Pahani RTC : ಜಮೀನಿನ ಪಹಣಿ ತಂದೆ ತಾತ ಮುತ್ತಾತನ ಹೆಸರಲ್ಲಿ ಇದ್ದರೆ | ಒಂದೇ ದಿನದಲ್ಲಿ ನಿಮ್ಮ ಹೆಸರಿಗೆ ವರ್ಗಾವಣೆ

Pahani RTC : ನಮಸ್ಕಾರ ಸ್ನೇಹಿತರೇ, ನಿಮ್ಮ ಜಮೀನಿನ ಪಹಣಿಯು ತಂದೆ, ತಾತ ಅಥವಾ ಮುತ್ತಾತನ ಹೆಸರಿನಲ್ಲಿದ್ದು, ಪ್ರಸ್ತುತ ಹೆಸರಲ್ಲಿ ಜಮೀನು ಪಹಣಿಯನ್ನ ವರ್ಗಾವಣೆ ಮಾಡಿಕೊಳ್ಳುವಲ್ಲಿ ನಿಮಗೆ ಸಾಕಷ್ಟು ತೊಂದರೆಗಳು ಇದ್ದರೆ ರಾಜ್ಯ ಸರ್ಕಾರ ಇಂತಹ ರೈತರಿಗಾಗಿ ಸಿಹಿಸುದ್ಧಿ ನೀಡಿದೆ.

ನಿಮ್ಮ ಜಮೀನಿನ ಪಹಣಿಯಲ್ಲಿ ಪೂರ್ವಜರ ಹೆಸರು ಇದ್ರೆ ಅದನ್ನ ನೇರವಾಗಿ ಪ್ರಸ್ತುತ ಉಳುಮೆ ಮಾಡುತ್ತಿರುವ ರೈತರ ಹೆಸರಿಗೆ, ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ರೈತನು ತನ್ನ ಹೆಸರಿಗೆ ಮಾಡಿಕೊಳ್ಳಬಹುದಾಗಿದೆ. ರಾಜ್ಯದಲ್ಲಿ ಸಾಕಷ್ಟು ರೈತರ ಜಮೀನುಗಳು ಪೂರ್ವಜರ ಹೆಸರಿನಲ್ಲಿ ಇರುವ ಕಾರಣಕ್ಕಾಗಿ ಸರ್ಕಾರದಿಂದ ನೀಡಲಾಗುತ್ತಿರುವ ಸಾಕಷ್ಟು ಯೋಜನೆಗಳು ರೈತರಿಗೆ ದೊರೆಯುತ್ತಿಲ್ಲ ಎನ್ನುವ ಕಾರಣಕ್ಕಾಗಿ ರಾಜ್ಯದ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ರೈತರಿಗೆ ಸಿಹಿ ಸುದ್ದಿಯನ್ನ ಕೊಟ್ಟಿದ್ದಾರೆ.

ಇದನ್ನೂ ಕೂಡ ಓದಿ : Bara Parihara Amount Failed : ನಿಮಗಿನ್ನೂ ಬರ ಪರಿಹಾರದ ಹಣ ಬ್ಯಾಂಕ್ ಖಾತೆಗೆ ಜಮಾ ಆಗದಿರಲು ಈ ತಪ್ಪುಗಳೇ ಕಾರಣ! ಸಂಪೂರ್ಣ ಮಾಹಿತಿ

ನೀವು ಕೂಡ ರೈತರಾಗಿದ್ದಾರೆ ಅಥವಾ ನಿಮ್ಮ ಜಮೀನು ಕೂಡ ತಂದೆ, ತಾತ-ಮುತ್ತಾತನ ಹೆಸರಿನಲ್ಲಿ ಹೀಗೆ ಪೂರ್ವಜರ ಹೆಸರಿನಲ್ಲಿ ಇದ್ದರೆ ಅದನ್ನು ನಿಮ್ಮ ಹೆಸರಿಗೆ ಹೇಗೆ ಸರಳ ವಿಧಾನಗಳ ಮೂಲಕ ವರ್ಗಾವಣೆ ಮಾಡಿಕೊಳ್ಳಬಹುದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ.

ಹಿಂದಿನ ಪೂರ್ವಜರ ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ ಸೇರಿದಂತೆ ಆಸ್ತಿ ಖರೀದಿ ಪತ್ರ ಹೀಗೆ ಸಾಕಷ್ಟು ದಾಖಲೆ ಪತ್ರಗಳು ಈಗ ಪ್ರಸ್ತುತ ಉಳುಮೆ ಮಾಡುತ್ತಿರುವ ರೈತರಿಗೆ ದೊರೆಯದಿರುವ ಕಾರಣಕ್ಕಾಗಿ ಹಾಗೂ ಸಾಕಷ್ಟು ತೊಂದರೆಗಳು ಇರುವ ಕಾರಣಕ್ಕಾಗಿ ರೈತರ ಹೆಸರುಗಳಿಗೆ ಆಸ್ತಿ ವರ್ಗಾವಣೆಯಾಗುವಲ್ಲಿ ವಿಫಲವಾಗಿದೆ. ರಾಜ್ಯದ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ಎಲ್ಲ ರೈತರಿಗೂ ಬಂಪರ್ ಕೊಡುಗೆಯನ್ನು ನೀಡಿದ್ದಾರೆ.

ರೈತರ ಜಮೀನಿನ ಆಸುಪಾಸು ಇರುವ ರಸ್ತೆ, ನೀರು ಹೋಗುವ ಕಾವಲು, ಹಳ್ಳ, ಬೇಲಿ ಮತ್ತು ಜಮೀನಿನಲ್ಲಿ ಇರುವಂತಹ ಮರಗಳು ತನ್ನ ಜಮೀನಿಗೆ ಬರುವಂತೆ ಇದು ನನ್ನ ಪಾಲು ಎಂದು ಹಲವು ಬಾರಿ ರೈತರು ಜಗಳಕ್ಕಿಳಿಯುವ ಪ್ರಕರಣಗಳು ದಾಖಲಾಗುತ್ತೆ. ಈ ಸಮಸ್ಯೆಯನ್ನ ಬಗೆಹರಿಸುವ ನಿಟ್ಟಿನಲ್ಲಿ ಕಂದಾಯ ಸಚಿವರು ರಾಜ್ಯದಾದ್ಯಂತ ಇರುವ ಎಲ್ಲ ರೈತರಿಗೆ ಜಮೀನಿನ ದಾಖಲೆ ಪತ್ರಗಳನ್ನ ಡಿಜಿಟಲೀಕರಣ ಮಾಡಲು ಮುಂದಾಗಿದ್ದಾರೆ.

ಇದನ್ನೂ ಕೂಡ ಓದಿ : Ration Card Update : ನಿಮಗಿನ್ನೂ ರೇಷನ್ card ಸಿಕ್ಕಿಲ್ವಾ.? ನೀವು ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೆ.?

ಜಮೀನು ದಾನದ ರೀತಿ, ಕ್ರಯದ ರೀತಿ ವಿಭಾಗ ರೂಪದಲ್ಲಿ ಪಿತ್ರಾರ್ಜಿತ ಅಥವಾ ಪೌತಿ ಖಾತೆಯ ರೂಪದಲ್ಲಿ ಒಂದು ರೈತನಿಂದ ಮತ್ತೊಂದು ರೈತನಿಗೆ ಆಸ್ತಿಯ ಬದಲಾವಣೆ ಉಂಟಾಗುತ್ತದೆ. ಹಿಂದೆಲ್ಲ ಎಲ್ಲ ಈ ಮಾಹಿತಿಗಳನ್ನು ಕಾಗದ ರೂಪದಲ್ಲಿರಿಸಿಕೊಳ್ಳುತ್ತಿದ್ದರು, ಆದರೆ ಅದರ ರೀತಿಯಲ್ಲಿ ಸರಿಯಾಗಿ ಯಾರಿಗೆ ಎಷ್ಟು ಭಾಗದ ಜಮೀನು ಸೇರ್ಪಡೆಯಾಗುತ್ತೆ ಎಂಬುದನ್ನ ನಮೂದಿಸುತ್ತಿರಲಿಲ್ಲ. ಹೀಗಾಗಿ ಈ ಎಲ್ಲ ಸಮಸ್ಯೆಗಳನ್ನ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪಹಣಿಯನ್ನ ಡಿಜಿಟಲೀಕರಣ ಮಾಡಲು ಮುಂದಾಗಿದ್ದಾರೆ.

ಈ ದಾಖಲಾತಿಗಳನ್ನ ನೀಡಿ ಸುಲಭವಾಗಿ ಪಹಣಿ ವರ್ಗಾವಣೆ ಮಾಡಿಕೊಳ್ಳಿ. ಜಮೀನಿನ ಮಾಲೀಕರು ತಮ್ಮ ಜಮೀನ ಕುರಿತಾದ ಎಲ್ಲ ಮಾಹಿತಿಯನ್ನ ಮೊಬೈಲ್ನಲ್ಲಿ ತಿಳಿಯಬಹುದಾದಂತಹ ಸೇವೆಯನ್ನ ರಾಜ್ಯ ಸರ್ಕಾರ ರೈತರಿಗೆ ಒದಗಿಸಿಕೊಡುತ್ತಿದೆ. ಹೀಗಾಗಿ ರಾಜ್ಯದ ರೈತರ ಜಮೀನಿನ ಮಾಹಿತಿಯನ್ನ ಹಾಗು ಅಳತೆಯನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡಲು ಯೋಜನೆ ರೂಪಿಸುತ್ತಿದ್ದಾರೆ. ಹಾಗು ಈ ಪ್ರಕ್ರಿಯೆಯನ್ನು 2024 ರೊಳಗೆ ಪೂರ್ಣಗೊಳಿಸುವ ಉದ್ದೇಶವನ್ನ ಕಂದಾಯ ಇಲಾಖೆ ಹೊಂದಿದೆ.

ಇದನ್ನೂ ಕೂಡ ಓದಿ : HSRP : ಮೇ 31 ರಿಂದ ಎಲ್ಲಾ ವಾಹನಸವಾರರಿಗೆ ಬಿಗ್ ಶಾಕಿಂಗ್ ನ್ಯೂಸ್ / HSRP ನಂಬರ್ ಪ್ಲೇಟ್ ₹1,000 ದಂಡ ಘೋಷಣೆ.!

ಇನ್ಮುಂದೆ ರಾಜ್ಯದ ಎಲ್ಲ ರೈತರ ಜಮೀನಿನ ಮಾಹಿತಿ ಡಿಜಿಟಲ್ ರೂಪದಲ್ಲಿ ಲಭ್ಯವಿರಲಿದೆ. ರಾಜ್ಯದ ಹಲವು ಕಡೆಗಳಲ್ಲಿ ಈ ಕಾರ್ಯ ಜಾರಿಗೆ ಬಂದಿದ್ದು, ಡಿಜಿಟಲ್ ರೂಪದಲ್ಲಿ ರೈತರ ಜಮೀನನ್ನ ಸ್ಕ್ಯಾನ್ ಮಾಡಿ ಅದರ ದಾಖಲೆ ಸಂಗ್ರಹಣೆ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ರೈತರು ತಮ್ಮ ಮೊಬೈಲ್‌ಗಳಲ್ಲಿಯೇ ಜಮೀನಿನ ಕುರಿತಾದ ಎಲ್ಲ ವಿವರಗಳನ್ನು ತಿಳಿಯಬಹುದು ಹಾಗು ಪಹಣಿ ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿನದ್ದು, ಅವರು ಮರಣ ಹೊಂದಿದರೆ ಪ್ರಕರಣ ಪತ್ರವನ್ನು ಒದಗಿಸಿ ಸುಲಭವಾಗಿ ನಿಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply