Sangeeta shringeri : ಸಂಗೀತ ಇನ್ನೊಂದು ಮುಖ ಬಯಲು / ವಿನಯ್ ಬಲೆಗೆ ಬಿದ್ದಾರಾ ಸಂಗೀತಾ.? ಕಾರ್ತಿಕ್ ಹಾಗೂ ತುಕಾಲಿಗೆ ಮಾಡಿದ್ದೇನು.?

Sangeeta shringeri : ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿ ಆರು ವಾರ ಕಳೆದು ಏಳನೇ ವಾರಕ್ಕೆ ಕಾಲಿಟ್ಟಿದೆ. ಶುರುವಿನಿಂದಲೂ ಒಳ್ಳೆ ಸ್ನೇಹವನ್ನು ಹೊಂದಿದ್ದ ಕಾರ್ತಿಕ್, ಸಂಗೀತ, ತನಿಷಾ ನಡುವೆ ಬಿರುಕು ಮೂಡಿದೆ. ಇದನ್ನು ನೋಡಿದ ವಿನಯ್ ಒಳ್ಳೆ ಮಜಾ ತಗೋ ತಾ ಇದ್ದಾರೆ. ಅಂತ ಸ್ವತಃ ವಿಜಯ್ ಅವರೇ ಕಿಚ್ಚ ಸುದೀಪ್ ಅವರ ಮುಂದೆ ಹೇಳಿಕೊಂಡಿದ್ದಾರೆ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ಮುಗಿದ ನಂತರ ಸಂಗೀತ ಅವರು ತನಿಷಾ ಹಾಗೂ ಕಾರ್ತಿಕ್ ಅವರೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದಾರೆ. ಅದು ಸುದೀಪ್ ಹೇಳಿದ ಮಾತಿನಿಂದ ಬೇಜಾರಾದ ಸಂಗೀತ ಅವರು ಬಿಕ್ಕಿ ಬಿಕ್ಕಿ ಅಳುತ್ತಾರೆ.

ಅಷ್ಟೇ ಅಲ್ಲದೆ ತಡರಾತ್ರಿ ಸ್ವಿಮ್ಮಿಂಗ್ ಪೂಲ್ ಗೆ ಹಾರಿ ಈಜಲು ಶುರು ಮಾಡ್ತಾರೆ. ಇದನ್ನೆಲ್ಲ ಗಮನಿಸಿದ ವಿನಯ್ ಅಲ್ಲಿಯೇ ಇದ್ದು ಸಂಗೀತಾಗೆ ಸಮಾಧಾನ ಮಾಡ್ತಾರೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ. ಈ ಒಂದು ಘಟನೆಯಿಂದ ಸಂಗೀತಾ ಅವರು ವಿನಯ್ ಹಾಗೂ ನಮ್ರತ ಅವರ ಗುಂಪಿಗೆ ಸೇರಿಕೊಳ್ತಾರೆ. ತದನಂತರ ಸಂಗೀತ ಅವರು ಕಾರ್ತಿಕ್ ಹಾಗೂ ತನಿಶಾ ಅವರನ್ನು ದ್ವೇಷ ಮಾಡಲು ಶುರು ಮಾಡ್ತಾರೆ.

ಇದನ್ನೂ ಕೂಡ ಓದಿ : ಹೌದು ನನ್ನ ಮಗನಿಗೆ ಮದುವೆ ಆಗಿದೆ ಒಬ್ಬ ಗಂಡು ಮಗ ಸಹ ಇದ್ದಾನೆ । ನಮ್ಮ ಪಾಡಿಗೆ ನಮ್ಮನ್ನ ಬದುಕಲು ಬಿಟ್ಟು ಬಿಡಿ – ಲೀಲಾವತಿ

ಅಷ್ಟಕ್ಕೂ ಸಂಗೀತ ಅವರು ಕಾರ್ತಿಕ್ ಅವರ ತಲೆ ಬೋಳಿಸಿ ಕೊಳ್ಳಲು ಹೇಳಿದ್ದಾದರೂ ಯಾಕೆ.? ಸಂಗೀತ ಅವರು ನಮ್ರತಾ ಜೊತೆ ಸೇರಿ ಮುಗಿಬಿದ್ದಿದ್ದರು. ಬಿಗ್ ಬಾಸ್ ಮನೆಗೆ ಬ್ರಹ್ಮಾಂಡ ಗುರೂಜಿ ಎಂದೇ ಹೆಸರು ಮಾಡಿರುವ ನರೇಂದ್ರ ಶರ್ಮ ಅವರು ಆಗಮಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 1 ಶೋ ನಲ್ಲಿ ಭಾಗವಹಿಸಿ ಮುಂಡಾ ಮುಚ್ಚಿತು ಅಂತ ಹೇಳಿ ನಗಿಸಿದ್ದನ್ನು ವೀಕ್ಷಕರೆಲ್ಲ ನೋಡೇ ಇರ್ತೀರಿ. ಬಿಗ್‌ಬಾಸ್ ಕನ್ನಡ ಸೀಸನ್ 10 ಮನೆಗೆ ಪ್ರತಿ ವಾರ ಒಬ್ಬರಲ್ಲ ಒಬ್ಬರು ಅತಿಥಿಗಳು ಬಂದು ಹೋಗ್ತಾ ಇದ್ದಾರೆ. ಹಾಗೆಯೇ ಈ ವಾರ ಗುರುಜಿ ಕೂಡ ಬಂದು ಸ್ಪರ್ಧಿಗಳನ್ನ ಆಟ ಆಡಿಸಿದರು.

ಗಜಕೇಸರಿ ಹಾಗೂ ಸಂಪತ್ತಿಗೆ ಸವಾಲ್ ಎಂಬ ಟೀಕೆಗಳ ಮಧ್ಯೆ ಅಚ್ಚರಿ ಎಂಬಂತೆ ಒಂದು ಗೇಮ್ ನಡೆಯುತ್ತೆ. ಗಜಕೇಸರಿ ಟಿಂಗ್‌ನಲ್ಲಿ ವಿನಯ್, ಸ್ನೇಹಿತ್ ಗೌಡ, ಸಿರಿ, ಸಂಗೀತಾ ಶೃಂಗೇರಿ, ನಮ್ರತಾ ಗೌಡ ಹಾಗೂ ಪ್ರತಾಪ್ ಅವರು ಇರ್ತಾರೆ. ಸಂಪತ್ತಿಗೆ ಸವಾಲ್ ಟೀಮ್ ನಲ್ಲಿ ಮೈಕಲ್, ಅಜಯ್, ನೀತು, ವನಜಾಕ್ಷಿ, ತನಿಶಾ ಕುಪ್ಪಂಡ, ವರ್ತೂರ್ ಸಂತೋಷ್, ಕಾರ್ತಿಕ್ ಹಾಗು ತುಕಾಲಿ ಸಂತು ರವರು ಇರ್ತಾರೆ. ಸ್ಪರ್ಧಿಗಳು ತಮ್ಮ ಎದುರಾಳಿ ತಂಡಕ್ಕೆ ಸವಾಲನ್ನು ನೀಡಿದ್ದರು. ಈ ಬಾರಿ ಸಂಗೀತ ಅವರು ಕಾರ್ತಿಕ್ ಟೀಂ ನಲ್ಲಿ ಇಲ್ಲ. ಹೀಗಾಗಿ ಸಂಗೀತ ಅವರು ಕಾರ್ತಿಕ್ ಹಾಗು ತುಕಾಲಿ ಸ್ಟಾರ್ ಸಂತುಗೆ ತಲೆ ಕೂದಲನ್ನು ಶೇವ್ ಮಾಡಬೇಕು ಅಂತ ಸವಾಲ್ ನೀಡುತ್ತಾರೆ.

ಇದನ್ನೂ ಕೂಡ ಓದಿ : ಹೌದು ನನ್ನ ಮಗನಿಗೆ ಮದುವೆ ಆಗಿದೆ ಒಬ್ಬ ಗಂಡು ಮಗ ಸಹ ಇದ್ದಾನೆ । ನಮ್ಮ ಪಾಡಿಗೆ ನಮ್ಮನ್ನ ಬದುಕಲು ಬಿಟ್ಟು ಬಿಡಿ – ಲೀಲಾವತಿ

ಕೂದಲು ಎಲ್ಲಿಯೂ ಹೋಗಲ್ಲ ಮತ್ತೆ ಬರುತ್ತೆ. ನನ್ನ ತಂಡಕೋಸ್ಕರ ಪಾಯಿಂಟ್ ಗೋಸ್ಕರ ಈ ಸವಾಲನ್ನ ಸ್ವೀಕಾರ ಮಾಡ್ತೀನಿ ಅಂತ ಕಾರ್ತಿಕ್ ಅವರು ಶೇವ್ ಮಾಡಿಕೊಂಡಿದ್ದಾರೆ. ಸಂತು ಕೂಡ ಶೇವ್ ಮಾಡಿಕೊಂಡಿದ್ದಾರೆ. ಸಂಗೀತ ಅವರು ಈ ರೀತಿ ಸವಾಲು ಕೊಟ್ಟಿದ್ದನ್ನ ನೋಡಿ ತನಿಷ ಕುಪ್ಪಂಡ ಅವರಿಗೆ ಸಿಟ್ಟು ಬಂದಿದೆ. ಇವರಿಬ್ಬರು ಬದಲು ಒಬ್ಬರಿಗೆ ಟಾಸ್ಕ್ ಕೊಡಿ. ಇಷ್ಟ ಬಂದ ಹಾಗೆ ಮಾತಾಡಬೇಡಿ. ಅದು ಆಗಲ್ಲ ಅಂತ ತನಿಷಾ ಅವರು ಸಂಗೀತಾಗೆ ಹೇಳಿದ್ದಾರೆ. ನೀವು ಕೂಡ ಸಡನ್ ಆಗಿ ಮಾತಾಡಬೇಡಿ ಅಂತ ಸಂಗೀತ ಅವರು ತನಿಶಾ ಅವರಿಗೆ ಹೇಳಿದ್ದಾರೆ.

ಇನ್ನೊಂದು ಕಡೆ ನಮೃತ ಗೌಡ, ಬಾಯಿ ಇದೆ ಅಂತ ಮಾತಾಡಬೇಡಿ. ಮುಚ್ಚಿಕೊಂಡಿರಬೇಕು ಎಂದು ತನೀಶಾ ಜೊತೆ ಜಗಳ ಆಡ್ತಾರೆ. ಸಂಗೀತಾ ಅವರು ಈ ಸವಾಲು ಕೊಟ್ಟಿದ್ದು ಕಾರ್ತಿಕ್ ತಲೆ ಬೋಳಿಸಿಕೊಂಡಿದ್ದು ನೋಡಿ ತನಿಷಾ ಬೇಸರ ಮಾಡಿಕೊಂಡಿದ್ದಾರೆ. ಈಗ ನಿಮಗೆ ಖುಷಿ ಆಯ್ತಾ ಮೇಡಂ ಎಂದು ತನಿಷಾ ಅವರು ಸಂಗೀತಾಗೆ ಕೇಳ್ತಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯ ತಿಳಿದು ಅನೇಕರು ಬೇಸರ ಮಾಡಿಕೊಂಡಿದ್ದಾರೆ. ಕಾರ್ತಿಕ್ ಹಾಗೂ ತುಕಾಲಿ ಸಂತು ಅವರಿಗೆ ಸಂಗೀತಾ ಅವರು ಈ ರೀತಿ ಟಾಂಗ್ ನೀಡಿದ್ದು ನೋಡಿ ಅನೇಕರು ಬೇಜಾರಾಗಿದ್ದಾರೆ.

ಇದನ್ನೂ ಕೂಡ ಓದಿ : ಹೌದು ನನ್ನ ಮಗನಿಗೆ ಮದುವೆ ಆಗಿದೆ ಒಬ್ಬ ಗಂಡು ಮಗ ಸಹ ಇದ್ದಾನೆ । ನಮ್ಮ ಪಾಡಿಗೆ ನಮ್ಮನ್ನ ಬದುಕಲು ಬಿಟ್ಟು ಬಿಡಿ – ಲೀಲಾವತಿ

ಕಾರ್ತಿಕ್ ಹಾಗೂ ತನಿಶಾ ಅವರು ನನಗೆ ಆದ್ಯತೆ ಕೊಡಲ್ಲ. ಟಾಸ್ಕ್ ನಲ್ಲಿ ಅವರು ನನ್ನ ಹೆಸರನ್ನು ತಗೊಳ್ಳಿಲ್ಲ ಅಂತ ಸಂಗೀತಾಗೆ ಬೇಸರವಿದ್ದು, ಇನ್ನು ಕಾರ್ತಿಕ್ ಅವರು ತನಿಷಾ ಅವರನ್ನ ಬೆಂಬಲಿಸಿದರು. ಅದು ಸಂಗೀತಾಗೆ ಇಷ್ಟ ಆಗಿಲ್ಲ. ಕಾರ್ತಿಕ್ ಹಾಗೂ ಸಂಗೀತ ಮದ್ಯೆ ಸ್ನೇಹವಿದ್ದು, ಕಾರ್ತಿಕ್ ತನ್ನನ್ನು ಬಿಟ್ಟು ಬೇರೆ ಯಾರಿಗೋ ಆದ್ಯತೆ ಕೊಟ್ಟರೆ ಇದನ್ನು ಸಂಗೀತಾ ಒಪ್ಪುವುದಿಲ್ಲ.

ಇಷ್ಟೆಲ್ಲವನ್ನೂ ಗಮನಿಸಿದ ಸಂಗೀತಾರವರು, ಕಾರ್ತಿಕ್ ಗೆ ಈ ರೀತಿಯಾಗಿ ಟಾಸ್ಕ್ ನಲ್ಲಿ ಸಿಟ್ಟು ತೀರಿಸಿಕೊಂಡಿದ್ದಾರೆ ಎಂಬಂತೆ ಕಾಣುತ್ತಿದೆ ಎಂದು ಬಿಗ್ ಬಾಸ್ ನೋಡುವ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಗಳ ಮೂಲಕ ಹೊರ ಹಾಕುತ್ತಿದ್ದಾರೆ. ಕಾರ್ತಿಕ್, ತನಿಷಾ ಹಾಗೂ ಸಂಗೀತ ಅವರ ಫ್ರೆಂಡ್ ಅಲ್ಲಿ ರಿಯಲ್ ಯಾರು? ಫೇಕ್ ಯಾರು ಎಂದು ತಪ್ಪದೇ ಕಮೆಂಟ್ ಮೂಲಕ ನಮಗೆ ತಿಳಿಸಿ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಟ್ ಕೊಡುವುದರ ಮೂಲಕ ನಮಗೆ ತಿಳಿಸಿ ಇನ್ನಷ್ಟು ಬಿಗ್ ಬಾಸ್ ನ ಅಪ್ ಡೇಟ್ ಗಳಿಗಾಗಿ ಈ ಕೂಡಲೇ ನಮ್ಮ ವೆಬ್ ಸೈಟ್ ನ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

Leave a Reply