Actor Sudeep : ಪ್ರಸಿದ್ಧ ವಾಲ್ಮೀಕಿ ಜಾತ್ರೆಗೆ ನಟ ಕಿಚ್ಚ ಸುದೀಪ್‌ ಗೆ ಆಹ್ವಾನ ಇಲ್ವಾ.? ಜಾತ್ರಾ ಕಮಿಟಿಯ ತೀರ್ಮಾನ.?

Actor Sudeep : ಪ್ರತೀ ವರ್ಷ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಅದ್ಧೂರಿಯಾಗಿ ನಡೆಯುವ ಪ್ರಸಿದ್ಧ ವಾಲ್ಮೀಕಿ ಜಾತ್ರೆಗೆ ಈ ಬಾರಿ ನಟ ಸುದೀಪ್ ಅವರನ್ನು ಕರೆಯದಿರಲು ಜಾತ್ರಾ ಕಮಿಟಿ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಇದೇ ತಿಂಗಳ 8 ಹಾಗು 9 ಕ್ಕೆ ವಾಲ್ಮೀಕಿ ಜಾತ್ರೆಯನ್ನ ಆಯೋಜಿಸಲಾಗಿದೆ.

ನಟ ಸುದೀಪ್ ಬಂದಾಗ ಜಾತ್ರೆಯಲ್ಲಿ ಆಗುತ್ತಿರುವ ಗಲಾಟೆ – ಗೊಂದಲಗಳ ಕಾರಣಕ್ಕಾಗಿ ಕಿಚ್ಚ ಸುದೀಪ್ ಅವರನ್ನು ಜಾತ್ರೆಗೆ ಆಹ್ವಾನಿಸದಿರಲು ಜಾತ್ರಾ ಕಮಿಟಿ ನಿರ್ಧಾರ ಮಾಡಿದೆ. ಇದು ಕಿಚ್ಚನ ಅಭಿಮಾನಿಗಳಿಗೆ ಸಾಕಷ್ಟು ನಿರಾಶೆ ಮತ್ತು ಆಕ್ರೋಶವನ್ನು ಉಂಟು ಮಾಡಿದೆ. ಸುದೀಪ್ ಅವರು ವಾಲ್ಮೀಕಿ ಸಮುದಾಯದ ನಾಯಕ ಆಗಿರುವುದರಿಂದ ವಾಲ್ಮೀಕಿ ಜಾತ್ರೆಗೆ ಸುದೀಪ್ ಅವರ ಆಗಮನವನ್ನು ಪ್ರತೀ ವರ್ಷ ಅಭಿಮಾನಿಗಳು ನಿರೀಕ್ಷೆ ಮಾಡುತ್ತಾರೆ.

WhatsApp Group Join Now
Telegram Group Join Now

WhatsApp Group Join Now
Telegram Group Join Now

Leave a Reply