ತಾರೆ.? ಎಷ್ಟು ದಿನಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎನ್ನುವಂತಹ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಭೂಸ್ವಾಧೀನ ಕಾಯ್ದೆ ಬಂದ ನಂತರ ಕಾಲುದಾರಿ ಅಥವಾ ಬಂಡಿ ದಾರಿ ಬಹಳ ವರ್ಷಗಳಿಂದ ಇದ್ದರೆ ಅದನ್ನ ಮುಚ್ಚಿ ತಮ್ಮ ಸ್ವಂತ ಜಮೀನು ವಶಪಡಿಸಿಕೊಂಡಿರುವವರು ಸಾಕಷ್ಟು ಜನ ಇದ್ದಾರೆ. ಇದರಿಂದಾಗಿ ತಮ್ಮ ಜಮೀನಿಗೆ ಹೋಗಲು ಸಾಧ್ಯವಾಗದೇ ರೈತರು ಕಷ್ಟ ಪಡುವಂತೆ ಆಗಿದೆ. ಆದರೆ ಈಗ ಸಾರ್ವಜನಿಕ ರಸ್ತೆ ರದ್ದಾಗುವುದಿಲ್ಲ ಎಂದು ಹೈಕೋರ್ಟ್ ತೀರ್ಮಾನ ನೀಡಿದೆ.

ತುಮಕೂರಿನ ಎಪಿಎಂಸಿಗಾಗಿ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ನಂತರದ ದಿನಗಳಲ್ಲಿ ಅಲ್ಲಿಯ ಕಾಲು ದಾರಿಯನ್ನ ಮುಚ್ಚಲಾಗಿತ್ತು. 2019 ಫೆಬ್ರವರಿ 5 ರಂದು ಎಪಿಎಂಸಿಗೆ ನೋಟಿಸ್ ಕೊಡಲಾಗಿತ್ತು. ಇದೇ ಆಸ್ತಿ ಎಪಿಎಂಸಿ ಪಾಲಾಗಿದ್ದು, ಯಾವುದೇ ಕಾಲು ದಾರಿ ಅಥವಾ ಬಂಡಿದಾರಿಗೆ ಅವಕಾಶ ಇಲ್ಲ ಎಂದು ಎಪಿಎಂಸಿ ತಿಳಿಸಿತ್ತು. ಹೀಗಾಗಿ ಅದರ ವಿರುದ್ಧ ನೋಟಿಸ್ ಜಾರಿಗೊಳಿಸಲಾಗಿತ್ತು.

ಇದನ್ನೂ ಕೂಡ ಓದಿ : PM Suryodaya Yojana : ಉಚಿತ ಸೋಲಾರ್ ಮೆಲ್ಛಾವಣೆ ವಿತರಣೆ.! ಈ ಕೂಡಲೇ ಅರ್ಜಿ ಸಲ್ಲಿಸಿ ಉಚಿತ ಸೋಲಾರ್ ಮೇಲ್ಚಾವಣಿ ಪಡೆದುಕೊಳ್ಳಿ.!

ಭೂ ಕಂದಾಯ ಇಲಾಖೆ ಕಾಯ್ದೆ ಸೆಕ್ಷನ್ 67 ರ ಅಡಿಯಲ್ಲಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿರುವಂತಹ ರಸ್ತೆಗಳು, ಗುಂಡಿಗಳು, ಬೀದಿಗಳು ಸರ್ಕಾರಕ್ಕೆ ಸೇರಿದೆ. ಅದನ್ನ ಯಾರು ಕೂಡ ತನ್ನ ಸ್ವಂತ ಆಸ್ತಿ ಎಂದು ಪರಿಗಣಿಸುವಂತಿಲ್ಲ. ಅದು ಸಾರ್ವಜನಿಕರಿಗೆ ಸೇರಬೇಕಾಗಿದ್ದು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ತುಮಕೂರು ತಾಲೂಕಿನ ಗುಬ್ಬಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅರ್ಜಿ ವಿಚಾರಣೆ ನಡೆಸಿದ ಬಳಿಕ ನ್ಯಾಯಮೂರ್ತಿ ಗೋವಿಂದ್ ರಾಜು ಏಕಸದಸ್ಯ ಪೀಠ ತೀರ್ಪನ್ನ ನೀಡಿದೆ.

ಬಿ ಖರಾಬು ವ್ಯಾಪ್ತಿಯಲ್ಲಿ ಬರುವಂತಹ ಆಸ್ತಿಗೂ ಪಬ್ಲಿಕ್ ರೈಟ್ಸ್ ರದ್ದಾಗುವುದಿಲ್ಲ ಎಂದು ತಿಳಿಸಲಾಗಿದೆ. ಹಾಗಾಗಿ ಯಾರೇ ಇದು ತನ್ನ ಪ್ರೈವೇಟ್ ಪ್ರಾಪರ್ಟಿ ಎಂದು ಕಾಲುದಾರಿ ಇರುವ ಬಂಡಿ ದಾರಿಯನ್ನ ಮುಚ್ಚುವಂತಿಲ್ಲ. ಹೀಗಾಗಿ ರೈತರು ಇನ್ನು ಮುಂದೆ ತಮ್ಮ ಜಮೀನಿಗೆ ಹೋಗಲು ಕಾಲುದಾರಿ ಇಲ್ಲ ಎಂದು ಯೋಚನೆ ಮಾಡುವಂತಿಲ್ಲ. ಕಾನೂನು ಇದಕ್ಕೆ ಪರಿಹಾರ ನೀಡಿದ್ದು, ಒಂದು ವೇಳೆ ಈಗಾಗಲೇ ಇರುವ ದಾರಿಯನ್ನು ಮುಚ್ಚಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ದೂರು ನೀಡಬಹುದು.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply