ಆಪರೇಷನ್ ಸಮಯದಲ್ಲಿ ವೈದ್ಯರು ಹಸಿರು ಬಟ್ಟೆಯನ್ನು ಧರಿಸೋದು ಯಾಕೆ?

ನಾವೆಲ್ಲರೂ ಜೀವನದಲ್ಲಿ ಒಂದಲ್ಲಾ ಒಂದು ಕಾರಣಕ್ಕಾಗಿ ಆಸ್ಪತ್ರೆಗೆ ಹೋಗಿರುತ್ತೇವೆ . ವೈದ್ಯರು ಸಾಮಾನ್ಯವಾಗಿ ಹಾಸ್ಪಿಟಲ್‌ಗಳಲ್ಲಿ ಬಿಳಿ ಕೋಟನ್ನು ಧರಿಸುತ್ತಾರೆ. ಆದರೆ ಶಸ್ತ್ರಚಿಕಿತ್ಸೆಗೆ ಮುನ್ನ ವೈದ್ಯರು ಹಸಿರು ಬಣ್ಣದ ಬಟ್ಟೆ ಹಾಕಿಕೊಳ್ಳುವುದನ್ನು ನೀವು ನೋಡಿರಬೇಕು. ಆಪರೇಷನ್ ಸಮಯದಲ್ಲಿ ವೈದ್ಯರು ಹಸಿರು ಬಟ್ಟೆಯನ್ನು ಧರಿಸೋದು ಯಾಕೆ? ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.

ಆಪರೇಷನ್ ಸಮಯದಲ್ಲಿ ಹಸಿರು ಬಣ್ಣ ಧರಿಸುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ಆಪರೇಷನ್ ಸಮಯದಲ್ಲಿ, ಶಸ್ತ್ರಚಿಕಿತ್ಸಕನ ಗಮನವು ಹೆಚ್ಚಾಗಿ ಕೆಂಪು ಬಣ್ಣಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ಬಟ್ಟೆಯ ಹಸಿರು ಮತ್ತು ನೀಲಿ ಬಣ್ಣಗಳು ಶಸ್ತ್ರಚಿಕಿತ್ಸಕನ ನೋಡುವ ಸಾಮರ್ಥ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅವನನ್ನು ಕೆಂಪು ಬಣ್ಣಕ್ಕೆ ಹೆಚ್ಚು ಸಂವೇದನಾಶೀಲವಾಗಿಸುತ್ತದೆ.

ಹಸಿರು ಬಟ್ಟೆಯು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕಣ್ಣಿಗೆ ಸ್ವಲ್ಪ ವಿಶ್ರಾಂತಿ ನೀಡುತ್ತದೆ ಎಂದು ಹೇಳಾಗಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ವೈದ್ಯರು ಆಗಾಗ ನೀಲಿ ಮತ್ತು ಬಿಳಿ ಸಮವಸ್ತ್ರವನ್ನು ಧರಿಸುತ್ತಾರೆ. ಆದರೆ ಅದರ ಮೇಲೆ ರಕ್ತದ ಕಲೆಗಳು ಕಂದು ಬಣ್ಣದಲ್ಲಿ ಕಾಣುವುದರಿಂದ ಹಸಿರು ಬಣ್ಣಕ್ಕೆ ಆದ್ಯತೆ ನೀಡಲಾಗುತ್ತದೆ ಎನ್ನುತ್ತಾರೆ.

 ಬೆಳಕಿನಿಂದ ತುಂಬಿದ ಸ್ಥಳದಿಂದ ಡಾರ್ಕ್ ಕೋಣೆಗೆ ಪ್ರವೇಶಿಸಿದಾಗ ಮತ್ತು ನೀವು ಹಸಿರು ಅಥವಾ ನೀಲಿ ಬಣ್ಣದೊಂದಿಗೆ ಸಂಪರ್ಕಕ್ಕೆ ಬಂದರೆ ಇದು ಇತರ ಬಣ್ಣಗಳತ್ತ ದೃಷ್ಟಿಯನ್ನು ಚುರುಕುಗೊಳಿಸುತ್ತದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಶಸ್ತ್ರಚಿಕಿತ್ಸಕರ ಗಮನವು ಹೆಚ್ಚಾಗಿ ಕೆಂಪು ಬಣ್ಣಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ಬಟ್ಟೆಯ ಹಸಿರು ಮತ್ತು ನೀಲಿ ಬಣ್ಣಗಳು ಶಸ್ತ್ರಚಿಕಿತ್ಸೆ ನೋಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply