Bigg Boss Kannada : ಸಂಗೀತಾ ಹಾಗು ಕಾರ್ತಿಕ್ ಮಧ್ಯೆ ಹುಳಿ ಹಿಂಡಿದ ವಿನಯ್.! ದೊಡ್ಮನೆಯಲ್ಲಿ ನಡೆದೇ ಹೋಯ್ತು ದೊಡ್ಡ ಬಿರುಕು.!

Bigg Boss Kannada : ಕಿಚ್ಚ ಸುದೀಪ್(Kiccha Sudeep) ನಡೆಸಿಕೊಡುವ ಬಿಗ್ ಬಾಸ್ ಕನ್ನಡ ಸೀಸನ್ 10 ಎರಡನೇ ವಾರಕ್ಕೆ ಕಾಲಿಟ್ಟಿದೆ. ದಿನದಿನಕ್ಕೂ ಮನೆ ಕಾವೇರುತ್ತಿದೆ. ಇಷ್ಟು ದಿನಗಳ ಕಾಲ ನಗುನಗುತ್ತಾ ಸ್ನೇಹದಿಂದ ಇದ್ದ ಸ್ಪರ್ಧಿಗಳ ನಡುವೆ ಮನಸ್ತಾಪ ಶುರುವಾಗಿದೆ. ಮಾತಿನ ಚಕಾಮಕಿ, ಜಗಳ ಮುನಿಸು ಹೆಚ್ಚುತ್ತಲೇ ಇದೆ. ಇಷ್ಟು ದಿನಗಳ ಕಾಲ ಆತ್ಮೀಯರಾಗಿದ್ದ ಕಾರ್ತಿಕ್(Kartik), ಸಂಗೀತಾ(Sangeeta) ನಡುವೆ ಕೂಡ ಈಗ ಬಿರುಕು ಉಂಟಾಗಿದೆ ಎನ್ನುವ ಅನುಮಾನ ಶುರುವಾಗಿದೆ.

Whatsapp Group Join
Telegram channel Join

ಬಿಗ್ ಬಾಸ್ ಮನೆಯೊಳಗೇ ಹೋದಾಗಿನಿಂದ ಚಾರ್ಲಿ ಬೆಡಗಿ ಸಂಗೀತಾ(Sangeeta) ಮತ್ತು ಕಾರ್ತಿಕ್(Kartik) ಬಹಳ ಚೆನ್ನಾಗಿದ್ದರು. ನಾಮಿನೇಷನ್, ಟಾಸ್ಕ್ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಒಬ್ಬರಿಗೊಬ್ಬರು ಬೆಂಬಲ ನೀಡುತ್ತಿದ್ದರು. ಎರಡು ದಿನಗಳ ಹಿಂದೆ ಸಂಗೀತಾಗಾಗಿ ಕಾರ್ತಿಕ್ ಟಾಸ್ಕ್ ಮಾಡಿದ್ದರು. ಅದರಲ್ಲಿ ಆತ ಸೋತರೂ ಕೂಡ ಸಂಗೀತಾ ಮಾತ್ರ ಸ್ವಲ್ಪವೂ ಬೇಸರ ಮಾಡಿಕೊಳ್ಳದೇ, ತನಗಾಗಿ ಟಾಸ್ಕ್ ಮಾಡಿದ ಕಾರ್ತಿಕ್ ಗೆ ಎಣ್ಣೆ ಮಸಾಜ್ ಮಾಡಿದ್ದರು. ಇದನ್ನು ನೋಡಿದವರು ಇದು ಕೇವಲ ಸ್ನೇಹಾನಾ? ಅಥವಾ ಪ್ರೀತಿ ಕೂಡ ಇರಬಹುದಾ.? ಎಂದುಕೊಂಡಿದ್ದರು. ಆದರೆ ಇದೀಗ ಬಿಗ್ ಬಾಸ್ ಮನೆಯೊಳಗೆ ಸಂಗೀತಾ ಹಾಗು ಕಾರ್ತಿಕ್ ನಡುವೆ ವಿನಯ್(Vinay) ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಕೂಡ ಓದಿ : SBI Bank New Updates : ಎಸ್ ಬಿಐ ಬ್ಯಾಂಕ್ ಅಕೌಂಟ್ ಹೊಂದಿರುವ ಎಲ್ಲಾ ಗ್ರಾಹಕರಿಗೆ ಸಿಹಿಸುದ್ಧಿ.! ಹೊಸ ನಿಯಮ ಜಾರಿಗೆ.!

Whatsapp Group Join
Telegram channel Join

ಕಾರ್ತಿಕ್ ಯಾರನ್ನು ಆರಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ. ವಾಹಿನಿಯು ಹೊಸದೊಂದು ಪ್ರೊಮೊ ಹಂಚಿಕೊಂಡಿದ್ದು, ಇದರಲ್ಲಿ ವಿನಯ್(Vinay), ಕಾರ್ತಿಕ್ ಹಾಗೂ ಸಂಗೀತಾ ಸ್ನೇಹದ ಬಗ್ಗೆ ಪ್ರಶ್ನಿಸುತ್ತಾರೆ. ಎಲ್ಲರೂ ಒಂದು ಕಡೆ ಇದ್ದರೆ, ನೀನು ಮಾತ್ರ ಇನ್ನೊಂದು ಕಡೆ ಇದ್ದೀಯ.. ಹದಿನಾರು ಜನರಲ್ಲಿ ನಿನಗೆ ಬೇರೆ ಯಾರು ಕಾಣಿಸಲಿಲ್ವಾ.? ನಾನು ಏನು ಮಾಡಿದ್ದೀನಿ ನಿನಗೆ.? ಸಗಣಿ ಮೇಲೆ ಕಾಲಿಟ್ಟರೆ ಏನು ಮಾಡುತ್ತೀಯಾ.? ನಾನಾ ಇಲ್ಲ ಅವಳಾ.? ಎಂದು ವಿನಯ್ ಕಾರ್ತಿಕ್ ಗೆ ಪ್ರಶ್ನಿಸುತ್ತಾರೆ.

ಮತ್ತೊಂದೆಡೆ ಸಂಗೀತಾ ಕೂಡ ವಿನಯ್ ಕುರಿತು ಕಾರ್ತಿಕ್ ಬಳಿ ಅವರಿಗೆ ಯಾರು ಬೆರಳು ತೋರಿಸಬಾರದು. ತೋರಿಸಿದರೆ ಅವರು ಸಿಟ್ಟಿಗಿಳಿಯುತ್ತಾರೆ. ನನಗೆ ಗೊತ್ತು ಇನ್ನಿ ಯಾರು ನಮ್ಮವರಲ್ಲ. ನೀವು ನನ್ನ ಜೊತೆಯಿರಿ. ಅಥವಾ ಹೋಗಿ. ನಾನು ಫೈಟ್ ಮಾಡುತ್ತೇನೆ ಎಂದು ಸಂಗೀತಾ ಬೇಸರದಿಂದ ಹೇಳುತ್ತಾರೆ. ಕಾರ್ತಿಕ್ ಮಾತ್ರ ಅಡ್ಡಕತ್ತರಿಯಲ್ಲಿ ಸಿಲುಕಿದಂತೆ ಆಗಿದ್ದಾರೆ. ಒಂದೆಡೆ ವಿನಯ್ ಪ್ರಶ್ನೆಗೆ ಉತ್ತರಿಸಲಾಗದೆ, ಮತ್ತೊಂದೆಡೆ ಸಂಗೀತಾ ಅವರಿಗೂ ಉತ್ತರ ಕೊಡಲಾಗದೇ ಮೌನವಾಗಿ ಎಲ್ಲವನ್ನು ಕೇಳಿಸಿಕೊಳ್ಳುವುದನ್ನು ಬಿಗ ಬಾಸ್ ಕನ್ನಡ ಪ್ರೊಮೊ ದಲ್ಲಿ ನೋಡಬಹುದು.

ಇದನ್ನೂ ಕೂಡ ಓದಿ : Dhruva Sarja : ಚಿರು ಬರ್ತ್ ಡೇ ದಿನವೇ ಧ್ರುವ ಸರ್ಜಾ ಮಾಡಿದ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು.! ಚಿರು ಸಮಾಧಿ ಬಳಿ ನಡೆದಿದ್ದೇನು.?

ವಿನಯ್ ಹೇಳುವಂತೆ ಕಾರ್ತಿಕ್, ಸಂಗೀತಾ ಅವರನ್ನ ಬಿಟ್ಟು ಕಾರ್ತಿಕ್ ಪರ ನಿಲ್ಲುತ್ತಾರಾ.? ಅಥವಾ ಮೊದಲಿನಿಂದಲೂ ಜೊತೆಯಾಗಿಯೇ ಇದ್ದ ಚಾರ್ಲಿ ಬೆಡಗಿ ಸಂಗೀತಾ ಪರವಾಗಿ ನಿಲ್ಲುತ್ತಾರಾ.? ಎನ್ನುವುದನ್ನು ಕಾದುನೋಡಬೇಕಾಗಿದೆ. ನಿಮಗೆ ಈ ಸ್ಫರ್ಧಿಗಳಲ್ಲಿ ನಿಮ್ಮ ನೆಚ್ಚಿನ ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಫರ್ಧಿ ಯಾರು ಎನ್ನುವುದನ್ನ ನಮಗೆ ಕೆಮೆಂಟ್ ಮೂಲಕ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply