Leelavati : ಲೀಲಾವತಿ ಇನ್ನಿಲ್ಲ ಎಂದವರಿಗೆ ಖಡಕ್ ಆಗಿ ಎಚ್ಚರಿಕೆ ಕೊಟ್ಟ ಮಗ ವಿನೋದ್ ರಾಜ್ ! ಚಿತ್ರರಂಗ‌ ಶಾಕ್.!

Leelavati : ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ(leelavati) ಅವರಿಗೆ ಈಗ 86 ರಿಂದ 87 ವರ್ಷ ವಯಸ್ಸು. ಇಳಿ ವಯಸ್ಸಿನಲ್ಲಿ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ವಯೋಸಹಜ ಸಮಸ್ಯೆಗಳಿಂದ ಹಾಸಿಗೆ ಹಿಡಿದಿದ್ದರು. ಹಿರಿಯ ನಟಿ ಮನೆಗೆ ಅರೋಗ್ಯ ವಿಚಾರಿಸಲು ಬಂದವರನ್ನು ಗುರುತು ಹಿಡಿಯುತ್ತಾರೆ. ಅವರಿಗೆ ಪ್ರತಿಕ್ರಿಯೆ ಕೂಡ ನೀಡುತ್ತಾರೆ.

ಇದನ್ನೂ ಕೂಡ ಓದಿ : Govt Scheme 2023 : ಪ್ರತೀ ತಿಂಗಳು ₹5,000/- ಬರುತ್ತೆ.! ರೈತರಿಗೆ, ಕೂಲಿ ಕಾರ್ಮಿಕರಿಗೆ, ವೃದ್ದರು, ವಿಧವೆಯರು, ಅಂಗವಿಕಲರಿಗೆ.!

ಹೀಗಿರುವಾಗ ಕೆಲ ಕಿಡಿಗೇಡಿಗಳು ಹಿರಿಯ ನಟಿ ಲೀಲಾವತಿ(leelavati) ನಿಧನರಾಗಿದ್ದಾರೆಂಬ ಸುದ್ದಿಯನ್ನು ಹಬ್ಬಿಸಿದ್ದರು. ಈ ಬಗ್ಗೆ ವಿನೋದ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್(Vinod raj) ಅವರು ಯೂಟ್ಯೂಬ್ ಚಾನೆಲ್ ವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ತಾಯಿ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಸುಳ್ಳು ಸುದ್ದಿ ಹಬ್ಬಿಸಿದವರನ್ನು ತರಾಟೆಗೆ ತೆಗೆದುಕೊಂಡಿದ್ದು, ನಡೆದಿದ್ದು ಏನು.? ಆಗಿದ್ದು ಏನು? ಯಾರಿಗೂ ಅರ್ಥ ಆಗಿಲ್ಲ ಎಂದು ಮಾರ್ಮಿಕವಾಗಿ ಹೇಳಿಕೆ ಕೊಟ್ಟಿದ್ದಾರೆ.

ಇದನ್ನೂ ಕೂಡ ಓದಿ : ಕೂಲಿ ಕೆಲಸ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್ – ಸ್ವಂತ ಜಮೀನು ಇಲ್ಲದ ಕೃಷಿ ಕಾರ್ಮಿಕರಿಗೆ ಉಚಿತ ಜಮೀನು!

ಹಿರಿಯ ನಟಿ ಲೀಲಾವತಿ(leelavati) ಹಾಗೂ ವಿನೋದ್ ರಾಜ್(Vinod raj) ಅವರ ವಿರುದ್ಧ ಕಿಡಿಗೇಡಿಗಳು, ಏನಾದರೊಂದು ಸುದ್ದಿಯನ್ನು ಹಬ್ಬಿಸುತ್ತಲೇ ಇರುತ್ತಾರೆ. ಅದ್ಯಾಕೆ ಸುದ್ದಿ ಹಬ್ಬಿಸಿದರು ಅನ್ನುವುದನ್ನು ಮಂಜುನಾಥನ ಹತ್ತಿರ ಬಿಟ್ಟಿದ್ದೀವಿ, ಅವನು ನೋಡಿಕೊಳ್ಳಬೇಕು ಅಷ್ಟೇ ಎಂದು ವಿನೋದ್ ರಾಜ್ ಅಸಹಾಯಕತೆ ಹೊರ ಹಾಕಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುವವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

Leave a Reply