ತಂದೆಯಾಗಲು ಯಾವುದು ಬೆಸ್ಟ್ ಟೈಂ ಗೊತ್ತಾ.? – ಹೆಲ್ತ್ ಟಿಪ್ಸ್.

ಮಹಿಳೆಯರಿಗೆ ತಾಯಿಯಾಗಲು ಯಾವುದು ಸರಿಯಾದ ಸಮಯ ಎಂಬುದರ ಬಗ್ಗೆ ಆಗಾಗ ವರದಿಗಳು ಬರ್ತಿರುತ್ತವೆ. ವೈದ್ಯರು ಕೂಡ ಯಾವ ವಯಸ್ಸಿನಲ್ಲಿ ತಾಯಿಯಾದ್ರೆ ಬೆಸ್ಟ್ ಎಂಬುದರ ಬಗ್ಗೆ ಸಲಹೆ ನೀಡ್ತಾರೆ. ಆದ್ರೆ ಪುರುಷರು ಯಾವ ವಯಸ್ಸಿನಲ್ಲಿ ತಂದೆಯಾಗಬೇಕೆನ್ನುವ ಬಗ್ಗೆ ಸ್ಪಷ್ಟನೆಯಿಲ್ಲ.

ಸದ್ಯ ನಡೆದ ಸಂಶೋಧನೆಯೊಂದು ಯಾವ ವಯಸ್ಸಿನಲ್ಲಿ ಪುರುಷರು ತಂದೆಯಾದ್ರೆ ಒಳ್ಳೆಯದು ಎಂಬುದನ್ನು ಹೇಳಿದೆ. 22-25 ವರ್ಷದೊಳಗೆ ತಂದೆಯಾಗುವುದು ಉತ್ತಮ. ಆದ್ರೆ ಈ ವಯಸ್ಸಿನಲ್ಲಿ ಜವಾಬ್ದಾರಿ ಹೆಚ್ಚಿರುತ್ತದೆ. ಹಾಗಾಗಿ 28ರಿಂದ 30 ವರ್ಷ ತಂದೆಯಾಗಲು ಬೆಸ್ಟ್ ಎಂದು ಸಂಶೋಧನೆ ಹೇಳಿದೆ.

WhatsApp Group Join Now
Telegram Group Join Now

ಸಂಶೋಧನೆ ಪ್ರಕಾರ ವರ್ಷ 30 ಆಗ್ತಿದ್ದಂತೆ ಪುರುಷರ ದೇಹದಲ್ಲಿರುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಟೆಸ್ಟೋಸ್ಟೆರಾನ್ ಕಡಿಮೆಯಾಗುತ್ತ ಬರುತ್ತದೆ. ಹಾಗಾಗಿ 30ರ ನಂತ್ರ ತಂದೆಯಾಗಲು ಪುರುಷರಿಗೆ ಕಷ್ಟವಾಗುತ್ತದೆ. ಗುಣಮಟ್ಟದ ವೀರ್ಯದಲ್ಲೂ ಕೊರತೆ ಕಾಣಿಸಿಕೊಳ್ಳುತ್ತದೆ. 30ರ ನಂತ್ರ ಪುರುಷರ ವೀರ್ಯದಲ್ಲಿ ಗುಣಮಟ್ಟದ ಕೊರತೆ ಕಾಣಿಸಿಕೊಳ್ಳುತ್ತದೆ.

ವಯಸ್ಸು ಹೆಚ್ಚಾಗ್ತಿದ್ದಂತೆ ಜೀವನ ಶೈಲಿಯಲ್ಲಿಯೂ ಬದಲಾವಣೆ ಕಾಣಿಸಿಕೊಳ್ಳುತ್ತದೆ. ನಿದ್ರೆಯ ಕೊರತೆ ಹಾಗೂ ಪೌಷ್ಠಿಕ ಆಹಾರದ ಕೊರತೆ, ಧೂಮಪಾನ, ಮದ್ಯಪಾನ ಈವೆಲ್ಲವೂ ಪುರುಷರ ಶಕ್ತಿ ಕುಂದಿಸುತ್ತದೆ.

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘Just Kannada’ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply