ಬಿಕಿನಿ ಹಾಕಿಕೊಂಡು ಬಂದು ಎಲ್ಲರಿಗೂ ಶಾಕ್ ಕೊಟ್ಟ ಸಂಗೀತ.!Sangeetha Sringeriಬಿಕಿನಿ ಹಾಕಿಕೊಂಡು ಬಂದು ಎಲ್ಲರಿಗೂ ಶಾಕ್ ಕೊಟ್ಟ ಸಂಗೀತ.!

Sangeetha Sringeri : ಕನ್ನಡ ಬಿಗ್‌ಬಾಸ್ ಸೀಸನ್ 10 ರಲ್ಲಿ ಸಂಗೀತ ಶೃಂಗೇರಿ ಸಖತ್ ಸದ್ದು ಮಾಡ್ತಿದ್ದಾರೆ. 50 ದಿನಗಳನ್ನ ಪೂರೈಸಿ ಬಿಗ್ ಬಾಸ್ ನಲ್ಲಿ ಟಾಪ್ ಐದರಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಯಾಗಿ ಸಂಗೀತ ಶೃಂಗೇರಿ ಗುರುತಿಸಿಕೊಂಡಿದ್ದಾರೆ. ಅವರ ನೇರ ಮಾತುಗಳು ಬಿಗ್ ಬಾಸ್ ವೀಕ್ಷಕರಿಗೆ ಇಷ್ಟವಾಗಿದೆ.

ಮನೆಯ ಯಾವುದೇ ಚಟುವಟಿಕೆ, ಟಾಸ್ಕ್, ಮನರಂಜನೆ ಎಲ್ಲದರಲ್ಲೂ ಸಂಗೀತ ಮುಂದಿದ್ದಾರೆ. ಈಗಾಗಲೇ ಒಂದು ಹಿಟ್ ಸಿನಿಮಾದಲ್ಲಿ ನಟಿಸಿದ್ದರು. ಬಿಗ್ ಬಾಸ್ ಗೆ ಕಾಲಿಟ್ಟಿದ್ದು ಯಾಕೆ.? ಅಂತ ಒಂದಿಷ್ಟು ಜನ ಪ್ರಶ್ನೆ ಮಾಡಿದ್ರು. ಅದೇನೇ ಇದ್ದರೂ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡ ನಂತರದಲ್ಲಿ ಸಂಗೀತಾ ಶೃಂಗೇರಿ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ ಎನ್ನಬಹುದು.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Leelavathi : ನಟಿ ಲೀಲಾವತಿ ಪರಿಸ್ಥಿತಿ ಚಿಂತಾಜನಕ ! ನೋಡಲು ಓಡೋಡಿ ಬಂದ ದರ್ಶನ್ ! ಲೀಲಾವತಿ ಹೇಳಿದ್ದೇನು.? Darshan

ಇದೇ ಹಿಂದೆ ನಟಿ ಸಂಗೀತಾ ಶೃಂಗೇರಿ ನೀಡಿದ ಬೋಲ್ಡ್ ಹೇಳಿಕೆ ಒಂದು ಈಗ ವೈರಲ್ ಆಗ್ತಾ ಇದೆ. ಹಾಗಾದ್ರೆ ಬಿಗ್‌ ಬಾಸ್‌ ಗೆ ಹೋಗುವುದಕ್ಕೂ ಮುಂಚೆ ಅವರು ಏನು ಹೇಳಿದ್ರು.? ಬಿಕಿನಿ ಧರಿಸಿ ಫೋಟೋ ಶೂಟ್ ಮಾಡಿಸಿದ್ದು ಯಾಕೆ? ಇದರ ಬಗ್ಗೆ ನಟಿ ಹೇಳಿದ್ದೇನು.?

WhatsApp Group Join Now
Telegram Group Join Now

ಬಿಗ್ ಬಾಸ್ ಸೀಸನ್ 10 ರಲ್ಲಿ ಸ್ಪರ್ಧಿಸುತ್ತಿರುವ ಸಂಗೀತಾ ಶೃಂಗೇರಿ, ಒಮ್ಮೆ ಬಿಕಿನಿ ಧರಿಸಿ ಫೋಟೋಶೂಟ್ ಮಾಡಿಸಿದ್ದರು. ಆಗ ನೀಡಿದ ಬೋಲ್ಡ್ ಹೇಳಿಕೆ ಈಗ ವೈರಲ್ ಆಗುತ್ತಿದೆ. ನನಗೆ ಸುಮಾರು ಡಿಸೈನರ್‌ಗಳು ಪರಿಚಯ ಇದ್ದಾರೆ. ಬಾಲಿವುಡ್ ನಿಂದ ಕೂಡ ಪರಿಚಯ ಇದ್ದಾರೆ. ಅಲ್ಲಿನ ಡಿಸೈನರ್ಸ್ ನನ್ನನ್ನ ಭೇಟಿ ಮಾಡಿದಾಗ, ಯಾಕೆ ಸೌತ್ ಇಂಡಿಯನ್ಸ್ ಇನ್ನೂ ಹಳೆ ಸ್ಟೈಲ್ ನ ಫಾಲೋ ಮಾಡ್ತಿದ್ದಾರೆ ಅಂತ ಕೇಳಿದ್ದಾರೆ. ನಾವು ಹಳೆ ಸ್ಟೈಲ್ ನಲ್ಲಿ ಇದ್ದೀವಾ ಅಂತ ಯೋಚನೆ ಮಾಡಲು ಶುರು ಮಾಡಿದೆ.

ಇದನ್ನೂ ಕೂಡ ಓದಿ : Pension Scheme : 60 ವರ್ಷ ಮೇಲ್ಪಟ್ಟ ವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಈ ಕೆಲಸ ಮಾಡುವುದು ಕಡ್ಡಾಯ – ಇಲ್ಲಾಂದ್ರೆ ಹಣ ಬರಲ್ಲ.!

WhatsApp Group Join Now
Telegram Group Join Now

ಬಾಲ್ಯದಿಂದ ನನಗೆ ಒಂದು ಕನಸಿತ್ತು. ಎಲ್ಲ ರೀತಿಯ ಬಟ್ಟೆಗಳನ್ನ ಧರಿಸಬೇಕು ಅಂತ. ಆದರೆ ಸತಿ ಪಾತ್ರ ಮಾಡುವಾಗ ಬೋಲ್ಡ್ ಫೋಟೋಗಳನ್ನು ಅಪ್‌ಲೋಡ್ ಮಾಡಿದರೆ, ನನ್ನ ಪ್ರೊಡಕ್ಷನ್ ತಂಡ ಅದನ್ನ ಡಿಲೀಟ್ ಮಾಡುವುದಕ್ಕೆ ಹೇಳ್ತಾ ಇದ್ರು. ನಟನೆಗೆ ಕಾಲಿಡುವ ಮುನ್ನವೇ ಮಾಡೆಲ್ ಆಗಿದ್ದೆ. ನನಗೆ ಮೊದಲು ಪ್ರಶಸ್ತಿ ಸಿಕ್ಕಿದ್ದೆ, ವರ್ಲ್ಡ್ಸ್ ಸೂಪರ್ ಮಾಡೆಲ್ ಟೀನ್ ಅಂತ. ಇಂಡಸ್ಟ್ರಿಗೆ ಕಾಲಿಡದೇ ಇದ್ದಿದ್ರೆ ನಾನು ಮಾಡೆಲ್ ಆಗಿಯೇ ಇರುತ್ತಿದ್ದೆ.

ಇನ್ನು ಬಿಕಿನಿ ಹಾಕೋದು ಗ್ಲಾಮರ್ ತೋರಿಸೋದಕ್ಕೆ ಅಲ್ಲ. ನಾವು ಎಷ್ಟು ಫಿಟ್ ಇದ್ದೀವಿ ಅಂತ ನಮ್ಮ ಆಹಾರ ಶೈಲಿ ಮತ್ತು ಮಾಡುವ ವರ್ಕೌಟ್ ನಿಂದ ನಾವು ಫಿಟ್ ಆಗಿದ್ದೀವಿ. ಅದಕ್ಕೆ ಬಿಕಿನಿ ಹಾಕ್ತೀನಿ. ಫಿಟ್‌ನೆಸ್ ಕಾಳಜಿ ವಹಿಸಿದರೆ ಯಾರಿಗೂ ಆರೋಗ್ಯದಲ್ಲಿ ಸಮಸ್ಯೆ ಬರುವುದಿಲ್ಲ. ಹಲವು ವರ್ಷಗಳ ಹಿಂದೆಯೇ ನಾನು ಬಿಕಿನಿ ಹಾಕಿದ್ದೀನಿ. ಆದ್ರೆ ಅದು ಯಾರಿಗೂ ಗೊತ್ತಾಗಲಿಲ್ಲ. ಯಾಕಂದ್ರೆ ನಾನು ಆಗ ಫೇಮಸ್ ಆಗಿರಲಿಲ್ಲ. ನನ್ನ ಚಾರ್ಲಿ ಸಿನಿಮಾ ಬಿಡುಗಡೆಯಾದ ಮೇಲೆ ಫೇಮಸ್ ಆದೆ.

ಇದನ್ನೂ ಕೂಡ ಓದಿ : ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಹಾಗು ಮನೆ ನಿರ್ಮಿಸಿಕೊಂಡವರಿಗೆ ಬಂಪರ್ ಗುಡ್ ನ್ಯೂಸ್ // ತಮ್ಮ ಹೆಸರಿಗೆ ಖಾತಾ ನೋಂದಣಿ

ಹರಹರ ಮಹಾದೇವ ಸಮಯದಲ್ಲಿ ನಾನು ಸೀರೆ ಹಾಕಿಕೊಂಡು 60, 70 ರ ವಯಸ್ಸಿನವರ ರೀತಿ ಇರುತ್ತಿದ್ದೆ. ನನಗೆ ವಯಸ್ಸಿದೆ, ಯಾಕೆ ನಾನು ಈ ರೀತಿ ಡ್ರೆಸ್ ಹಾಕಿಕೊಳ್ತಿದ್ದೀನಿ ಅಂತ ಯೋಚನೆ ಮಾಡಿ ವರ್ಕ್‌ಔಟ್ ಮಾಡಲು ಶುರು ಮಾಡಿ, ನನಗೆ ಬೇಕಿರುವ ರೀತಿಯಲ್ಲಿ ಡ್ರೆಸ್ ಮಾಡಿಕೊಳ್ಳುತ್ತಿದ್ದೀನಿ. ಯಾರೇ ಕಷ್ಟ ಪಟ್ಟರು, ಈ ರೀತಿಯಾಗಿ ಡ್ರೆಸ್ ಹಾಕಬಹುದು ಅಂತ ತೋರಿಸಿಕೊಟ್ಟಿರುವೆ. ಪ್ರತಿಯೊಬ್ಬರಿಗೂ ಒಂದು ಶೈಲಿಯ ಬಟ್ಟೆ ಹಾಕ್ಬೇಕು ಅನ್ಸುತ್ತೆ. ಆದ್ರೆ ಅವರಿಗೆ ಅವಕಾಶ ಮತ್ತು ದೇಹದ ಸಪೋರ್ಟ್ ಮಾಡುವುದಿಲ್ಲ. ಅಂತಹವರಿಗೆ ನಾನು ಸ್ಪೂರ್ತಿ ನೀಡಿದ ಇದ್ದೀನಿ ಅಂತ ಸಂಗೀತ ಶೃಂಗೇರಿ ಹಿಂದೆ ಹೇಳಿಕೊಂಡಿದ್ದರು.

ಬಿಗ್ ಬಾಸ್ ನಲ್ಲಿ ಅವರು ಕಾಣಿಸಿಕೊಂಡ ನಂತರ ಎಲ್ಲ ವಿಡಿಯೋ ಗಳು ವೈರಲ್ ಆಗ್ತಾ ಇದೆ. ಸಂಗೀತ ಅವರ ಹಳೆ ವಿಡಿಯೋಗಳು ಮತ್ತೆ ಸದ್ದು ಮಾಡ್ತಾಯಿದೆ. ಹಾಗಾದರೆ ವೀಕ್ಷಕರೇ ಈ ಬಗ್ಗೆ ನೀವೇನಂತೀರಾ? ಈ ಬಾರಿಯ ಬಿಗ್ ಬಾಸ್ ಟ್ರೋಫಿಯನ್ನು ಯಾರು ಗೆಲ್ಲಬಹುದು? ತಪ್ಪದೆ ನಿಮ್ಮ ಅನಿಸಿಕೆ, ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

 ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply