Ration Card Update : ರೇಷನ್ ಕಾರ್ಡ್ ಇದ್ದವರಿಗೂ ಇಲ್ಲದವರಿಗೂ | ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್

Ration Card Update : ನಮಸ್ಕಾರ ಸ್ನೇಹಿತರೇ, ರೇಷನ್ ಕಾರ್ಡ್ ಇಲ್ಲದವರಿಗೆ, ಹೊಸ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಬಯಸುತ್ತಿರುವವರಿಗೆ, ರೇಷನ್ ಕಾರ್ಡ್‌ನಿಂದ ಹೆಸರು ತೆಗೆಸುವುದು ಇದ್ದರೆ ಅಥವಾ ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ನೀಡಿದೆ. ಮತ್ತು ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಬಹಳಷ್ಟು ದಿನಗಳಿಂದ ಕಾಯುತ್ತ ಕುಳಿತವರಿಗೆ ಹೊಸ ರೇಷನ್ ಕಾರ್ಡ್ ಗಳನ್ನು ಕೂಡ ನೀಡಲಾಗುತ್ತದೆ.

ಇದಕ್ಕಾಗಿ ಬೇಕಾಗುವ ದಾಖಲೆಗಳೇನು.? ಎಲ್ಲಿ ಮತ್ತು ಹೇಗೆ ಮಾಡಿಸಬೇಕು.? ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಅನ್ನಭಾಗ್ಯ ಯೋಜನೆಗೆ ಸಂಬಂಧಪಟ್ಟ ಹಾಗೆ ಹೊಸ ಅಪ್ ಡೇಟ್ ಸಿಕ್ಕಿದೆ. ಕಳೆದ ಎಂಟು ತಿಂಗಳುಗಳಿಂದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದೆ. 10 ಕೆಜಿ ಅಕ್ಕಿಯನ್ನ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರ ಒದಗಿಸಬೇಕಿತ್ತು. ಆದರೆ ಈಗ ಸದ್ಯಕ್ಕೆ ಕೇಂದ್ರ ಸರ್ಕಾರದಿಂದ ಸಿಗುತ್ತಿರುವ ಐದು ಕೆಜಿ ಅಕ್ಕಿ ಮಾತ್ರ ಪಡೆದುಕೊಳ್ಳಬಹುದಾಗಿದ್ದು, ಇನ್ನು ಐದು ಕೆಜಿ ಅಕ್ಕಿ ಬದಲು ರಾಜ್ಯ ಸರ್ಕಾರ ಹಣವನ್ನ ಜಮಾ ಮಾಡುತ್ತಿದೆ.

ಇದನ್ನೂ ಕೂಡ ಓದಿ : Scholarship : ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ₹20,000 ವರೆಗೆ ಸ್ಕಾಲರ್ಶಿಪ್! ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು.?

ಪ್ರತಿ ಕೆಜಿ ಅಕ್ಕಿಗೆ ₹34 ರೂಪಾಯಿಗಳು ಅಂದರೆ ಐದು ಕೆಜಿ ಅಕ್ಕಿಗೆ ₹170 ರೂಪಾಯಿಗಳನ್ನ ಜಮಾ ಮಾಡಲಾಗುತ್ತಿದೆ. ಮನೆಯಲ್ಲಿ ಎಷ್ಟು ಸದಸ್ಯರಿದ್ದಾರೋ ಅಷ್ಟೂ ಸದಸ್ಯರಿಗೂ ಐದು ಕೆಜಿ ಅಕ್ಕಿ ಹಣ ಜಮಾ ಆಗುತ್ತದೆ. ಹಾಗಾಗಿ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಸಾವಿರಗಟ್ಟಲೆ ಹಣವನ್ನ ಪಡೆದುಕೊಳ್ಳುತ್ತಿರುವವರಿದ್ದರೆ ಈ ಕೆಲಸ ಮಾಡುವುದು ಕಡ್ಡಾಯ.

ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುವುದರಿಂದ ಇದು ಡಿಜಿಟಲ್ ಪ್ರಕ್ರಿಯೆ ಆಗಿರುತ್ತದೆ. ಹಾಗಾಗಿ ಸರಿಯಾಗಿ ನಿಮ್ಮ ಬ್ಯಾಂಕ್ ಖಾತೆಗೆ ಅಗತ್ಯ ಇರುವ ಅಪ್‌ಡೇಟ್‌ಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಆಧಾರ್ ಸೀಡಿಂಗ್, ಈ-ಕೆವೈಸಿ ಅಪ್ಡೇಟ್, ಎನ್‌ಪಿಸಿಐ ಮ್ಯಾಪಿಂಗ್ ಈ ಮೊದಲಾದ ಅಪ್‌ಡೇಟ್‌ಗಳು ಆಗಬೇಕು. ಇಲ್ಲವಾದರೆ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದಿಲ್ಲ. ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎನ್ನುವುದನ್ನ. ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಮೂಲಕ ಅಥವಾ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಡಿಬಿಟಿ, ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಮೂಲಕ ತಿಳಿದುಕೊಳ್ಳಬಹುದು.

ಇದನ್ನೂ ಕೂಡ ಓದಿ : Bara Parihara Amount Status : ಬರ ಪರಿಹಾರ ಹಣ ಪಡೆದ ರೈತರ ಪಟ್ಟಿ | ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ

ಮೇ ತಿಂಗಳ ಹಣ ಬಿಡುಗಡೆ ಇದೇ ತಿಂಗಳು ಹದಿನೈದನೇ ತಾರೀಖಿಗೆ ಒಂಬತ್ತನೇ ಕಂತಿನ ಹಣ ಬಿಡುಗಡೆ ಆಗಲಿದೆ. ತಿಂಗಳು ಮುಗಿಯುವುದರೊಳಗೆ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತದೆ. ಪ್ರತಿ ಕುಟುಂಬದಲ್ಲಿಯೂ ಮನೆಯ ಯಜಮಾನಿಯ ಖಾತೆಗೆ ಹಣ ಜಮಾ ಆಗುತ್ತದೆ. ಆದರೆ ಇತ್ತೀಚಿನ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಕ್ಕೆ. ರೇಷನ್ ಕಾರ್ಡ್ ನಲ್ಲಿ ಮಹಿಳೆಯರ ಹೆಸರು ಪ್ರಧಾನವಾಗಿ ಇರಬೇಕು ಎನ್ನುವ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಯ ಹಣ ಮಹಿಳೆಯರ ಖಾತೆಗೂ ಜಮಾ ಆಗುತ್ತಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply