ಕ್ರಾಂತಿ 5 ನೇ ದಿನದ ಕಲೆಕ್ಷನ್ ಎಷ್ಟು.? ಚಿತ್ರರಂಗದ ಎಲ್ಲಾ ರೆಕಾರ್ಡ್ ಬ್ರೇಕ್.!

ಯಜಮಾನ ಚಿತ್ರದ ನಂತರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ. ಹರಿಕೃಷ್ಣ ಕಾಂಬಿನೇಷನ್ ನ 2ನೇ ಹಾಗೂ ಬಹು ನಿರೀಕ್ಷಿತ ಚಿತ್ರ ‘ಕ್ರಾಂತಿ’ ಬಿಡುಗಡೆ ಆಗಿ 5 ದಿನ ಪೂರೈಸಿದೆ. ಗಣರಾಜ್ಯೋತ್ಸವದ ದಿನದಂದು ಬಿಡುಗಡೆಗೊಂಡ ‘ಕ್ರಾಂತಿ’ ಸಿನಿಮಾ ಬಿಡುಗಡೆ ಮುನ್ನವೇ ದೊಡ್ಡ ಮಟ್ಟದಲ್ಲಿ ವಿರೋಧವನ್ನ ಎದುರಿಸುತ್ತ ಬಂದಿತ್ತು. ಇನ್ನು ಇದೀಗ ಈ ಚಿತ್ರ ಬಿಡುಗಡೆಯಾದ ನಂತರವೂ ಸಹ ‘ಕ್ರಾಂತಿ’ಯ ಬಗ್ಗೆ ವಿರೋಧ ಮತ್ತು ಕಾಲೆಳೆತ ಮುಂದುವರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಚೆನ್ನಾಗಿಲ್ಲಾ ಎಂದು ಕೆಲವರು ಬರೆದುಕೊಂಡು ಟೀಕೆ ಮಾಡುತ್ತಿದ್ದಾರೆ. ಆದರೂ ಇದಕ್ಕೆಲ್ಲಾ ಎದೆಗುಂದದ ‘ಕ್ರಾಂತಿ’ ಸಿನಿಮಾ ಬಾಕ್ಸ್ ಆಫೀಸ್ ಅಲ್ಲಿ ಕಮಾಲ್ ಮಾಡ್ತಿದೆ. ಮೊದಲ 4 ದಿನಗಳು ಒಳ್ಳೆಯಲ್ಲಿ ರೀತಿಯ ಕಲೆಕ್ಷನ್ ಮಾಡಿದ ‘ಕ್ರಾಂತಿ’ ಸಿನಿಮಾ 5ನೇ ದಿನ ಏನಾಗಿದೆ ನೋಡೋಣ.

ಇದನ್ನೂ ಓದಿ : ಈ ಅದ್ಭುತ ಹಣ್ಣು ಮಕ್ಕಳಿಲ್ಲದವರಿಗೆ ಹೆಚ್ಚು ಲಾಭದಾಯಕ.!

WhatsApp Group Join Now
Telegram Group Join Now

ನಟ ದರ್ಶನ್ ಅವರ ಅಭಿಮಾನಿಗಳು ‘ಕ್ರಾಂತಿ’ ಚಿತ್ರವನ್ನ ಮೆಚ್ಚಿಕೊಂಡಿದ್ದು, ಸಾಮಾನ್ಯ ಸಿನಿ ಪ್ರೇಕ್ಷಕರು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ವಿಷಯವು ಸಹ ಸಾಮಾಜಿಕ ಜಾಲತಾಣ ದಲ್ಲಿ ಫ್ಯಾನ್ ವಾರ್ ಗೆ ದಾರಿ ಮಾಡಿಕೊಟ್ಟಿದೆ. ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ದರ್ಶನ್ ಅವರ ಅಭಿಮಾನಿಗಳು ಚಿತ್ರ ಸೂಪರ್ ಅಂತ ಪೋಸ್ಟ್ ಹಂಚಿಕೊಳ್ಳುತ್ತಾ ಇದ್ದಾರೆ. ಕೆಲವರು ಮಾತ್ರ ಚಿತ್ರ ಚೆನ್ನಾಗಿಲ್ಲಾ ಅಂತ ಪೋಸ್ಟ್ ಮಾಡ್ತಾ ಇದ್ದಾರೆ.

ಇನ್ನೂ ಮೊದಲ 4 ದಿನ ಭರ್ಜರಿ ಕಲೆಕ್ಷನ್ ಅನ್ನು ಮಾಡಿದ ‘ಕ್ರಾಂತಿ’ 5ನೇ ದಿನವಾದ ಸೋಮವಾರ ಎಲ್ಲರಿಗೂ ಕೆಲಸದ ದಿನವಾದ ಕಾರಣ ಸ್ವಲ್ಪ ಇಳಿಮುಖ ಕಂಡಿದ್ದು, ಸಂಜೆಯ ವೇಳೆಯ ಶೋಗಳು ಕೆಲವೆಡೆ ಹೌಸ್ ಫುಲ್ ಆಗಿದೆ. ಹಾಗೂ ‘ಕ್ರಾಂತಿ’ ಸಿನಿಮಾ ಬಿಡುಗಡೆ ಆದ 5ನೇ ದಿನ ಸುಮಾರು 7 ರಿಂದ 8ಕೋಟಿ ಕಲೆಕ್ಷನ್ ಅಂತ ಗಾಂಧೀನಗರದ ಪಂಡಿತರು ಅಂದಾಜು ಮಾಡಿದ್ದಾರೆ. ನಿಮ್ಮ ಪ್ರಕಾರ ‘ಕ್ರಾಂತಿ’ ಸಿನಿಮಾ ಒಟ್ಟಾರೆಯಾಗಿ ಎಷ್ಟು ಕಲೆಕ್ಷನ್ ಮಾಡುತ್ತದೆ ಎಂದು ಕಮೆಂಟ್ ಮಾಡಿ ತಿಳಿಸಿ.

WhatsApp Group Join Now
Telegram Group Join Now

ಇದನ್ನೂ ಓದಿ : ಕೇವಲ ಒಂದು ವಾರ ದಾಳಿಂಬೆ ಹಣ್ಣು ತಿಂದರೆ ಏನಾಗುತ್ತೆ ಅಂತ ಗೊತ್ತಾದ್ರೆ…

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಜಸ್ಟ್ ಕನ್ನಡ (Just Kannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ.

Leave a Reply