ಅಂದು ಕ್ರಾಂತಿ ಸಿನಿಮಾ ಚಿತ್ರೀಕರಣ 15 ದಿನ ನಿಲ್ಲಿಸಿದ್ದರು ಏಕೆ ಗೊತ್ತೆ.? | Darshan Thoogudeepa

ಸ್ಯಾಂಡಲ್‌ ವುಡ್‌ ನಲ್ಲಿ ಇದೀಗ ಅಭಿಮಾನಿಗಳ ಮಧ್ಯೆಯೆ ಕಿಚ್ಚು ಹೊತ್ತಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಷ್ಟೇ ಅಲ್ಲದೇ ಹೊರಗಡೆಯೂ ಕೂಡ ಈ ಫ್ಯಾನ್‌ ವಾರ್‌ ಹಬ್ಬಿಕೊಂಡಿದೆ. ಇದಕ್ಕೆ ಒಂದು ತಾಜಾ ಉದಾಹರಣೆಯೆಂದರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವಿನ ಫ್ಯಾನ್ ವಾರ್.

ಇದನ್ನೂ ಕೂಡ ಓದಿ : Rishabh Shetty | ರಿಷಬ್ ಶೆಟ್ಟಿ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು(2012-2023) | Rishabh Shetty Hit And Flop Movies

WhatsApp Group Join Now
Telegram Group Join Now

ಹೊಸಪೇಟೆಯಲ್ಲಿ ನಡೆದ ಕ್ರಾಂತಿ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದು ಕಿಡಿಗೇಡಿಗಳು ಫ್ಯಾನ್‌ ವಾರ್‌ ಅನ್ನು ಸದುಪಯೋಗಪಡಿಸಿಕೊಂಡಿದ್ದರು. ಯಾರೋ ಮೂರನೇಯವರು , ಕಿಡಿಗೇಡಿಗಳು ಮಾಡಿದ ನೀಚ ಕೆಲಸದಿಂದ ಕೆಸರೆರೆಚಿಸಿಕೊಂಡವರು ಮಾತ್ರ ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್‌ ಅವರ ಅಭಿಮಾನಿಗಳು.

I know why the shooting of Kranti movie was stopped for 15 days

ಹೌದು, ಈ ಕೃತ್ಯವನ್ನು ಎಸಗಿದ್ದು ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳೇ ಎಂದು ದರ್ಶನ್ ಅಭಿಮಾನಿಗಳು ಆರೋಪಿಸಿದರೆ, ಇದನ್ನು ಯಾವುದೇ ಕಾರಣಕ್ಕೂ ಅಪ್ಪು ಫ್ಯಾನ್ಸ್ ಮಾಡಿಲ್ಲ ಎಂದು ಅವರ ವಾದಕ್ಕೆ ಪ್ರತಿವಾದವೆಂಬಂತೆ ಪುನೀತ್ ರಾಜ್‌ ಕುಮಾರ್‌ ಫ್ಯಾನ್ಸ್ ಇದ್ದರು. ಹೀಗಾಗಿ ಇಬ್ಬರು ಬಹುದೊಡ್ಡ ಕಲಾವಿದರ ಅಭಿಮಾನಿಗಳ ನಡುವಿನ ಈ ಕಿಡಿಗೇಡಿಗಳು ಹಚ್ಚಿದ ಕಿಚ್ಚು ಮತ್ತಷ್ಟು ಹೆಚ್ಚಾಗಿ ದೊಡ್ಡ ಮಟ್ಟದ ವಿವಾದವನ್ನೇ ಹುಟ್ಟುಹಾಕಿ, ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Dr. Puneeth Rajkumar ಪುನೀತ್ ರಾಜ್ ಕುಮಾರ್ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2021) | Puneeth Rajkumar Hit And Flop Movies

I know why the shooting of Kranti movie was stopped for 15 days

ಅಷ್ಟೇ ಅಲ್ಲದೇ ಇದಕ್ಕೆ ಪೂರಕವೆಂಬಂತೆ ಫ್ಯಾನ್‌ ವಾರ್‌ ಜೊತೆಗೆ ಇದರಲ್ಲಿ ಸ್ಟಾರ್ ಗಳ ಮಧ್ಯೆ ವಾರ್ ಕೂಡ ಇದೆ. ಹೀಗಾಗಿ ಯಾರೂ ಕೂಡ ಈ ವಿಷಯದ ಕುರಿತು ಮಾತನಾಡುತ್ತಿಲ್ಲ ಎಂಬ ಅಭಿಪ್ರಾಯವೂ ಸಹ ಕೆಲವರಲ್ಲಿ ವ್ಯಕ್ತವಾಗಿತ್ತು. ಈ ಅಭಿಪ್ರಾಯದ ಕುರಿತಾಗಿ ನಿರ್ಮಾಪಕ ಉಮೇಶ್ ಬಣಕರ್ (Producer Umesh Banaker) ಪ್ರತಿಕ್ರಿಯೆ ನೀಡಿದ್ದಾರೆ. ಸಿನಿರಸಿಕರ ಸ್ಟಾರ್‌ ವಾರ್‌ ಅಭಿಪ್ರಾಯದ ಕುರಿತು ಮಾತನಾಡಿದ ಉಮೇಶ್ ಬಣಕರ್, ” ಇವೆಲ್ಲಾ ಸತ್ಯಕ್ಕೆ ತುಂಬಾ ದೂರವಾದ ಮಾತು. ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ವಿಷಯ ತಿಳಿಯುತ್ತಿದ್ದಂತೆ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದ ದರ್ಶನ್ ಆ ಕೂಡಲೇ ಶೂಟಿಂಗ್ ನಿಲ್ಲಿಸಿದ್ದರು. ಅಲ್ಲದೇ 15 ದಿನಗಳ ಕಾಲ ಯಾವುದೇ ಶೂಟಿಂಗ್ ಮಾಡುವುದು ಬೇಡ ಎಂದು ಹೇಳಿದ್ದರು. ಇಬ್ಬರ ನಡುವೆ ಅಂತಹ ಸ್ನೇಹ ಇತ್ತು.” ಎಂದು ತಿಳಿಸಿದರು. ಅವರ ಸ್ನೇಹಕ್ಕೆ ಈ ವಿಷಯವೇ ಸಾಕ್ಷಿ ಎಂದಿದ್ದಾರೆ.

WhatsApp Group Join Now
Telegram Group Join Now
I know why the shooting of Kranti movie was stopped for 15 days

ಈ ಫ್ಯಾನ್‌ವಾರ್ ಎಂಬುದನ್ನು ಒಬ್ಬ ಕಲಾವಿದನ ನಿಜವಾದ ಅಭಿಮಾನಿಗಳು ಮಾಡಲು ಸಾಧ್ಯವಿಲ್ಲ, ಇಬ್ಬರ ಮಧ್ಯೆ ತಂದಿಟ್ಟು ತಮಾಷೆ ನೋಡಿ ತೀಟೆ ತೀರಿಸಿಕೊಳ್ಳುವವರು ಮಾತ್ರ ಮಾಡುವ ಕೆಲಸವಿದು. ಹೇಗಿದ್ದರೂ ಜಿಯೋದಲ್ಲಿ ಮೂರು ತಿಂಗಳಿಗಳಿಗೊಮ್ಮೆ ಹಣ ಕಟ್ಟಿ ಡೇಟಾ ಬಳಸುವ ಅವಕಾಶವಿದೆ, ಹೀಗಾಗಿ ಕೆಲಸವಿಲ್ಲದ ಕಿಡಿಗೇಡಿಗಳು ಇಬ್ಬರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣ ಎಂಬ ಆಯುಧ ಬಳಸಿ ಬೆಂಕಿ ಹಚ್ಚುತ್ತಿದ್ದಾರೆ.” ಎಂದಿದ್ದಾರೆ

ಇದನ್ನೂ ಕೂಡ ಓದಿ : Darshan Thoogudeepa, (ದರ್ಶನ್) ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2023) | Darshan Hit and Flop Movies

ಇನ್ನು ದರ್ಶನ್ ಆಪ್ತ ಗೆಳೆಯರಲ್ಲಿ ಒಬ್ಬರಾದ ವಿನೋದ್ ಪ್ರಭಾಕರ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದಾಗ ದರ್ಶನ್ ಅವರು ಯಾವ ರೀತಿ ಪ್ರತಿಕ್ರಿಯಿಸಿದ್ರು ಎಂಬುದನ್ನು ತಿಳಿಸಿದ್ದರು. ದರ್ಶನ್‌ ಆಗಲಿ ಪುನಿತ್‌ ರಾಜ್ ಕುಮಾರ್‌ ಅಗಲಿ ತಮ್ಮ ಅಭಿಮಾನಿಗಳಿಗೆ ವಾರ್‌ ಮಾಡಲು ಪ್ರೇರೆಪಿಸಿಲ್ಲ, ಅಂತಹ ಹೇಳಿಕೆಗಳನ್ನು ಇದುವರೆಗೂ ನೀಡಿಲ್ಲ ಎಂದಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply