Bara Parihara : ಬರ ಪರಿಹಾರ ಹಣ ಜಮಾ ಆಗದಿದ್ದರೆ ತಪ್ಪದೇ ಇದನ್ನು ನೋಡಿ / ₹14,980/ ಹಣ ಜಮಾ ರೈತರಿಗೆ ಭರ್ಜರಿ ಗುಡ್ ನ್ಯೂಸ್.!

Bara Parihara : ನಮಸ್ಕಾರ ಸ್ನೇಹಿತರೇ, ಕಳೆದ ವರ್ಷ ನೈಋತ್ಯ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕರ್ನಾಟಕದಲ್ಲಿ ಬರ ಆವರಿಸಿದೆ. 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆ ಹಾನಿಗೆ ಎಸ್‌ಡಿಆರ್‌ಎಫ್(SDRF) ಅಥವಾ ಎನ್‌ಡಿಆರ್‌ಎಫ್(NDRF) ಮಾರ್ಗಸೂಚಿಯಂತೆ ಅರ್ಹತೆಗೆ ಅನುಗುಣವಾಗಿ ಪರಿಹಾರವನ್ನು ರೈತರಿಗೆ ನೀಡಲಾಗುತ್ತಿದೆ.

ಈಗಾಗಲೇ ಎಲ್ಲ ರೈತರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. ಈಗಾಗಲೇ ಮೊದಲ ಹಂತದಲ್ಲಿ ಎಲ್ಲ ಅರ್ಹ ರೈತರಿಗೆ ಪಾವತಿಸಿರುವ ಬೆಳೆ ಹಾನಿ ಪರಿಹಾರ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು ಸದ್ಯ ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆ ಹಾನಿ ಪರಿಹಾರದ ಮೊತ್ತವನ್ನು ಪಾವತಿಸಲು ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶಿಸಿದೆ.

ಇದನ್ನೂ ಕೂಡ ಓದಿ : Labour Card Scholarship : ಕಾರ್ಮಿಕ ಇಲಾಖೆ ವತಿಯಿಂದ ವಿದ್ಯಾರ್ಥಿ ವೇತನ – ಅರ್ಜಿ ಹೇಗೆ ಸಲ್ಲಿಸುವುದು.?

ಅದರಂತೆ ಬೆಳೆ ಸಮೀಕ್ಷೆ, ದತ್ತಾಂಶದ ಮಾಹಿತಿ ಆಧಾರದ ಮೇಲೆ ಫ್ರೂಟ್ಸ್(FID) ಐಡಿ ಹೊಂದಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಹಂತ ಹಂತವಾಗಿ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಬರ ಪರಿಹಾರದ ಹಣ ನೇರವಾಗಿ ರೈತರ ಖಾತೆಗಳಿಗೆ ಜಮೆಯಾಗುತ್ತಿದೆ. ಆದರೆ ಹಲವು ರೈತರು ಬರ ಪರಿಹಾರ ಹಣ ಜಮೆ ಆಗಿಲ್ಲ ಎಂದು ಕಂಪ್ಲೇಂಟ್ ಮಾಡುತ್ತಿದ್ದರು. ಹೀಗಾಗಿ ಯಾವ ರೈತರ ಖಾತೆಗೆ ಹಣ ಜಮಾ ಆಗಿಲ್ಲವೋ ಅಂತಹವರು ನಿಮ್ಮ ಹೆಸರು, ಆಧಾರ್ ಮತ್ತು ಫ್ರೂಟ್ಸ್(FID) ಐಡಿಗೆ ಹೊಂದಿಕೆ ಆಗದೆ ಇರುವುದು. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದೇ ಇರುವುದು ನಿಮ್ಮ ಬ್ಯಾಂಕ್‌ನ ಐಎಫ್‌ಎಸ್‌ಸಿ ಕೋಡ್ ಸರಿಯಿಲ್ಲದಿರುವುದು. ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯ ಆಗಿರುವುದು ಮತ್ತು ಇತರೆ ಕಾರಣಗಳಿಗೆ ಪರಿಹಾರ ಜಮೆ ಆಗಿರುವುದಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಕೂಡ ಓದಿ : HSRP : ಮೇ 31 ರಿಂದ ಎಲ್ಲಾ ವಾಹನಸವಾರರಿಗೆ ಬಿಗ್ ಶಾಕಿಂಗ್ ನ್ಯೂಸ್ / HSRP ನಂಬರ್ ಪ್ಲೇಟ್ ₹1,000 ದಂಡ ಘೋಷಣೆ.!

ಈ ಸಮಸ್ಯೆಗಳಿಗೆ ರೈತರು ಪರಿಹಾರ ಕಂಡುಕೊಳ್ಳಬಹುದಾಗಿರುತ್ತದೆ. ಅದಕ್ಕಾಗಿ ರೈತರು ಬ್ಯಾಂಕ್ ಗೆ ಹೋಗಿ ಖಾತೆಯನ್ನ ರಿ ಓಪನ್ ಮಾಡಿಸಬೇಕು. ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ಅಪ್ಡೇಟ್ ಮಾಡಬೇಕು. ರೈತರು ಬ್ಯಾಂಕ್‌ಗೆ ಹೋಗಿ ಎನ್‌ಪಿಸಿಐ ಮಾಡಿಸಬೇಕು. ಅಕೌಂಟ್ ಬ್ಲಾಕ್ ಅಥವಾ ಕ್ಲೋಸ್ ಆಗಿದ್ರೆ ಓಪನ್ ಮಾಡಿಸಬೇಕು. ರೈತರು ಹೆಚ್ಚಿನ ಮಾಹಿತಿಗಾಗಿ Bhoomi Online – Parihara ವೆಬ್ ಸೈಟ್ ನಲ್ಲಿ ಹೋಗಿ ಪರಿಶೀಲಿಸಿಕೊಳ್ಳಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply