Kranti v/s Kantara ಕ್ರಾಂತಿ ವರ್ಸಸ್ ಕಾಂತಾರ । ನಿಜವಾಗಲೂ ಗೆದ್ದವರು ಯಾರು.? । Darshan । Rishabh Shetty

Kranti v/s Kantara ಕ್ರಾಂತಿ ವರ್ಸಸ್ ಕಾಂತಾರ । ನಿಜವಾಗಲೂ ಗೆದ್ದವರು ಯಾರು.?

(Kranti v/s Kantara) ಬುಲ್ ಬುಲ್ ಸಿನಿಮಾದ ನಂತರ ದರ್ಶನ್ ಮತ್ತು ರಚಿತಾ ರಾಮ್ ರವರು ಜೊತೆಯಾಗಿ ಕಾಣಿಸಿಕೊಂಡಿರುವ ‘ಕ್ರಾಂತಿ'(Kranti) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಯನ್ನ ಬರೆಯುತ್ತಾ ದಾಪು ಕಾಲು ಇಡುತ್ತಿದೆ. ‘ಕ್ರಾಂತಿ’ ಸಿನಿಮಾ ಈಗ 4ದಿನ ದಲ್ಲೇ 1೦೦ ಕೋಟಿ ಕ್ಲಬ್ ಸೇರಿದ್ದು ಇಡೀ ಚಿತ್ರ ತಂಡ ತುಂಬಾ ಖುಷಿಯಲ್ಲಿ ಇದೆ. ಹಾಗಾದ್ರೆ ಡಿ ಬಾಸ್ ಅವರ ‘ಕ್ರಾಂತಿ’ 6 ದಿನಗಳಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಅಂತ ಕನ್ನಡದ ‘ಕಾಂತಾರ'(Kantara) ಸಿನಿಮಾ 6 ದಿನಗಳಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಅಂತ ನೋಡೋಣ.

Kranti v/s Kantara

ಇದನ್ನೂ ಓದಿ : 5 ದಿನದಲ್ಲೇ ಎಲ್ಲಾ ರೆಕಾರ್ಡ್ ಬ್ರೇಕ್! ಕಾಂತಾರ, KGF, ವಿಕ್ರಾಂತ್ ರೋಣ!

‘ಯಜಮಾನ’ ಚಿತ್ರದ ನಂತರ ವಿ. ಹರಿಕ್ರಷ್ಣ ನವರು ತಾವೇ ಬರೆದು ನಿರ್ದೇಶಿಸಿರುವ ‘ಕ್ರಾಂತಿ’ ಸಿನಿಮಾ ಫ್ಯಾಮಿಲಿ ಎಂಟರ್ ಟ್ರೈನೆರ್ ಆಗಿ ಗೆಲುವಿನ ನಗೆ ಬೀರಿದೆ. ಸರ್ಕಾರಿ ಶಾಲೆಗಳನ್ನ ರಕ್ಷಿಸುವ ಬಲವಾದ ಸಂದೇಶವನ್ನ ಹೊಂದಿರುವ ‘ಕ್ರಾಂತಿ’ ಮಾಸ್ ಮತ್ತು ಕ್ಲಾಸ್ ನ ಮಿಶ್ರಣವಾಗಿದೆ. ‘ಕ್ರಾಂತಿ’ ಚಿತ್ರದ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರ್ಮಾಪಕಿ ಶೈಲಜಾ ನಾಗ್ ಅವರು ಮಾತನಾಡಿ ದರ್ಶನ್ ಅವರ ಮಾಸ್ ಫ್ಯಾನ್ ಫಾಲೋಯಿಂಗ್ ಚಿತ್ರವೂ ರಾಜ್ಯಾದ್ಯಂತ ಸಿಂಗಲ್ ಥಿಯೇಟರ್ ಗಳಲ್ಲಿ ದೊಡ್ಡ ಹಿಟ್ ಆಗಲೂ ಸಹಾಯ ಮಾಡಿದೆ. ಮತ್ತು ಮಲ್ಟಿಫ್ಲೆಕ್ಸ್ ಗಳಲ್ಲಿಯೂ ಸಹ ಪ್ರೇಕ್ಷಕರನ್ನ ಕರೆತರುವಲ್ಲಿ ಯಶಸ್ವಿ ಆಗಿದೆ ಅಂತ ಹೇಳಿದ್ದಾರೆ.

Kranti v/s Kantara

ಕನ್ನಡದಲ್ಲಿ ಹೊಸ ಮೈಲುಗಲ್ಲು ಬರೆದಿರುವಂತಹ ‘ಕಾಂತಾರ’ ಸಿನಿಮಾ ಮೊದಲು ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿ ನಂತರದ ವಾರಗಳಲ್ಲಿ ಒಂದೊಂದೇ ರಾಜ್ಯದಲ್ಲಿ ಅವರದ್ದೇ ಭಾಷೆಯಲ್ಲಿ ಬಿಡುಗಡೆಯಾಗಿ ‘ಕೆಜಿಎಫ್’ ದಾಖಲೆಯನ್ನ ದೂಳಿಪಟ ಮಾಡಿತ್ತು. ‘ಕಾಂತಾರ’ ಸಿನಿಮಾ ಬಿಡುಗಡೆ ಆದ 6 ದಿನಗಳಲ್ಲಿ 3೦ ರಿಂದ 4೦ ಕೋಟಿ ಕಲೆಕ್ಷನ್ ಮಾಡಿತ್ತು ಇದೀಗ ಕಳೆದ ವಾರ ಬಿಡುಗಡೆ ಆಗಿರುವ ‘ಕ್ರಾಂತಿ’ ಸಿನಿಮಾ 3 ರಿಂದ 4 ದಿನಗಳಲ್ಲೇ 1೦೦ ಕೋಟಿ ಕಲೆಕ್ಷನ್ ಮಾಡಿ 6 ದಿನಗಳಲ್ಲೇ 1೦೦ ರಿಂದ 11೦ ಕೋಟಿ ಕಲೆಕ್ಷನ್ ಮಾಡಿದೆ ಅಂತ ಬಾಕ್ಸ್ ಆಫೀಸ್ ಪಂಡಿತರು ಲೆಕ್ಕಾಚಾರ ಮಾಡಿದ್ದಾರೆ. ನಿಮಗೆ ಈ 2 ಸಿನಿಮಾಗಳಲ್ಲಿ ಬಹಳ ಇಷ್ಟವಾದ ಸಿನಿಮಾ ಯಾವುದು ಅಂತ ಕಾಮೆಂಟ್ ಮಾಡಿ.

ಇದನ್ನೂ ಓದಿ : ಕ್ರಾಂತಿ ಸಿನಿಮಾದ ಪತಿಯೊಬ್ಬ ನಟ-ನಟಿಯರ ನಿಜವಾದ ಸಂಭಾವನೆ.?

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply