ನಂದಮೂರಿ ತಾರಕ ರತ್ನ ಅವರ ಸಾವಿಗೆ ಕಾರಣವೇನು ಗೊತ್ತೆ.?

ನಂದಮೂರಿ ತಾರಕ ರತ್ನ ಅವರು ತಮ್ಮ 39 ನೇ ವಯಸ್ಸಿನಲ್ಲಿ ಶನಿವಾರ ನಿಧನರಾದರು. ಅವರ ಹಠಾತ್ ನಿಧನ ಅವರ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿತ್ತು. ನಟ ತಾರಕರತ್ನ ಅವರು ಬೆಂಗಳೂರಿನ ನಾರಾಯಣ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್‌ನಲ್ಲಿ ಕೊನೆಯುಸಿರೆಳೆದರು, ಹಾರ್ಟ್‌ ಅಟ್ಯಾಕ್‌ಗೆ ಒಳಗಾದ ಅವರನ್ನು ಜನವರಿ 27 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ 39 ವರ್ಷವಯಸ್ಸಾಗಿದೆ. 

ತೆಲುಗುದೇಶಂ ಪಕ್ಷ ಜ. 27ರಂದು ಕುಪ್ಪಂ ಬಳಿ ಆಯೋಜಿಸಿದ್ದ ಪಾದಯಾತ್ರೆ ಸಂದರ್ಭ ತಾರಕ ರತ್ನ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರಿಗೆ ನಾರಾಯಣ ಹೆಲ್ತ್​ ಸಿಟಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಳೆದ 22 ದಿನಗಳಿಂದ ತಾರಕ ರತ್ನಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಅಕ್ಷರಶಃ ಜೀವನ್ಮರಣ ಹೋರಾಟ ನಡೆಸಿದ್ದರು. ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳ ನಡುವೆಯೂ ಅವರು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು. 

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : ಮದುವೆಯಲ್ಲಿ ಹೆಂಡತಿಗಿಂತ ಗಂಡನ ವಯಸ್ಸು ಯಾಕೆ ಹೆಚ್ಚಿರಬೇಕು?

ಫೆಬ್ರವರಿ 22, 1983 ರಂದು ಜನಿಸಿದ ತಾರಕ ರತ್ನ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿಯ ಸಂಸ್ಥಾಪಕ ಎನ್‌ಟಿ ರಾಮರಾವ್ ಅವರ ಮೊಮ್ಮಗ. ಅವರು ಜನಪ್ರಿಯ ನಟರಾದ ಜೂನಿಯರ್ ಎನ್‌ಟಿಆರ್ ಮತ್ತು ಕಲ್ಯಾಣ್ ರಾಮ್ ಅವರ ಸೋದರಸಂಬಂಧಿ. 2002 ರಲ್ಲಿ, ಎ ಕೋದಂಡರಾಮಿ ರೆಡ್ಡಿ ಅವರ ನಿರ್ದೇಶನದಲ್ಲಿ, ರತ್ನ ಅವರು ‘ಒಕಾಟೋ ನಂಬರ್ ಕುರ್ರಾಡು’ ಚಿತ್ರದಲ್ಲಿ ತಮ್ಮ ಮೊದಲ ನಟನೆಯನ್ನು ಮಾಡಿದ್ದರು.

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply