Bigg Boss Kannada : ಕಾರ್ತಿಕ್ ಗೆ ಆತುರ ಜಾಸ್ತಿ ತಿರುಗಿಬಿದ್ದ ತನಿಷಾ ಕುಪ್ಪಂಡ

Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಕುಚಿಕುಗಳಾಗಿದ್ದ ತನಿಶಾ ಕಾರ್ತಿಕ್ ನಡುವೆ ಕಿರಿಕ್ ಆಗಿದೆ. ಕಾರ್ತಿಕ್ ಗೆ ಆತುರ ಜಾಸ್ತಿ ಅಂತ ಗೆಳೆಯನಿಗೆ ತನಿಶಾ ಉಲ್ಟಾ ಹೊಡೆದಿದ್ದಾರೆ. ಇದರಿಂದ ಕಾರ್ತಿಕ್ ಕೂಡ ಖಡಕ್ ಆಗಿ ರಿಯಾಕ್ಟ್ ಮಾಡಿದ್ದಾರೆ. ದೊಡ್ಮನೆ ಆಟ 85 ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಇದೀಗ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ.

ಇದನ್ನೂ ಕೂಡ ಓದಿ : 2024 ಯಾರಿಗೆ ಗ್ರಹಲಕ್ಷ್ಮಿ ಹಣ ಜಮಾ ಆಗುತ್ತಿಲ್ಲಾ, ಹೀಗೆ ಮಾಡಿ ಹಣ ಜಮಾ ಆಗುತ್ತೆ — ಮಹಿಳೆಯರಿಗೇ ಬಂಪರ್ ಗುಡ್ ನ್ಯೂಸ್

WhatsApp Group Join Now
Telegram Group Join Now

ಘಟಾನುಘಟಿ ಸ್ಪರ್ಧಿಗಳು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಸದ್ಯ ಒಂಬತ್ತು ಸ್ಪರ್ಧಿಗಳು ಬಿಗ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಹೀಗಿರುವಾಗ ಚೆನ್ನಾಗಿದ್ದ ತನಿಶಾ ಕಾರ್ತಿಕ್ ನಡುವೆ ಬಿರುಕು ಮೂಡಿದೆ. ಬಿಗ್ ಬಾಸ್ ಟಾಸ್ಕ್ ವೊಂದನ್ನ ನೀಡಿದ್ದರು. ಅದರಲ್ಲಿ ಕೆಲ ಸ್ಪರ್ಧಿಗಳು ಫೇಲ್ ಆದ್ರೂ, ಆಟದಲ್ಲಿ ಯಾರು ಅನರ್ಹರು ಅಂತ ಬಿಗ್ ಬಾಸ್ ಸೂಚಿಸಲು ಹೇಳಿದರು. ಆಗ ತನಿಷಾ ಕಾರ್ತಿಕ್ ಗೆ ಆತುರ ಜಾಸ್ತಿ, ತಾನೆ ಎಲ್ಲ ಮಾಡಿದ್ದು ಎಂಬ ಫೀಲ್ ಇದೆ. ಅದು ಅವರಿಗೆ ಉಲ್ಟಾ ಹೊಡೆದಿರುವುದು ಅಂತ ಕಾರಣ ಕೊಟ್ಟಿದ್ದಾರೆ.

ಇದನ್ನೂ ಕೂಡ ಓದಿ : ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಯೋಜನೆ / ಅರ್ಜಿ ಸಲ್ಲಿಸಿ ಉಚಿತವಾಗಿ ಪಡೆಯಿರಿ

WhatsApp Group Join Now
Telegram Group Join Now

ಈ ವೇಳೆ ತನಿಶಾ ಮಾತಿಗೆ ನಮೃತ ಗೌಡ ವಿರೋಧಿಸಿದ್ದಾರೆ. ತಾಳ್ಮೆ ಅಂತ ಬಂದಾಗ ನೀವು ಕಾರ್ತಿಕ್ ನ ಹೊರಗೆ ಇರ್ತೀರಾ, ಆದ್ರೆ ನಿಮಗೆ ತಾಳ್ಮೆ ಇದೆ ಅಂತ ನನಗೆ ಅನಿಸ್ತಾ ಇಲ್ಲ ಅಂತ ನಮ್ರತ ತಿರುಗೇಟು ಕೊಟ್ಟಿದ್ದಾರೆ. ಬಳಿಕ ಕಾರ್ತಿಕ್ ಕೂಡ ತುಸು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ತನಿಶಾಗೆ ಕಾರಣ ನೀಡುವಾಗ ಸರಿಯಾದ ಕಾರಣ ಕೊಡಿ ಅಂತ ಕಾರ್ತಿಕ್ ಕಡ್ಡಿ ಮುರಿದಂತೆ ಮಾತನಾಡಿದ್ದಾರೆ. ಇಬ್ಬರ ಮಾತಿನ ವಾಗ್ದಾಳಿಗೆ ಮನೆಮಂದಿ ಸೈಲೆಂಟ್ ಆಗಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply