Drought Fund : ಬರ ಪರಿಹಾರ ಹಣ ಪಡೆದ ರೈತರ ಖಾತೆಗಳಿಗೆ | ರಾಜ್ಯ ಸರ್ಕಾರದಿಂದ ಜೂನ್ 1ಕ್ಕೆ 3ನೇ ಕಂತಿನ ಹಣ ಬಿಡುಗಡೆ

Drought Fund : ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ರೈತರ ಖಾತೆಗಳಿಗೆ ಬರ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಈ ಹಣ ಪಡೆದ ಎಲ್ಲ ರೈತರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಹೌದು, ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿರುವ ಬರ ಪರಿಹಾರ ಪಡೆದಿರುವ ರೈತರ ಖಾತೆಗಳಿಗೆ ತಲಾ ₹3,000 ಹಣ ಜಮೆ ಮಾಡಲು ನಿರ್ಧಾರವನ್ನ ತೆಗೆದುಕೊಂಡು ಆದೇಶ ಹೊರಡಿಸಿದೆ.

ಅಂದರೆ ಈಗಾಗಲೇ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಹಣ ಪಡೆದ ರೈತರ ಖಾತೆಗಳಿಗೆ ಮತ್ತೊಮ್ಮೆ ರಾಜ್ಯ ಸರ್ಕಾರದಿಂದ ₹3,000 ಹಣ ಹಾಕಲು ಮಹತ್ವದ ಕ್ರಮ ತೆಗೆದುಕೊಂಡಿದೆ. ಕರ್ನಾಟಕ ರಾಜ್ಯದಲ್ಲಿರುವ ಬರ ಪೀಡಿತ ತಾಲೂಕುಗಳ ರೈತರ ಖಾತೆಗಳಿಗೆ ಅದರಲ್ಲೂ 16 ಲಕ್ಷ ರೈತರ ಖಾತೆಗಳಿಗೆ ತಲಾ ₹3,000 ಹಣದಂತೆ ರೈತರ ಖಾತೆಗಳಿಗೆ ಬಿಡುಗಡೆ ಮಾಡಲು ಮಹತ್ವದ ಕ್ರಮಕ್ಕೆ ಮುಂದಾಗಿದೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಈಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : Ration Card Update : ನಿಮಗಿನ್ನೂ ರೇಷನ್ card ಸಿಕ್ಕಿಲ್ವಾ.? ನೀವು ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೆ.?

ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಡಿಯಲ್ಲಿ ರಾಜ್ಯಕ್ಕೆ ₹3,454 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಈ ಹಣವನ್ನ 32.12 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮತ್ತಿತರ ತಾಂತ್ರಿಕ ದೋಷಗಳಿಂದ ಇನ್ನು 2 ಲಕ್ಷ ರೈತರಿಗೆ ಪರಿಹಾರ ಧನ ತಲುಪುತ್ತಿಲ್ಲ. ಅವರಿಗೂ ಶೀಘ್ರವೇ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದ್ದು. ಇನ್ನೊಂದು ವಾರದಲ್ಲಿ ಎಲ್ಲ ರೈತರಿಗೂ ಪರಿಹಾರ ಲಭ್ಯವಾಗಲಿದೆ.

ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋದ ನಂತರ ನ್ಯಾಯಾಲಯದ ಆದೇಶದ ಪ್ರಕಾರ ರಾಜ್ಯಕ್ಕೆ ಪರಿಹಾರ ದೊರೆತಿದೆ. ಇದುವರೆಗೂ ಮೊದಲ ಮತ್ತು ಎರಡನೇ ಕಂತು ಸೇರಿ ₹3000 ಕೋಟಿ ರೂಪಾಯಿ ಹಣವನ್ನ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಇನ್ನು 1.5 ಲಕ್ಷ ಕುಟುಂಬಗಳಿಗೆ ಎರಡನೇ ಕಂತಿನ ಹಣ ತಲುಪಿಲ್ಲ. ಈ ಮೊತ್ತವು ತಲುಪಿದರೆ 33 ಲಕ್ಷ ರೈತ ಕುಟುಂಬಗಳಿಗೆ ನೆರವು ನೀಡಿದಂತಾಗುತ್ತದೆ. ಇನ್ನು 2-3 ದಿನಗಳಲ್ಲಿ ಈ ರೈತರಿಗೂ ಹಣ ವರ್ಗಾವಣೆಯಾಗಲಿದೆ.

ಇದನ್ನೂ ಕೂಡ ಓದಿ : HSRP : ಮೇ 31 ರಿಂದ ಎಲ್ಲಾ ವಾಹನಸವಾರರಿಗೆ ಬಿಗ್ ಶಾಕಿಂಗ್ ನ್ಯೂಸ್ / HSRP ನಂಬರ್ ಪ್ಲೇಟ್ ₹1,000 ದಂಡ ಘೋಷಣೆ.!

16 ಲಕ್ಷ ರೈತ ಕುಟುಂಬಕ್ಕೆ ತಲಾ ₹3,000 ಪರಿಹಾರ :- ಇದೇ ಮೊದಲ ಬಾರಿಗೆ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ಒಣ ಬೇಸಾಯ ಮಾಡುವ ಸುಮಾರು 16 ಲಕ್ಷ ರೈತ ಕುಟುಂಬಗಳಿಗೆ ಬರಗಾಲದಿಂದ ಉಂಟಾಗಿರುವ ಜೀವನೋಪಾಯ ನಷ್ಟಕ್ಕೆ ಪರಿಹಾರವಾಗಿ ತಲಾ ₹3000 ರೂಪಾಯಿ ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಎಸ್‌ಡಿಆರ್‌ಎಫ್(SDRF) ಮತ್ತು ಎನ್‌ಡಿಆರ್‌ಎಫ್(NDRF) ಎರಡರ ನಿಧಿಯಿಂದ ಪರಿಹಾರ ನೀಡಲಾಗುತ್ತದೆ. ಈ ಮೊತ್ತ ಸುಮಾರು ₹460 ಕೋಟಿ ರೂಪಾಯಿ ದಾಟಬಹುದು ಎಂದು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ರೀತಿ ರೈತರ ನೆರವಿಗೆ ಧಾವಿಸಲಾಗಿದ್ದು, ಬರ ಪರಿಹಾರದ ಮಾರ್ಗಸೂಚಿಗಳಲ್ಲಿ ಪರಿಹಾರ ನೀಡಲು ಅವಕಾಶ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ರಾಜ್ಯದ 240 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಿಸಿದೆ. ಇದರಲ್ಲಿ 196 ತಾಲೂಕುಗಳನ್ನು ತೀವ್ರ ಬರ ಪೀಡಿತ ಎಂದು ಪಟ್ಟಿ ಮಾಡಲಾಗಿದೆ. ಬೆಳೆ ನಷ್ಟ ಪರಿಹಾರಕ್ಕಾಗಿ 44 ಲಕ್ಷ ರೈತರ ಪಟ್ಟಿ ಮಾಡಲಾಗಿತ್ತು. ಮಳೆ ಇಲ್ಲದೇ ಅನೇಕ ತಾಲೂಕುಗಳಲ್ಲಿ ಬರ ಪರಿಹಾರ ಪಟ್ಟಿಯಲ್ಲಿ ಸೇರದೇ ಇದ್ದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರ ಧನ ವಿತರಿಸಲು ತೀರ್ಮಾನಿಸಲಾಗಿದೆ. 2 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶವನ್ನು ಒಳಗೊಳ್ಳುವ ಸುಮಾರು 1.63 ಲಕ್ಷ ಅರ್ಹ ರೈತರಿಗೂ ಪರಿಹಾರ ವಿತರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply