Bara Parihara Status : ಆಧಾರ್ ಕಾರ್ಡ್ ನಂಬರ್ ಬಳಸಿ ಬರ ಪರಿಹಾರದ ವಿವರ ಚೆಕ್ ಮಾಡುವುದು ಹೇಗೆ.? ನೋಡೋಣ

Bara Parihara Status : ನಮಸ್ಕಾರ ಸ್ನೇಹಿತರೇ, ಬರಗಾಲ ಪೀಡಿತ ಪ್ರದೇಶದ ರೈತರು ತಮ್ಮ ಆಧಾರ್ ಕಾರ್ಡ್ ನಂಬರ್ ಬಳಸಿ ಬರ ಪರಿಹಾರ(Bara Parihara)ದ ಹಣ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯಾ.? ಇಲ್ಲವಾ.? ಅನ್ನುವ ಮಾಹಿತಿಯನ್ನು ಮೊಬೈಲ್ ಫೋನ್ ಮೂಲಕವೇ ಪಡೆದುಕೊಳ್ಳಬಹುದು. ಮೊಬೈಲ್ ನಲ್ಲಿ ಬರ ಪರಿಹಾರದ(Bara Parihara) ಮಾಹಿತಿಯನ್ನು ಹೇಗೆ ಚೆಕ್ ಮಾಡುವುದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಕೂಡ ಓದಿ : SBI Bank Update : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಶೀಘ್ರದಲ್ಲಿ ಒಟ್ಟು 12,000 ಹುದ್ದೆಗಳ ನೇಮಕಾತಿ ಆರಂಭ.!

ಕಂದಾಯ ಇಲಾಖೆಯ ಅಧಿಕೃತ ವೆಬ್ ಸೈಟ್ Bhoomi online Parihara ಲಿಂಕ್ ಗೆ ಭೇಟಿ ನೀಡಿ, ಮುಂಗಾರು ಹಂಗಾಮಿನ ಬರ ಪರಿಹಾರದ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿದೆಯಾ ಅಥವಾ ಇಲ್ಲವಾ ಎನ್ನುವ ಮಾಹಿತಿಯನ್ನು ಅರ್ಹ ಫಲಾನುಭವಿ ರೈತರ ಆಧಾರ್ ಕಾರ್ಡ್ ನಂಬರ್ ಬಳಸಿ ಯಾವೆಲ್ಲ ಸರ್ವೆಗೆ ಹಣ ಜಮಾ ಆಗಿದೆ ಅಥವಾ ಜಮಾ ಆಗಿಲ್ಲ ಎನ್ನುವ ಬಗ್ಗೆ ನೀವು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.

ಬರ ಪರಿಹಾರದ(Bara Parihara) ಹಣ ಚೆಕ್ ಮಾಡುವ ವಿಧಾನ ಹೇಗೆ.?

  1. BHOOMI ONLINE – PARIHARA (INPUT SUBSIDY) PAYMENT DETAILS/ಭೂಮಿ ಆನ್‌ಲೈನ್ – ಪರಿಹಾರ (ಇನ್‌ಪುಟ್ ಸಬ್ಸಿಡಿ) ಪಾವತಿ ವಿವರಗಳು ಈ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.
  2. ನಂತರ ವರ್ಷ/Year, ಸೀಸನ್/Seson ವಿಪತ್ತಿನ ವಿಧ /Kharif Calamity, ಬರ/Drought ಎಂದು ಕ್ಲಿಕ್ ಮಾಡಿ, ನಂತರ ಹುಡುಕು/Get Data ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
  3. ನಂತರ ಆಧಾರ್ ಕಾರ್ಡ್/Adhar Car ಬಟನ್ ಮೇಲೆ ಕ್ಲಿಕ್ ಮಾಡಿ 12 ಅಂಕಿಯ ನಿಮ್ಮ ಆಧಾ‌ರ್ ಕಾರ್ಡ್ ನಂಬ‌ರ್ ಅನ್ನು ನಮೂದಿಸಿ Get Data ಮೇಲೆ ಕ್ಲಿಕ್ ಮಾಡಬೇಕು.
  4. ನಂತರ ನಿಮಗೆ ವಂದನೆ ವಿಭಾಗದಲ್ಲಿ ಪರಿಹಾರದ ಹಣ ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎನ್ನುವ ವಿವರ ತೋರಿಸಿದರೆ, ಅದರ ಕೆಳಗೆ ಯಾವೆಲ್ಲ ಸರ್ವೆ ನಂಬರ್ ಗೆ ಬರ ಪರಿಹಾರದ ಹಣ ಜಮಾ ಆಗಿದೆ ಎನ್ನುವ ಮಾಹಿತಿಯನ್ನು ತೋರಿಸುತ್ತದೆ.

ಇದನ್ನೂ ಕೂಡ ಓದಿ : Scholarship : ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ₹20,000 ವರೆಗೆ ಸ್ಕಾಲರ್ಶಿಪ್! ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು.?

ಆಧಾರ್ ಕಾರ್ಡ್ ನಂಬರ್ ಬಳಸಿ ಬರ ಪರಿಹಾರದ(Bara Parihara) ವರದಿ ಹುಡುಕಲು ಸಾಧ್ಯವಾಗದಿದ್ದಲ್ಲಿ, ಮೊಬೈಲ್ ನಂಬರ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಬರ ಪರಿಹಾರದ ವಿವರಗಳನ್ನು ಪಡೆಯಬಹುದು.

ಈ ಕೃಷಿ ಇಲಾಖೆಯ ಅಧೀಕೃತ ವೆಬ್ ಸೈಟ್ ಗೆ ಭೇಟಿ ನೀಡಿ :- BHOOMI ONLINE – PARIHARA (INPUT SUBSIDY) PAYMENT DETAILS/ಭೂಮಿ ಆನ್‌ಲೈನ್ – ಪರಿಹಾರ (ಇನ್‌ಪುಟ್ ಸಬ್ಸಿಡಿ) ಪಾವತಿ ವಿವರಗಳು

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply