ಲೀಲಾವತಿ ಅವರ ಕೊನೆ ಆಸೆ ನೆರವೇರಿಸಲು ಹೊರಟ ವಿನೋದ್ ರಾಜ್! vinodraj leelavathi

leelavathi : ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ಲೀಲಾವತಿ ಇಂದು ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ತಾಯಿಯ ನಿಧನವನ್ನ ಪುತ್ರ ವಿನೋದ್ ರಾಜ್ ಖಚಿತಪಡಿಸಿದ್ದಾರೆ.

ಲೀಲಾವತಿ ನಿಧನಕ್ಕೆ ಚಿತ್ರರಂಗದ ತಾರೆಯರು ಕಂಬನಿ ಮಿಡಿದಿದ್ದಾರೆ. ಸುಮಾರು ಆರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಲೀಲಾವತಿ ಕನ್ನಡ ಚಿತ್ರರಂಗದ ಅಮ್ಮನಂತಿದ್ದರು. ಹಿರಿಯ ನಟಿಯ ಮನೋಜ್ಞ ಅಭಿನಯಕ್ಕೆ ಸಾಕಷ್ಟು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಅಷ್ಟೇ ಅಲ್ಲ, ಕನ್ನಡ ನಾಡು ನುಡಿಗೆ ಸಂಬಂಧಿಸಿದ ಹೋರಾಟಗಳಲ್ಲಿಯೂ ಪಾಲ್ಗೊಂಡಿದ್ದರು. ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಇವರ ಹುಟ್ಟೂರು.

WhatsApp Group Join Now
Telegram Group Join Now

ಇದೀಗ ಲೀಲಾವತಿ ಅಮ್ಮನ ಕೊನೆ ಆಸೆ ನೆರವೇರಿಸಲು ಅವರ ಮೃತದೇಹವನ್ನ ಮೊದಲು ಅವರು ವಾಸವಿದ್ದ ಹಳ್ಳಿ ಬಳಿ ಕೆಲ ಹೊತ್ತು ಅವರ ಹಳೆಯ ಮನೆಯ ಹತ್ತಿರ ಇಡಲಾಗುತ್ತೆ. ಬಳಿಕ ಅಲ್ಲಿಂದ ಸೋಲದೇವನಹಳ್ಳಿಯ ಅಂಬೇಡ್ಕರ್ ಕಾಲೇಜಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತೆ. ಲೀಲಾವತಿ ಅವರ ಆಸೆ ತಮ್ಮ ಮರಣದ ಬಳಿಕ ಅವರ ಮೃತದೇಹವನ್ನು ಅವರ ಹಳೆ ಮನೆಗೆ ತೆಗೆದುಕೊಂಡು ಹೋಗಬೇಕು ಎನ್ನುವುದು. ಅದರಂತೆ ಇದೀಗ ಲೀಲಾವತಿ ಅವರನ್ನ ಹಳೆಯ ಮನೆಯ ಕಡೆ ಕೊಂಡೊಯ್ಯಲಾಗುತ್ತಿದೆ.

WhatsApp Group Join Now
Telegram Group Join Now

Leave a Reply