Champions Trophy 2025 : ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿ ಫೈನಲ್ ನಲ್ಲಿ ಭಾರತ ತಂಡವನ್ನು ಗೆಲ್ಲಿಸುವ ಮೂಲಕ ರನ್ ಮೆಷಿನ್ ವಿರಾಟ್ ಕೊಹ್ಲಿ ಪಾಕಿಸ್ತಾನಿಯರ ಎದೆಗೆ ಕೊಳ್ಳಿ ಇಟ್ಟಿದ್ದು, ಆಸ್ಟ್ರೇಲಿಯಾ ಸೋಲಿನೊಂದಿಗೆ ಟೂರ್ನಿಯ ಫೈನಲ್ ಪಂದ್ಯ ಇದೀಗ ದುಬೈಗೆ ಸ್ಥಳಾಂತರವಾಗಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ವಿಚಾರವಾಗಿ ಮೊದಲಿನಿಂದಲೂ ಭಾರತದ ವಿರುದ್ಧ ಕಾಲು ಕೆರೆಯುತ್ತಿದ್ದ ಪಾಕಿಸ್ತಾನಕ್ಕೆ ತಕ್ಕಶಾಸ್ತಿಯಾಗಿದ್ದು, ಬರೊಬ್ಬರಿ 2 ದಶಕಗಳ ಬಳಿಕ ತನ್ನ ದೇಶದಲ್ಲಿ ಐಸಿಸಿ ಟೂರ್ನಿ ಆಯೋಜಿಸಿತ್ತು. ಆದರೆ ಭಾರತ ಸರ್ಕಾರ ಮತ್ತು ಬಿಸಿಸಿಐ ನಿಲುವಿನಿಂದಾಗಿ ಪಾಕಿಸ್ತಾನದಲ್ಲಿ ಆಯೋಜಿಸಬೇಕಿದ್ದ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಹೈಬ್ರಿಡ್ ಮಾದರಿಗೆ ಬದಲಾಯಿತು.
Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?
ಅದರಂತೆ ದುಬೈ ಮತ್ತು ಪಾಕಿಸ್ತಾನದ ಕ್ರೀಡಾಂಗಣಗಳಲ್ಲಿ ಟೂರ್ನಿ ಆಯೋಜನೆಯಾಯಿತು. ಆದರೆ ಟೂರ್ನಿ ಆರಂಭವಾದ ಐದೇ ದಿನಗಳಲ್ಲಿ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬಿದಿತ್ತು. ಭಾರತದ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ಸೋತು ಟೂರ್ನಿಯಿಂದಲೇ ಹೊರಬಿತ್ತು. ಇದೀಗ ಆಸ್ಟ್ರೇಲಿಯಾದ ವಿರುದ್ಧ ಭಾರತ ಜಯ ಗಳಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿ ಟೂರ್ನಿಯೇ ಪಾಕಿಸ್ತಾನದಿಂದ ಹೊರಹೋಗುವಂತೆ ಮಾಡಿದೆ.
ನಾಳೆ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ 2ನೇ ಸೆಮಿ ಫೈನಲ್ ಪಂದ್ಯವೇ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಅಂತಿಮ ಪಂದ್ಯವಾಗಿರಲಿದೆ. ನಾಳೆ ಗೆಲ್ಲುವ ತಂಡ ದುಬೈಗೆ ಆಗಮಿಸಿ ಇಲ್ಲಿ ಭಾರತ ತಂಡದೊಂದಿಗೆ ಫೈನಲ್ ಪಂದ್ಯವನ್ನಾಡಲಿದೆ.
10ನೇ ತರಗತಿ ಉತ್ತೀರ್ಣರಾದ ಮಹಿಳೆಯರಿಗೆ ತಿಂಗಳಿಗೆ ₹7,000/- ಹಣದ ಜತೆಗೆ ಕಮಿಷನ್ – ಏನಿದು ‘ಬಿಮಾ ಸಖಿ ಯೋಜನೆ’..?
ಇನ್ನು ಪಾಕಿಸ್ತಾನದ ಆಸೆಗೆ ಅಕ್ಷರಶಃ ಕೊಳ್ಳಿ ಇಟ್ಟಿದ್ದು ಮಾತ್ರ ಭಾರತದ ರನ್ ಮೆಶಿನ್ ವಿರಾಟ್ ಕೊಹ್ಲಿ. ಅಂದು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಅದರ ಗೆಲುವು ಕಸಿದ ಕೊಹ್ಲಿ ಇಂದೂ ಕೂಡ ಪ್ರಬಲ ಆಸ್ಟ್ರೇಲಿಯನ್ನರ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಆ ಮೂಲಕ ಪಾಕಿಸ್ತಾನಿಯರ ಆಸೆಗೆ ತಡೆಯಾದರು. ಒಂದು ವೇಳೆ ಇಂದು ಆಸ್ಟ್ರೇಲಿಯಾ ಗೆದ್ದಿದ್ದರೆ ಫೈನಲ್ ಪಂದ್ಯ ಪಾಕಿಸ್ತಾನದಲ್ಲೇ ನಡೆಯುತ್ತಿತ್ತು. ಪಾಪ ಪಾಕಿಸ್ತಾನಿಯರ ಆ ಅಂತಿಮ ಆಸೆಯನ್ನೂ ಕೊಹ್ಲಿ ಕಸಿದುಕೊಂಡತಾಗಿದೆ.
ಇನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬರೊಬ್ಬರಿ 18 ಬಿಲಿಯನ್ ಹಣ ಖರ್ಚು ಮಾಡಿದೆ. ಮೈದಾನಗಳ ನವೀಕರಣಕ್ಕೆ ಈ ಹಣ ಬಳಕೆಯಾಗಿದ್ದು ಆದರೆ ಇದೀಗ ಅಷ್ಟು ಹಣ ಖರ್ಚು ಮಾಡಿದರೂ ಪಾಕಿಸ್ತಾನದಲ್ಲಿ ಫೈನಲ್ ಪಂದ್ಯ ನಡೆಯುತ್ತಿಲ್ಲ ಎಂದು ಪಾಕ್ ಕ್ರಿಕೆಟ್ ಅಭಿಮಾನಿಗಳು ಕೊರಗುವಂತಾಗಿದೆ.
