Crop Insurance : ನಿಮ್ಮ ಖಾತೆಗೆ ಹಣ ಜಮಾ ಆಗಿದ್ಯಾ.? ರೈತರ ಖಾತೆಗೆ 35 ಕೋಟಿ ಬೆಳೆ ವಿಮೆ / ಯಾವ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಜಮಾ ಆಗಿದೆ ಗೊತ್ತಾ.?

Crop Insurance : ನಮಸ್ಕಾರ ಸ್ನೇಹಿತರೇ, 35 ಕೋಟಿ ಬೆಳೆವಿಮೆ ಹಣ ಬಿಡುಗಡೆ ಆಗಿದೆ. ಹೌದು, ಯಾವ ರೈತರಿಗೆ ಎಷ್ಟು ಜಮಾ ಆಗಿದೆ ಎಂಬುದನ್ನ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಯಾವ ರೈತರು ವಿವಿಧ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿದ್ದಾರೋ, ಅಂತಹ ರೈತರಿಗೆ ಸಂತಸದ ಸುದ್ದಿ ಸಿಕ್ಕಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಮುಂಗಾರು ಹಂಗಾಮಿನ ಬೆಳೆ ವಿಮೆ ಮಾಡಿಸಿದ ರೈತರ ಖಾತೆಗೆ ಈಗ ಬೆಳೆಯ ಹಣ ಜಮೆಯಾಗಿದೆ. ಯಾವ ಯಾವ ರೈತರಿಗೆ ಬೆಳೆ ವಿಮೆ ಜಮೆಯಾಗಿದೆ. ಯಾವ ಬೆಳೆಗಳಿಗೆ ಬೆಳೆವಿಮೆ ಹಣ ಜಮೆ ಆಗಿದೆ ಎಂಬುದನ್ನ ರೈತರು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು. ಯಾವೆಲ್ಲಾ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಹಣ ಜಮಾ ಆಗಿದೆ ಎಂಬುದನ್ನ ಇಲ್ಲಿ ನೋಡೋಣ.

ಇದನ್ನೂ ಕೂಡ ಓದಿ : Shrama Shakthi Scheme : ಕರ್ನಾಟಕ ಶ್ರಮ ಶಕ್ತಿ ಯೋಜನೆ ಮೂಲಕ ₹50,000/- ಹಣ ಸಿಗಲಿದೆ.! ಅರ್ಜಿ ಸಲ್ಲಿಸುವುದು ಹೇಗೆ.?

ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕಿಗೆ 2023-24 ನೇ ಸಾಲಿನ ಭತ್ತ ಹಾಗೂ ಗೋವಿನ ಜೋಳದ ಬೆಳೆ ಹಾನಿ ವಿಮೆ 41ಕೋಟಿ ಹಣ ಜಮೆಯಾಗಿದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಶಾಸಕ ಶಿವರಾಂ ಹೆಬ್ಬಾರ್ ಅವರು ತಿಳಿಸಿದ್ದಾರೆ. ಕಳೆದ ಸಾಲಿನಲ್ಲಿ ಮುಂಗಾರು ಮಳೆ ಕೊರತೆಯಿಂದ ಭತ್ತ, ಗೋವಿನಜೋಳ ಬೆಳೆಗೆ ಹಾನಿಯಾಗಿ ರೈತರ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಈ ಬೆಳೆ ಬಿಡುಗಡೆಯಿಂದಾಗಿ ಭತ್ತ, ಗೋವಿನಜೋಳ ಬೆಳೆದು ಜೀವನ ಸಾಗಿಸುತ್ತಿದ್ದ ಹಲವಾರು ರೈತರಿಗೆ ಆರ್ಥಿಕ ಶಕ್ತಿ ಬಂದಂತಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಕೂಡ ಓದಿ : RGRHCL : ಗ್ರಾಮೀಣ ಜನತೆಗೆ ಗುಡ್ ನ್ಯೂಸ್.! ರಾಜೀವ್ ಗಾಂಧಿ ವಸತಿ ನಿಗಮದಿಂದ ಹೊಸ ಮನೆಗಳಿಗಾಗಿ ಆನ್ಲೈನ್ ಅರ್ಜಿ ಪ್ರಾರಂಭ

ಯಲ್ಲಾಪುರ ತಾಲೂಕಿನಲ್ಲಿ 84 ಕೋಟಿ ಹಾಗೂ ಮುಂಡಗೋಡು ತಾಲೂಕಿನಲ್ಲಿ 18 ಕೋಟಿ ಹಾಗು ಬನವಾಸಿ ಹೋಬಳಿಯಲ್ಲಿ 15 ಕೋಟಿ ಸೇರಿದಂತೆ ಒಟ್ಟು 35 ಕೋಟಿ ರೂಪಾಯಿ ಹಣ ರೈತರ ಖಾತೆಗೆ ಜಮಾ ಆಗಿದೆ. ಸರ್ಕಾರದ ಮಟ್ಟದಲ್ಲಿ ವಿಶೇಷ ಪ್ರಯತ್ನ ನಡೆಸಿ ಈ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚಿನ ಪರಿಹಾರ ಒದಗಿಸಲಾಗಿದೆ. ವಿಮಾ ಕಂಪನಿಯ ಮಾನದಂಡ ಅನ್ವಯವಾಗಿ ಉತ್ತರ ಕನ್ನಡ ಜಿಲ್ಲೆಯ ಭತ್ತ ಹಾಗೂ ಗೋವಿನಜೋಳವನ್ನ ಬೆಳೆದ ರೈತರಿಗೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಮೂಲಕ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಮೊತ್ತವನ್ನು ನೇರವಾಗಿ ವರ್ಗಾಯಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply