ವಿಜಯಲಕ್ಷ್ಮಿ ಆಕ್ರೋಶಕ್ಕೆ ಈಗ ಮೇಘಾ ಶೆಟ್ಟಿ ಏನು ಮಾಡಿಕೊಂಡಿದ್ದಾರೆ ಗೊತ್ತಾ.? । Darshan Thoogudeepa । Vijayalakshmi । Megha Shetty

Darshan Thoogudeepa : ಫೆಬ್ರವರಿ 16ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 46 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಹಳ ಅದ್ದೂರಿ ಆಗಿ ನಟ ದರ್ಶನ್ ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದರು. ಸೋಶಿಯಲ್ ಮಿಡಿಯಾದಲ್ಲೂ ಕೂಡ ಚಿತ್ರರಂಗದ ತಾರೆಯರು ರಾಜಕೀಯ ಮುಖಂಡರು ದರ್ಶನ್ ಗೆ ಶುಭಾಶಯಗಳನ್ನ ಕೋರಿದ್ದರು. ಇದೆಲ್ಲದರ ನಡುವೆ ನಟ ದರ್ಶನ್ ನಟಿಯರಾದ ಮೇಘಾ ಶೆಟ್ಟಿ, ಪವಿತ್ರ ಗೌಡ, ಸೊನಾನ್ ಮಾಥೇರಾ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದರು.

ಇದನ್ನೂ ಕೂಡ ಓದಿ : ರಾತ್ರಿಪೂರ್ತಿ ಯಾರಿಗೂ ತಿಳಿಯದಂತೆ ರಸ್ತೆಯಲ್ಲೇ ಕೂತಿದ್ದ ಪುನೀತ್! ಅಷ್ಟಕ್ಕೂ ಅವತ್ತು ಏನಾಗಿತ್ತು ಗೊತ್ತಾ.? | Puneeth Rajkumar

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಆಗಿ ಮನಗೆದ್ದ ನಟಿ ಮೇಘ ಶೆಟ್ಟಿ, ನಟ ದರ್ಶನ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನೂ ಮೇಘಾ, ಪವಿತ್ರ, ಸೋನಲ್ ಆತ್ಮೀಯ ಸ್ನೇಹಿತರಾಗಿದ್ದು 3 ಜನ ಸೇರಿ ಬಹಳಾನೇ ಸ್ಪೆಷಲ್ ಆಗಿ ದರ್ಶನ್ ಅವರ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿ ಸ್ಪೆಷಲ್ ಆಗಿ ಕೇಕ್ ಅನ್ನ ಕಟ್ ಮಾಡಿಸಿದರು. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನ ಹಾಗೂ ವಿಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿತ್ತು. ಸ್ವತಹ ಮೇಘಾ ಶೆಟ್ಟಿ ವಿಡಿಯೋವನ್ನ ಶೇರ್ ಮಾಡಿಕೊಂಡಿದ್ದರು.

ಈ ಘಟನೆ ಬಗ್ಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೆಂಡಾಮಂಡಲವಾಗಿದ್ದರು. ಅಷ್ಟೇ ಅಲ್ಲಾ ಬಹಿರಂಗವಾಗಿಯೇ ಮೇಘಾ ಶೆಟ್ಟಿಗೆ ತರಾಟೆಗೆ ತೆಗೆದುಕೊಂಡಿದ್ದರು. ಇತ್ತ ದರ್ಶನ್ ಪತ್ನಿ ಕೆಂಡಾಮಂಡಲವಾಗಿ ಇನ್ಸ್ಟಾಗ್ರಾಮ್ ನಲ್ಲೆ ಪೋಸ್ಟ್ ಮಾಡುತ್ತಿದ್ದಂತೆ ನಟಿ ಮೇಘಾ ಶೆಟ್ಟಿ ತಮ್ಮ ಪೋಸ್ಟ್ ಅನ್ನ ಡಿಲೀಟ್ ಮಾಡಿದರು. ಎಲ್ಲ ಪೋಸ್ಟ್ ಗಳಲ್ಲಿ ಕಾಮೆಂಟ್ ಗಳನ್ನ ಆಫ್ ಮಾಡಿಕೊಂಡಿದ್ದಾರೆ. ಇತ್ತ ವಿಜಯಲಕ್ಷ್ಮಿ ತಮ್ಮ ಪೋಸ್ಟ್ ಅನ್ನ ಸೋಶಿಯಲ್ ಮೀಡಿಯಾದಿಂದಲೇ ಡಿಲೀಟ್ ಮಾಡಿದ್ದಾರೆ. ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಇದನ್ನೂ ಕೂಡ ಓದಿ : Darshan Thoogudeepa | ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? | D Boss Darshan | D56 Movie

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply