ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | ಆರೋಗ್ಯ ಸಲಹೆ

ಮಿಲನ ಎಂದರೆ ಕೇವಲ ಲೈಂಗಿಕ ಪರಾಕಾಷ್ಠೆ ಹೊಂದುವುದಷ್ಟೇ ಅಲ್ಲ. ಆದರೆ ನಿಮಗೆ ಸಂಪೂರ್ಣ ತೃಪ್ತಿ ಒದಗಿದಾಗ ನಿಮ್ಮ ದೇಹದ ಮೇಲೆ ಉಂಟಾಗುವ ಪರಿಣಾಮಕ್ಕೂ, ನಿಮಗೆ ಸಂಪೂರ್ಣ ತೃಪ್ತಿ ಸಿಗದೇ ಇದ್ದಾಗ ನಿಮ್ಮ ದೇಹದ ಮೇಲೆ ಉಂಟಾಗುವ ಪರಿಣಾಮಗಳಿಗೂ ವ್ಯತ್ಯಾಸ ಇದೆ. ದೈಹಿಕವಾದ ಪರಿಣಾಮಗಳಿಂದ ಹಿಡಿದು, ಮಾನಸಿಕ ಪರಿಣಾಮಗಳವರೆಗೂ, ನೀವು ಲೈಂಗಿಕ ಪರಾಕಾಷ್ಠೆ ಅನುಭವಿಸಲಿಲ್ಲ ಎಂದರೆ ನಿಮ್ಮ ದೇಹದ ಮೇಲೆ ಹಲವಾರು ಆಶ್ಚರ್ಯಕರ ಪರಿಣಾಮಗಳು ಉಂಟಾಗುತ್ತವೆ.

ಒಂದು ವೇಳೆ ನೀವು ಒರ್ಗ್ಯಾಸಮ್ ಹೊಂದದೆ ಇದ್ದರೆ ನಿಮ್ಮ ದೇಹದ ಮೇಲೆ ಏನೆಲ್ಲಾ ಪರಿಣಾಮಗಳು ಉಂಟಾಗುತ್ತವೆ ಎಂದು ಯೋಚಿಸಿದ್ದರೆ, ಇಲ್ಲಿದೆ ನೋಡಿ ಉತ್ತರ :-

1. ಪಕ್ಕೆ, ಶ್ರೋಣಿ ನೋವು ಮತ್ತು ಸಂಕಟ :-
ಗಂಡಸರು ಲೈಂಗಿಕವಾಗಿ ಕೆರಳಿದ್ದು, ಲೈಂಗಿಕ ಪರಾಕಾಷ್ಠೆ ಹೊಂದದೆ ಇದ್ದರೆ, ಅವರ ಚೆಂಡಿನಾಕಾರದ ವೃಷಣಗಳು ಹೇಗೆ ನೋವಲು ಶುರುವಾಗುತ್ತವೋ, ಅದೇ ರೀತಿಯಲ್ಲಿ ಹೆಂಗಸರಲ್ಲೂ ಲೈಂಗಿಕ ಪರಾಕಾಷ್ಠೆ ಹೊಂದದೆ ಇದ್ದರೇ, ಶ್ರೋಣಿ ಮತ್ತು ಪಕ್ಕೆಯಲ್ಲಿ ನೋವು, ಸಂಕಟ ಕಾಣಿಸಿಕೊಳ್ಳುತ್ತದೆ.

2. ಖಿನ್ನತೆ (ಡಿಪ್ರೆಶನ್) ಮನೋಭಾವ :-
ನೀವು ಮಿಲನದಲ್ಲಿ ಅನ್ಯೋನ್ಯತೆ ಅನುಭವಿಸದಿದ್ದರೆ ಅಥವಾ ತುಂಬಾ ವಿರಳವಾಗಿ ಮಿಲನದಲ್ಲಿ ತೊಡಗಿಸಿಕೊಳ್ಳುತ್ತಿದ್ದರೆ, ನಿಮಗೆ ಡಿಪ್ರೆಶನ್ ಅನುಭವ ಆಗಬಹುದು. ಮಿಲನ ಮತ್ತು ಪರಾಕಾಷ್ಠೆ ಮನಸ್ಸಿಗೆ ಮುದ ನೀಡುವ ಹಾರ್ಮೋನ್ ಸೆರೋಟೋನಿನ್ ಅನ್ನು ಬಿಡುಗಡೆ ಮಾಡುತ್ತವೆ. ಚರ್ಮ-ಚರ್ಮದ ಸ್ಪರ್ಶವಿಲ್ಲ ಎಂದರೆ, ಭಾವುಕ ಜೀವಿಗಳಾದ ಮಾನವರು ಖಿನ್ನತೆಗೆ ಒಳಗಾಗಬಹುದು

3. ನಿಮಗೆ ಕಾಲ ಕಳೆದಂತೆ ಮಿಲನದಲ್ಲಿ ಆಸಕ್ತಿ ಕಡಿಮೆ ಆಗಬಹುದು :-
ಒಂದು ವೇಳೆ ನೀವು ರೆಗ್ಯುಲರ್ ಆಗಿ ಮಿಲನದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಎಂದರೆ ಅಥವಾ ಸಂಪೂರ್ಣ ತೃಪ್ತಿ ಹೊಂದುತ್ತಿಲ್ಲ ಎಂದರೆ, ಅದು ನಿಮ್ಮ ಮಿಲನದ ಮೇಲಿನ ಆಸಕ್ತಿಯ ಮೇಲೆ ಪ್ರಭಾವ ಬೀರಬಹುದು. ಇದು ಪದೇ ಪದೇ ಆಗುತ್ತಿದ್ದರೆ, ಕೆಲವೇ ವಾರಗಳಲ್ಲಿ ನಿಮಗೆ ಮಿಲನದ ಮೇಲೆ ಆಸಕ್ತಿ ಕಡಿಮೆ ಆಗುತ್ತಿರುವುದನ್ನ ನೀವೇ ಕಾಣಬಹುದು.

4. ನೀವು ವಯಸ್ಸಾದಂತೆ ಕಾಣಬಹುದು :-
ತಜ್ಞರ ಪ್ರಕಾರ ಲೈಂಗಿಕ ಪರಾಕಾಷ್ಠೆ ನಿಮ್ಮನ್ನು ತಾರುಣ್ಯದಿಂದ ಕೂಡಿರುವಂತೆ ಮತ್ತು ನಿಮ್ಮ ಚರ್ಮವು ಮತ್ತಷ್ಟು ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ ಎನ್ನುತ್ತಾರೆ. ಏಕೆಂದರೆ, ಮಿಲನ ಮತ್ತು ಲೈಂಗಿಕ ಪರಾಕಾಷ್ಠೆ ಒಂದಾದಾಗ ದೇಹದಲ್ಲಿ ಬೆಳವಣಿಗೆಯ ಹಾರ್ಮೋನ್ ಬಿಡುಗಡೆ ಆಗುತ್ತದೆ. ಇದು ನಿಮ್ಮ ತ್ವಚೆಯನ್ನು ಸುಂದರವಾಗಿಸುತ್ತದೆ.

5. ರಕ್ತಸಂಚಾರಕ್ಕೆ ಅಡ್ಡಿ ಆಗಬಹುದು :-
ಹೌದು, ಲೈಂಗಿಕ ಪ್ರಚೋದನೆ ಮತ್ತು ಪರಾಕಾಷ್ಠೆ – ಇವೆರೆಡೂ ರಕ್ತ ಸಂಚಾರದ ಮೇಲೆ ಪ್ರಭಾವ ಬೀರುತ್ತವೆ. ನೀವು ಪರಾಕಾಷ್ಠೆ ಹೊಂದುವಾಗ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ನಾವು ರೆಗ್ಯುಲರ್ ಆಗಿ ಲೈಂಗಿಕ ಪರಾಕಾಷ್ಠೆ ಹೊಂದುತ್ತಿಲ್ಲ ಎಂದರೆ, ಆ ಭಾಗದಲ್ಲಿ ಕಟ್ಟಿಕೊಳ್ಳಲು ಶುರುವಾಗುತ್ತದೆ, ಟೈಟ್ ಆಗಲು ಶುರುವಾಗುತ್ತದೆ, ಮಿಲನದ ವೇಳೆ ನೋವು ಹೆಚ್ಚಾಗುತ್ತದೆ ಮತ್ತು ಬಹಳ ಡ್ರೈ ಆಗುತ್ತದೆ.

6. ನಿಮಗೆ ನಿದ್ದೆ ಬರದಂತೆ ಆಗುವುದು :-
ಪರಾಕಾಷ್ಠೆ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್ ನಮ್ಮ ಮಾನಸಿಕ ಒತ್ತಡವನ್ನ ಕಡಿಮೆ ಮಾಡುತ್ತದೆ ಮತ್ತು ಆರಾಮವನ್ನ ಹುಟ್ಟು ಹಾಕುತ್ತದೆ. ಮಿಲನ ಅಥವಾ ಲೈಂಗಿಕ ಪರಾಕಾಷ್ಠೆ ಹೊಂದದೆ ಇದ್ದರೆ,

ನೋಡಿದ್ರಲ್ಲಾ ಸ್ನೇಹಿತರೆ, ಈ ಮಾಹಿತಿ ಇಷ್ಟವಾದ್ರೆ ಲೈಕ್ ಮತ್ತು ಶೇರ್ ಮಾಡಿ. ಧನ್ಯವಾದಗಳು.

Leave a Reply