Darshan Thoogudeepa | ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? | D Boss Darshan | D56 Movie

Darshan Thoogudeepa | ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? | D Boss Darshan | D56 Movie

Darshan Thoogudeepa : ಕನ್ನಡ ಚಿತ್ರರಂಗದ ಸುಲ್ತಾನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯಕ್ಕೆ ‘ಕ್ರಾಂತಿ’ ಸಿನಿಮಾದ ಗೆಲುವಿನ ಸಂಭ್ರಮದಲ್ಲಿ ಇದ್ದಾರೆ. ‘ಕ್ರಾಂತಿ’ ಸಿನಿಮಾ ಮೊದಲ 4 ದಿನದಲ್ಲೇ 1೦೦ ಕೋಟಿ ಕ್ಲಬ್ ಸೇರಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಹೊಸ ಇತಿಹಾಸವನ್ನ ಬರೆದಿದೆ. ಇದೀಗ ‘ಕ್ರಾಂತಿ’ ಸಿನಿಮಾದ ನಂತರ ನಟ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ವೊಂದನ್ನ ನೀಡಿದ್ದಾರೆ. ಡಿ ಬಾಸ್ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ 56 ನೇ ಸಿನಿಮಾದ ಟೈಟಲ್ ಅನ್ನ ‘ಕಾಟೇರ’ ಎಂದು ಘೋಷಣೆ ಮಾಡಲಾಗಿದೆ. ಹಾಗಾದ್ರೆ ಸ್ಯಾಂಡಲ್ ವುಡ್ ನಟರಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿದ್ದಾರೆ ಎಂದು ಕರೆಸಿಕೊಳ್ಳುವ ಡಿ ಬಾಸ್ ಅವರು ‘ಕಾಟೇರ’ ಸಿನಿಮಾಗಾಗಿ ಎಷ್ಟು ಸಂಭಾವನೆ ಪಡೆದಿದ್ದಾರೆ ನೋಡೋಣ.

Do you know how much Darshan thoogudeepa got paid for Katera movie?

ಇದನ್ನೂ ಕೂಡ ಓದಿ : ರಾತ್ರಿಪೂರ್ತಿ ಯಾರಿಗೂ ತಿಳಿಯದಂತೆ ರಸ್ತೆಯಲ್ಲೇ ಕೂತಿದ್ದ ಪುನೀತ್! ಅಷ್ಟಕ್ಕೂ ಅವತ್ತು ಏನಾಗಿತ್ತು ಗೊತ್ತಾ.? | Puneeth Rajkumar

WhatsApp Group Join Now
Telegram Group Join Now

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಆರಂಭವಾಗಿ ರಿಲೀಸ್ ಆಗುವ ತನಕ ಸದಾ ಸುದ್ದಿಅಲ್ಲೇ ಇರುತ್ತದೆ. ಹಾಗೂ ಪ್ರತಿಯೊಂದು ಚಿಕ್ಕ ವಿಷಯಕ್ಕೂ ಕೂಡ ದೊಡ್ಡ ಮಟ್ಟದಲ್ಲಿಯೇ ಸುದ್ದಿ ಮಾಡುತ್ತದೆ. ಇದೀಗ 56ನೇ ಸಿನಿಮಾದ ಟೈಟಲ್ ಘೋಷಣೆ ವಿಷಯದಲ್ಲೂ ಕೂಡ ಸಿಕ್ಕ ಪಟ್ಟೆ ಸುದ್ದಿಯಲ್ಲೇ ಇದ್ದ ಸಿನಿಮಾಕ್ಕೆ ‘ಕಾಟೇರ’ ಎಂದು ಹೆಸರಿಡಲಾಗಿದೆ. ಈ ಚಿತ್ರವನ್ನ ಚೌಕ ಮತ್ತು ರಾಬರ್ಟ್ ಖ್ಯಾತಿಯ ತರುಣ್ ಸುಧೀರ್ ಅವರು ನಿರ್ದೇಶನ ಮಾಡುತ್ತಿದ್ದು ‘ಕಾಟೇರ’ ಸಿನಿಮಾದಲ್ಲಿ ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ಮೊದಲ ಬಾರಿಗೆ ಬೆಳ್ಳಿ ತೆರೆಗೆ ಕಾಲಿಡುತ್ತಿದ್ದು ದರ್ಶನ್ ಅವರಿಗೆ ಜೋಡಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಕೂಡ ಓದಿ : Rakshith Shetty | ರಕ್ಷಿತ್ ಶೆಟ್ಟಿ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2010-2023) | Rakshith Shetty Hit And Flop Movies

WhatsApp Group Join Now
Telegram Group Join Now

ಈ ಸಿನಿಮಾದ ಶೇಕಡ 6೦ ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದ್ದು ಇದೇ ವರ್ಷದಲ್ಲಿ ‘ಕಾಟೇರ’ ಸಿನಿಮಾ ತೆರೆ ಕಾಣುತ್ತದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಇನ್ನೂ ಈ ಸಿನಿಮಾದಲ್ಲಿ ನಟನೆ ಮಾಡಲು ನಟ ದರ್ಶನ್ ಅವರು ದಾಖಲೆಯ ಸಂಭಾವನೆ ಪಡೆದಿದ್ದಾರೆ ಅಂತ ಹೇಳಲಾಗುತ್ತಿದೆ. ಹೌದು, ಗಾಂಧಿ ನಗರದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ನಟ ದರ್ಶನ್ ಅವರು ‘ಕಾಟೇರ’ ಸಿನಿಮಾದಲ್ಲಿ ನಟನೆಯನ್ನ ಮಾಡಲು ಸುಮಾರು 15 ರಿಂದ 2೦ ಕೋಟಿ ರೂಪಾಯಿ ಸಂಭಾವನೆಯನ್ನ ಪಡೆದಿದ್ದಾರೆ ಅಂತ ಹೇಳಲಾಗುತ್ತಿದೆ.

darshan thoogudeepa kaatera movie release date

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply