Govt Updates : ಜೂನ್ 1ರಿಂದ 5 ಹೊಸ ನಿಯಮಗಳು ಜಾರಿ ಎಲ್ಲಾ ಸಾರ್ವಜನಿಕರ ಗಮನಕ್ಕೆ | LPG gas, Driving licence, HSRP Number

Govt Updates : ನಮಸ್ಕಾರ ಸ್ನೇಹಿತರೇ, ಜೂನ್ ಒಂದರಿಂದ ಐದು ಹೊಸ ರೂಲ್ಸ್ ಜಾರಿಗೆ ಬರುತ್ತಿವೆ. ಎಲ್ಲ ಸಾರ್ವಜನಿಕರಿಗೂ ಈ ಐದು ಹೊಸ ನಿಯಮಗಳು ಅನ್ವಯವಾಗಲಿದ್ದು, ದೊಡ್ಡ ಬದಲಾವಣೆಗಳಾಗಲಿವೆ. ಜನಸಾಮಾನ್ಯರ ಜೀವನಮಟ್ಟದಲ್ಲಿ ಅಗತ್ಯವಾಗಿರುವ ಎಲ್ಲ ವಸ್ತುಗಳು ಸೇರಿದಂತೆ ವಿವಿಧ ಇಲಾಖೆಗಳು ಮತ್ತು ಜನಸಾಮಾನ್ಯರ ಜೀವನದ ಮೇಲೆ ಪರಿಣಾಮ ಬೀರುವಂತೆ ಐದು ರೀತಿಯ ದೊಡ್ಡ ಬದಲಾವಣೆಯನ್ನ ಜೂನ್ ಒಂದರಿಂದ ಅನ್ವಯವಾಗಲಿದೆ. ಇದೇ ಜೂನ್ ಒಂದರಿಂದ ಬದಲಾಗುತ್ತಿರುವ ಐದು ದೊಡ್ಡ ಹೊಸ ನಿಯಮಗಳು ಯಾವುದು.? ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಯಾವುದರ ಬೆಲೆ ಏನಾಗುತ್ತದೆ? ಎಲ್ಲ ಸಂಪೂರ್ಣ ಮಾಹಿತಿ ತಿಳಿಯೋಣ.

ಇದನ್ನೂ ಕೂಡ ಓದಿ : FID Number : ನೀವು ಫ್ರೂಟ್ಸ್ ಐಡಿ ಹೊಂದಿದ್ದೀರಾ.?ನಿಮ್ಮ ಹೆಸರಿಗೆ FID ಇದ್ದರೆ ಬರ ಪರಿಹಾರ ಹಣ.! ನಿಮ್ಮ FID ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ

ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲನೇ ದಿನ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ನಿಗದಿಪಡಿಸುತ್ತದೆ ಎಂಬುದನ್ನು ಗಮನಿಸುವುದು ಅತ್ಯಗತ್ಯ. ಮೇ ತಿಂಗಳಲ್ಲಿ ಸಂಸ್ಥೆಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿತ್ತು. ಆದರೂ ತೈಲ ಸಂಸ್ಥೆಗಳು ಜೂನ್ ಒಂದರಂದು ಮತ್ತೆ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಲಿವೆ. ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ನಿರ್ಧರಿಸುತ್ತವೆ. 14 ಕೆಜಿ ದೇಶೀಯ ಮತ್ತು 19 ಕೆಜಿ ವಾಣಿಜ್ಯ ಸಿಲಿಂಡರ್ ಗಳ ಬೆಲೆ ಹಾಗು ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಗಳಲ್ಲಿ ಜೂನ್ ಮೊದಲನೇ ತಾರೀಖಿನಂದು ಬದಲಾವಣೆಯಾಗುತ್ತವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಬ್ಯಾಂಕ್ ಹಾಲಿಡೇ ಪಟ್ಟಿಯ ಪ್ರಕಾರ ಜೂನ್ ನಲ್ಲಿ 10 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇದು ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರದ ರಜಾ ದಿನಗಳನ್ನು ಒಳಗೊಂಡಿದೆ. ಆದರೆ ಈ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.

ಇದನ್ನೂ ಕೂಡ ಓದಿ : Free Borewell : ನಿಮಗೆ ಉಚಿತ ಬೋರ್ ವೆಲ್ ಬೇಕಾ.? ಈ ಕೂಡಲೇ ಅರ್ಜಿ ಸಲ್ಲಿಸಿ.! ಡೈರೆಕ್ಟ್ ಲಿಂಕ್ ಇಲ್ಲಿದೆ

ಹೊಸ ಡ್ರೈವಿಂಗ್ ಲೈಸನ್ಸ್ ನಿಯಮಗಳು ಜೂನ್ ತಿಂಗಳಿನಿಂದ ಅನ್ವಯವಾಗಲಿದೆ. ಹೊಸ ನಿಯಮದ ಪ್ರಕಾರ ಅತೀ ವೇಗದಲ್ಲಿ ವಾಹನ ಚಲಾಯಿಸಿದ್ರೆ ಸಾವಿರದಿಂದ ₹2000 ರೂಪಾಯಿವರೆಗೆ ದಂಡ ತೆರಬೇಕಾಗಬಹುದು. ಅದೇ ಸಮಯದಲ್ಲಿ ಪರವಾನಿಗೆ ಇಲ್ಲದೇ ವಾಹನ ಚಲಾಯಿಸಿದರೆ ₹500 ದಂಡವನ್ನ ಪಾವತಿಸಬೇಕಾಗುತ್ತದೆ.

ಇದಲ್ಲದೇ ಚಾಲಕ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದರೆ ದಂಡದ ಮೊತ್ತ ಈಗ ಇರುವುದಕ್ಕಿಂತ ಹೆಚ್ಚಾಗುತ್ತದೆ. ಭಾರತದಲ್ಲಿ ಡ್ರೈವಿಂಗ್ ಲೈಸನ್ಸ್ ಪಡೆಯಲು 18 ವರ್ಷ ಪೂರ್ಣಗೊಂಡಿರಬೇಕು ಎಂಬುದು ಹಳೆಯ ನಿಯಮ. ಹೊಸ ನಿಯಮಗಳ ಅಡಿಯಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದರೆ ₹25,000/- ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.

ಇದನ್ನೂ ಕೂಡ ಓದಿ : Bele Parihara Payment : ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ.! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಬರಪರಿಹಾರ ಹಣ ನಿಮಗೆ ಬರಲ್ಲ.! 

ಜೂನ್ ಒಂದರಿಂದ ಖಾಸಗಿ ಡ್ರೈವಿಂಗ್ ತರಬೇತಿ ಕೇಂದ್ರಗಳಲ್ಲಿ ಡ್ರೈವಿಂಗ್ ಪರೀಕ್ಷೆ ನಡೆಸಬಹುದು. ಅಲ್ಲದೆ ಅಪ್ರಾಪ್ತ ವಯಸ್ಕರು ಚಾಲನೆ ಮಾಡುವಾಗ ಅಪಘಾತ ಉಂಟು ಮಾಡಿದರೆ ಅವರು ಇಪ್ಪತೈದು ವರ್ಷ ವಯಸ್ಸಿನವರಿಗೆ ಚಾಲನಾ ಪರವಾನಗಿಯನ್ನು ಪಡೆಲು ಅರ್ಹರಾಗಿರುವುದಿಲ್ಲ. ಹೆಚ್ಚುವರಿಯಾಗಿ ಅವರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಬಹುದು. ಅವರ ಪೋಷಕರನ್ನ ಜೈಲಿಗೆ ಕಳುಹಿಸಲಾಗುತ್ತದೆ.

ಜೂನ್ 14 ರ ಮೊದಲು ಆಧಾರ್ ಕಾರ್ಡ್ ನವೀಕರಿಸದಿದ್ದರೆ ಮುಂದೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸರಳವಾಗಿ ಹೇಳುವುದಾದರೆ ಜೂನ್ ಹದಿನಾಲ್ಕರ ನಂತರ ಆಧಾರ್ ಕಾರ್ಡ್ ನವೀಕರಿಸಲು ಶುಲ್ಕ ವಿಧಿಸಲಾಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply