ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಆರೋಗ್ಯ ಸ್ಥಿತಿ ಗಂಭೀರ.! Bharathi Vishnuvardhan

Bharathi Vishnuvardhan : ಇತ್ತೀಚಿಗಷ್ಟೆ ಹಿರಿಯ ನಟಿ ಲೀಲಾವತಿ ಇಹಲೋಕ ತ್ಯಜಿಸಿದ್ದರು. ಇದೀಗ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ಅನಾರೋಗ್ಯ ಉಂಟಾಗಿರುವ ಸುದ್ದಿ ಕೇಳಿ ಸ್ಯಾಂಡಲ್‌ವುಡ್ ಮಂದಿಗೆ ಶಾಕ್ ಆಗಿದೆ. ಭಾರತಿ ವಿಷ್ಣುವರ್ಧನ್ ಅವರು ಮಂಡಿ ನೋವಿನಿಂದ ಹಾಸಿಗೆ ಹಿಡಿದಿರುವ ಬಗ್ಗೆ ಅಳಿಯ ಅನಿರುದ್ಧ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಕೂಡ ಓದಿ : ಅಪ್ಪುವಿನ ಈ ಒಂದು ಆಸೆ ಈಡೇರಲೇ ಇಲ್ಲ ಎಂದು ಬೇಜಾರು ಮಾಡಿಕೊಂಡ ಅಶ್ವಿನಿ ಪುನೀತ್ ರಾಜ್ ಕುಮಾರ್

WhatsApp Group Join Now
Telegram Group Join Now

ಅಮ್ಮನ ಆರೋಗ್ಯ ಸರಿಯಿಲ್ಲ, ಅನಾರೋಗ್ಯ ಕಾಡುತ್ತಿದೆ ಎಂದಿದ್ದಾರೆ. ಮಂಡಿ ನೋವಿನಿಂದ ಭಾರತಿ ಅಮ್ಮ ಹಾಸಿಗೆ ಹಿಡಿದಿದ್ದಾರೆ. ಅವರಿಗೆ ಊಟವನ್ನು ಹೆಚ್ಚಾಗಿ ತಿನ್ನಲು ಆಗ್ತಿಲ್ಲ ನಿಶ್ಯಕ್ತರಾಗಿದ್ದಾರೆ ಎಂದು ಅನಿರುದ್ಧ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಕೆಲ ದಿನಗಳಿಂದ ಭಾರತಿ ವಿಷ್ಣುವರ್ಧನ್ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎರಡು ತಿಂಗಳಿಂದ ಅವರು ಎಲ್ಲೂ ಹೋಗಿಲ್ಲ. ಮನೆಯಲ್ಲಿಯೇ ಬೆಡ್ ರೆಸ್ಟ್ ತೆಗೆದುಕೊಳ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಕೂಡ ಓದಿ : ಮಹಿಳೆಯರಿಗೆ ಮೋದಿ ಗ್ಯಾರಂಟಿ ಯೋಜನೆ / ಮಹಿಳೆಯರಿಗೆ ಪ್ರತೀ ತಿಂಗಳು ಹಣ ಘೋಷಣೆ / ಗ್ರಾಮೀಣ ಮಹಿಳೆಯರಿಗೆ ಹೊಸ ಯೋಜನೆ

WhatsApp Group Join Now
Telegram Group Join Now

ವಯೋಸಹಜ ಸಮಸ್ಯೆಗಳಿಂದ ನಟಿ ಭಾರತಿ ವಿಷ್ಣುವರ್ಧನ್ ಬಳಲುತ್ತಿದ್ದಾರೆ. ಎಲ್ಲರ ಹಾರೈಕೆಯಂತೆ ಬೇಗ ಗುಣಮುಖರಾಗುತ್ತಾರೆ ಎನ್ನುವ ನಂಬಿಕೆ ನಮಗಿದೆ ಎಂದು ಭಾರತಿ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಹೇಳಿದ್ದಾರೆ. ಹೀಗಾಗಿ ಭಾರತಿ ವಿಷ್ಣುವರ್ಧನ್ ಅವರು ನಟಿ ಲೀಲಾವತಿ ಅವರ ಅಂತ್ಯಕ್ರಿಯೆ ಗೂ ಭಾಗವಹಿಸಿರಲಿಲ್ಲ. ಆದಷ್ಟು ಬೇಗ ನಟಿ ಭಾರತಿ ವಿಷ್ಣುವರ್ಧನ್ ಅವರು ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

Leave a Reply