Dhruva Sarja : ಚಿರು ಬರ್ತ್ ಡೇ ದಿನವೇ ಧ್ರುವ ಸರ್ಜಾ ಮಾಡಿದ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು.! ಚಿರು ಸಮಾಧಿ ಬಳಿ ನಡೆದಿದ್ದೇನು.?

Dhruva Sarja : ಚಿರಂಜೀವಿ ಸರ್ಜಾ ಅವರು ಎಲ್ಲರನ್ನು ಅಗಲಿ ಮೂರು ವರ್ಷಗಳೇ ಕಳೆದಿದೆ. 2020 ರ ಜೂನ್ 7 ರಂದು ಹೃದಯಾಘಾತದಿಂದ ಅಗಲಿದಾಗ ಇಡೀ ಚಿತ್ರರಂಗ ಹಾಗು ಕರುನಾಡು ಶಾಕ್ ಆಗಿತ್ತು. ಚಿರಂಜೀವಿ ಬದುಕಿರುತ್ತಿದ್ದರೆ, ಅಂದರೆ ಅಕ್ಟೋಬರ್ 17 ರಂದು 39 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ನಿನ್ನೆ ಅವರ ಹುಟ್ಟುಹಬ್ಬದ ನಿಮಿತ್ತ ಅವರ ಅಭಿಮಾನಿಗಳು ಚಿರು ಅವರನ್ನು ನೆನೆಪಿಸಿಕೊಂಡು ಭಾವುಕರಾಗುತ್ತಿದ್ದಾರೆ. ಪತ್ನಿ ಮೇಘನಾ ರಾಜ್ ಕೂಡ ಭಾವುಕ ಪೋಸ್ಟ್ ಮಾಡಿದ್ದಾರೆ. ಹ್ಯಾಪಿ ಬರ್ತ್ ಡೇ ಹಸ್ಬೆಂಡ್ ಎಂದು ಹಳೆಯ ಫೋಟೋವೊಂದನ್ನ ಶೇರ್ ಮಾಡಿಕೊಂಡು ಮೇಘನಾ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಕೂಡ ಓದಿ : Bigg Boss Kannada : ಬಿಗ್ ಬಸ್ ಮನೆಯಲ್ಲಿ ರೊಚ್ಚಿಗೆದ್ದ ರಕ್ಷಕ್ ಬುಲೆಟ್.! ಕಿರುಚಾಡಿದ ಕಾರ್ತಿಕ್.! ಸೈಲೆಂಟ್ ಆದ್ರ ವಿನಯ್, ಪ್ರತಾಪ್.!

ಇದೇ ವೇಳೆ ಚಿರಂಜೀವಿ ಅವರ ಸಹೋದರ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಅಣ್ಣನನ್ನು ನೆನೆಪಿಸಿಕೊಂಡು ಹುಟ್ಟುಹಬ್ಬಕ್ಕೆ ಶುಬಾಶಯ ಕೋರಿದ್ದಾರೆ. ಅಷ್ಟೇ ಅಲ್ಲದೇ ಅಣ್ಣನಿಗಾಗಿ ಧ್ರುವ ಸರ್ಜಾ ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ.? ನೋಡೋಣ. ಚಿರಂಜೀವಿ ಸರ್ಜಾ ಹಾಗು ಧ್ರುವ ಸರ್ಜಾ ಇಬ್ಬರ ಭಾಂದವ್ಯ ಎಲ್ಲರಿಗೂ ಗೊತ್ತೇ ಇದೆ. ಅಣ್ಣ ಚಿರಂಜೀವಿ ಸರ್ಜಾ ಅಂದರೆ, ಧ್ರುವ ಸರ್ಜಾ ಅವರಿಗೆ ಅಷ್ಟೊಂದು ಭಾಂಧವ್ಯವಿತ್ತು. ದಿಢೀರನೆ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಅಗಲಿದಾಗ ಧ್ರುವ ಸರ್ಜಾ ಮಾನಸಿಕವಾಗಿ ಕುಸಿದಿದ್ದರು.

ಇದನ್ನೂ ಕೂಡ ಓದಿ : Kartik – Sangeeta :ಬಿಗ್ ಬಾಸ್ ಮನೆಯಲ್ಲಿ ಬಟ್ಟೆ ಬಿಚ್ಚಿದ ಕಾರ್ತಿಕ್.! ಸಂಗೀತ ಜೊತೆ ಕಾರ್ತಿಕ್ ಗೌಡ ಪ್ರೀತಿಯಲ್ಲಿ ಸಿಕ್ಕಿಹಾಕಿಕೊಂಡರಾ.?

ಇವರಿಬ್ಬರು ಕೇವಲ ಅಣ್ಣ-ತಮ್ಮ ಆಗಿರಲಿಲ್ಲ. ಬದಲಿಗೆ ಸ್ನೇಹಿತರಂತೆ ಇದ್ದರು. ಒಬ್ಬರಿಗೆ ಇನ್ನೊಬ್ಬರು ಬೆನ್ನೆಲುಬಾಗಿ ನಿಂತಿದ್ದರು. ನಿನ್ನೆ ಚಿರು ಸರ್ಜಾ ಅವರ ಹುಟ್ಟುಹಬ್ಬವಿದ್ದ ಕಾರಣ ಧ್ರುವ ಸರ್ಜಾ ಅವರು ಅಣ್ಣನ ಸಮಾಧಿಯನ್ನು ದೇವಸ್ಥಾನದಂತೆ ಹೂವಿನಿಂದ ಸಿಂಗರಿಸಿದ್ದಾರೆ. ಅಷ್ಟೇ ಅಲ್ಲದೇ, ಸಮಾಧಿ ಬಳಿ ಬರುವಂತಹ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದಾರೆ. ಇನ್ನು ಅಣ್ಣನ ಬರ್ತ್ ಡೇ ಸಲುವಾಗಿ ಅನೇಕ ಬಡಮಕ್ಕಳಿಗೆ ಬ್ಯಾಗ್, ನೋಟ್ ಬುಕ್, ಪೆನ್ನು, ಪೆನ್ಸಿಲ್ ಹಾಗು ಇನ್ನಿತರ ಆಟೋಪಕರಣಗಳನ್ನು ಹಂಚಿದ್ದಾರೆ. ಧ್ರುವ ಸರ್ಜಾ ಅವರ ಈ ಗುಣ ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply