ಡಿ ಬಾಸ್ ಮತ್ತೊಮ್ಮೆ ದಾಖಲೆ ಸರ್ದಾರ! 3 ಫಿಲಂ 100 ಕೋಟಿ ಕ್ಲಬ್!

ಜಸ್ಟ್ ಕನ್ನಡ : ಬಿಡುಗಡೆಗೂ ಮುನ್ನವೇ ಬಾರೀ ಕುತೂಹಲ ಮೂಡಿಸಿದ್ದ ನಟ ದರ್ಶನ್ ಮತ್ತು ರಚಿತ ರಾಮ್ ಅಭಿನಯದ ‘ಕ್ರಾಂತಿ’ ಸಿನಿಮಾ ಬಿಡುಗಡೆಯ ನಂತರವೂ ಸದ್ದು ಮಾಡುತ್ತಲೇ ಇದೆ. ವಿ. ಹರಿಕೃಷ್ಣರು ಬರೆದು ನಿರ್ದೇಶಿಸಿರುವ ‘ಕ್ರಾಂತಿ’ ಸಿನಿಮಾ ಫ್ಯಾಮಿಲಿ ಎಂಟರ್ ಟೈನರ್ ಆಗಿದ್ದು ಸರ್ಕಾರಿ ಶಾಲೆಗಳನ್ನ ರಚಿಸುವ ಬಲವಾದ ಸಂದೇಶವನ್ನ ಹೊಂದಿರುವ ಮಾಸ್ ಮತ್ತು ಕ್ಲಾಸ್ ನ ಮಿಶ್ರಣವಾಗಿದೆ. ಈ ಸಿನಿಮಾ ಕೆಲವು ನೆಗೆಟಿವ್ ವಿಮರ್ಶೆಗಳ ನಡುವೆಯೂ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.

ಇದನ್ನೂ ಓದಿ : ಕ್ರಾಂತಿ ಸಿನಿಮಾದ ಪತಿಯೊಬ್ಬ ನಟ-ನಟಿಯರ ನಿಜವಾದ ಸಂಭಾವನೆ.?

‘ಕ್ರಾಂತಿ’ ಚಿತ್ರದ ಫಲಿತಾಂಶದ ಬಗ್ಗೆ ಸಂತಸ ವ್ಯಕ್ತ ಪಡಿಸಿರುವ ನಿರ್ಮಾಪಕಿ ಶೈಲಜಾ ನಾಗ್ ಅವರು ಮಾತನಾಡುತ್ತಾ ದರ್ಶನ್ ಅವರ ಮಾಸ್ ಫ್ಯಾನ್ ಫಾಲೋಯಿಂಗ್ ಚಿತ್ರವು ರಾಜ್ಯಾದ್ಯಂತ ಸಿಂಗಲ್ ಥಿಯೇಟರ್ ಗಳಲ್ಲಿ ದೊಡ್ಡ ಹಿಟ್ ಆಗಲು ಸಹಾಯ ಮಾಡಿದೆ ಮತ್ತು ಮಲ್ಟಿ ಫ್ಲೆಕ್ಸ್ ಗಳಲ್ಲಿ ಪ್ರೇಕ್ಷರನ್ನ ಕರೆತರುವಲ್ಲಿ ಯಶಸ್ವಿ ಆಗಿದೆ ಅಂತ ಹೇಳಿದ್ರು. ಸದ್ಯಕ್ಕೆ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಕಮರ್ಷಿಯಲ್ ಎಂಟಟೈನರ್ ಆಗಿರುವ ‘ಕ್ರಾಂತಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಧಿಕೃತವಾಗಿ 1೦೦ ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ ಅಂತ ಹೇಳಬಹುದು. ಅಲ್ಲದೆ ಇದರ ಸ್ಯಾಟಲೈಟ್ ಡಿಜಿಟಲ್ ಹಕ್ಕುಗಳು ಕೂಡ ಬಾರೀ ಬೆಲೆಗೆ ಮಾರಾಟವಾಗಿದೆ ಎನ್ನಬಹುದು.

ನಿನ್ನೆ ‘ಕ್ರಾಂತಿ’ ಸಿನಮಾ 100 ಕೋಟಿ ಕ್ಲಬ್ ಸೇರಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಲವಾರು ಥಿಯೇಟರ್ ಗಳಲ್ಲಿ ಕೇಕುಗಳನ್ನೂ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಜೊತೆಗೆ ನಿರ್ಮಾಪಕಿ ಶೈಲಜಾ ನಾಗ್ ಕೂಡ ಚಿತ್ರತಂಡದ ಜೊತೆಗೆ ಕೇಕು ಕಟ್ ಮಾಡಿ ‘ಕ್ರಾಂತಿ’ ಚಿತ್ರದ ಗೆಲುವನ್ನ ಸಂಭ್ರಮಿಸಿದ್ದಾರೆ. ಇನ್ನೂ ‘ಕ್ರಾಂತಿ’ ಸಿನಿಮಾ 1೦೦ ಕೋಟಿ ಕ್ಲಬ್ ಸೇರಿರುವ ಹಿನ್ನೆಲೆಯಲ್ಲಿ ದರ್ಶನ್ ಅವರು ಹೊಸ ದಾಖಲೆಯನ್ನ ಬರೆದಿದ್ದಾರೆ. ಹೌದು, ನಟ ದರ್ಶನ್ ಅವರ ಹಿಂದಿನ 3 ಸಿನಿಮಗಳಾದ ಕುರುಕ್ಷೇತ್ರ, ರಾಬರ್ಟ್ ಮತ್ತು ಕ್ರಾಂತಿ ಸಿನಿಮಾ 1೦೦ ಕೋಟಿ ಕ್ಲಬ್ ಸೇರಿದ್ದು ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಅವರ ಹೆಸರಿಗೆ ಇನ್ನೊಂದು ದಾಖಲೆ ಸೇರಿದಂತಾಗಿದೆ ಅಂತ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದನ್ನ ಹಂಚಿಕೊಂಡಿದ್ದಾರೆ. ನಿಮಗೂ ಕೂಡ ‘ಕ್ರಾಂತಿ’ ಸಿನಿಮಾ ಇಷ್ಟವಾಗಿದ್ರೆ ಜೈ ಡಿ ಬಾಸ್ ಎಂದು ಕಾಮೆಂಟ್ ಮಾಡಿ.

ಇದನ್ನೂ ಓದಿ : ಡಿ ಬಾಸ್ ಅಭಿನಯದ ಕ್ರಾಂತಿ ಸಿನಿಮಾ 100 ಕೋಟಿ ಕ್ಲಬ್ ಸೇರಿದ್ದು ಹೇಗೆ?

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply