eShram Card Benifits : ಈ-ಶ್ರಮ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್/ ಪ್ರತಿ ತಿಂಗಳಿಗೆ ₹3000 ಹಣ

eShram Card Benifits : ನಮಸ್ಕಾರ ಸ್ನೇಹಿತರೇ, ಈ ಕಾರ್ಡ್ ಮಾಡಿಸಿಕೊಂಡವರಿಗೆ ಪ್ರತಿ ತಿಂಗಳಿಗೆ ₹3000 ಹಣ ಕೇಂದ್ರ ಸರ್ಕಾರ ನೀಡುತ್ತದೆ. ನೀವು ಕೂಡ ಈಗಾಗಲೇ ಈ ಕಾರ್ಡ್ ಮಾಡಿಸಿಕೊಂಡು ಪ್ರತಿ ತಿಂಗಳಿಗೆ ₹3000 ಹಣ ಪಡೆದುಕೊಳ್ಳಬಹುದು. ಕೇಂದ್ರ ಸರ್ಕಾರವು ಈ ಹೊಸ ಕಾರ್ಡ್ ಬಿಡುಗಡೆ ಮಾಡಲಾಗಿದ್ದು, ಪ್ರತಿಯೊಬ್ಬರು ಕೂಡ ಈ ಕಾರ್ಡ್ ಮಾಡಿಸಿಕೊಳ್ಳಬಹುದು. ಆದರೆ ಸರ್ಕಾರಿ ನೌಕರರಿಗೆ ಇದು ಅನ್ವಯಿಸುವುದಿಲ್ಲ. ಬನ್ನಿ ಹಾಗಿದ್ರೆ ಪ್ರತಿ ತಿಂಗಳಿಗೆ 3000 ಹಣ ಪಡೆದುಕೊಳ್ಳುವ ಆ ಕಾರ್ಡ್ ಯಾವುದು? ಅದನ್ನ ಎಲ್ಲಿ.? ಮತ್ತು ಹೇಗೆ ಮಾಡಿಸಿಕೊಳ್ಳಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನ ನೋಡೋಣ

ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಈ-ಶ್ರಮ್(eShram) ಯೋಜನೆಯನ್ನ ಜಾರಿಗೆ ತಂದಿದೆ. ಈ-ಶ್ರಮ್ ಕಾರ್ಡ್ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರಗಳ ಕಲ್ಯಾಣ ಯೋಜನೆಗಳನ್ನು ತಲುಪಿಸಿ ಸಾಮಾಜಿಕ ಭದ್ರತೆಯನ್ನ ಕಲ್ಪಿಸಲಾಗುತ್ತಿದೆ. ರಾಜ್ಯದಲ್ಲೂ ಈ-ಶ್ರಮ್(eShram) ಕಾರ್ಡ್ ನೀಡಲಾಗುತ್ತಿದ್ದು, ಯೋಜನೆಯ ವಸ್ತುಸ್ಥಿತಿಯ ಕುರಿತು ಸಮಗ್ರ ವರದಿ ಇಲ್ಲಿದೆ. ಈ-ಶ್ರಮ್(eShram) ಕಾರ್ಡ್ ಎನ್ನುವುದು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶವಾಗಿದೆ.

Whatsapp GroupJoin
Telegram channelJoin

ಇದನ್ನೂ ಕೂಡ ಓದಿ : ಪಿಯುಸಿ ಪಾಸಾದವರಿಗೆ ಗುಡ್ ನ್ಯೂಸ್.! ಗ್ರಾಮ ಪಂಚಾಯತ್ ನಲ್ಲಿ ಉದ್ಯೋಗಾವಕಾಶ.! ನೀವು ಈ ಡೈರೆಕ್ಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಯೋಜನೆ ಅಸಂಘಟಿತ ವಲಯದ ಕಾರ್ಮಿಕರ ಶ್ರೇಯೋಭಿವೃದ್ಧಿ ಮೂಲ ಉದ್ದೇಶ ಹೊಂದಿದೆ. ಈ-ಶ್ರಮ್(eShram) ಕಾರ್ಡ್ ಅಸಂಘಟಿತ ವಲಯದ ಕಾರ್ಮಿಕರಿಗೆ ವಿವಿಧ ಪ್ರಯೋಜನಗಳನ್ನು ಒದಗಿಸಲು ಭಾರತ ಸರ್ಕಾರ ಪ್ರಾರಂಭಿಸಿದ ಡಿಜಿಟಲ್ ವೇದಿಕೆಯಾಗಿದೆ. ದೇಶದ ಎಲ್ಲ ಕಾರ್ಮಿಕರಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒದಗಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಈ-ಶ್ರಮ್ ಹೆಸರಿನ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಪೋರ್ಟಲ್, ವಿಶೇಷವಾಗಿ ಕಾರ್ಮಿಕರಿಗೆ ಶ್ರಮದ ಕೆಲಸ ನಿರ್ವಹಿಸುವ ಕೆಲಸಗಾರರಿಗೆ ಹಿಂದೆ ಹಲವು ಸೌಲಭ್ಯಗಳನ್ನು ಒದಗಿಸಲಿದೆ.

Whatsapp GroupJoin
Telegram channelJoin

ಕಾರ್ಮಿಕರು ಈ-ಶ್ರಮ್(eShram) ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ವಿಶಿಷ್ಟ ಗುರುತಿನ ಸಂಖ್ಯೆ ಕಾರ್ಡ್ ಪಡೆಯಬಹುದು. ಈ ಸಂಖ್ಯೆಯ ಮೂಲಕ ಉದ್ಯೋಗ ಕಳೆದುಕೊಂಡಲ್ಲಿ ಹೊಸ ಉದ್ಯೋಗ ಹುಡುಕಬಹುದು. ಈಗ ನೀವು ಈ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದು ಹೇಗೆ? ಇದರಿಂದ ಏನೆಲ್ಲಾ ಸೌಲಭ್ಯಗಳು ದೊರೆಯುತ್ತವೆ ಎಂಬುದನ್ನ ತಿಳಿದುಕೊಳ್ಳಿ.

ಇದನ್ನೂ ಕೂಡ ಓದಿ : ಮನೆ ಖರೀದಿ ಅಥವಾ ಕಟ್ಟಡಕ್ಕೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್ / ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ / Housing Scheme

ಈ ಪೋರ್ಟಲ್‌ನ ಮುಖ್ಯ ಉದ್ದೇಶವೆಂದರೆ ಪ್ರತಿದಿನ ಅಥವಾ ಮಾಸಿಕ ಆಧಾರದ ಮೇಲೆ ಕೆಲಸ ಮಾಡುವ ಎಲ್ಲ ಕಾರ್ಮಿಕರಿಂದ ಡೇಟಾವನ್ನು ಸಂಗ್ರಹಿಸುವುದು, ಕಾರ್ಮಿಕರು ವೈಯಕ್ತಿಕ ವಿವರಗಳನ್ನು ಒದಗಿಸುವ ಮೂಲಕ ಈ ಸಂಪುಟದಲ್ಲಿ ತಮ್ಮನ್ನ ನೋಂದಾಯಿಸಿಕೊಳ್ಳಬಹುದು. ಆನ್‌ಲೈನ್ ಮೂಲಕ ಈ-ಶ್ರಮ್ ಕಾರ್ಡ್‌ಗಾಗಿ ಅಪ್ಲೇ ಮಾಡಬಹುದು. ಕಾರ್ಮಿಕರು ತಮ್ಮ ಬಳಿ ಈ-ಶ್ರಮ್(eShram) ಕಾರ್ಡ್ ಹೊಂದಿದ್ದರೆ ಸರ್ಕಾರದ ಹಲವಾರು ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು. ಇದರಲ್ಲಿ ಪಿಂಚಣಿ ವ್ಯವಸ್ಥೆ ಕೂಡ ಲಭ್ಯವಿದ್ದು, ತಿಂಗಳಿಗೆ ಸಾವಿರದಿಂದ ಮೂರು ಸಾವಿರದವರೆಗೆ ಪಿಂಚಣಿ ಪಡೆಯಬಹುದು.

Whatsapp GroupJoin
Telegram channelJoin

ಈ-ಶ್ರಮ್ ಕಾರ್ಡ್ ನ ಪ್ರಯೋಜನಗಳು :-

ಈ-ಶ್ರಮ್(eShram) ಕಾರ್ಡ್ ನೋಂದಾಯಿಸಿಕೊಂಡ ಕಾರ್ಮಿಕರು ಅಂಗವೈಕಲ್ಯಕ್ಕೆ ಒಳಗಾದರೆ, 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಪರಿಹಾರವನ್ನಾಗಿ ನೀಡಲಾಗುವುದು. ಆಕಸ್ಮಿಕ ಮರಣದಿಂದ ಮೃತಪಟ್ಟರೆ 2 ಲಕ್ಷ ರೂಪಾಯಿ ಪರಿಹಾರ ಒದಗಿಸಲಾಗುತ್ತದೆ. ನೋಂದಣಿಯ ನಂತರ ನಿಮಗೆ ಒಂದು ವರ್ಷದವರೆಗೆ ಪ್ರೀಮಿಯಂ ಒದಗಿಸಲಾಗುತ್ತದೆ. ಈ-ಶ್ರಮ್(eShram) ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ನೀವು ಸಾಮಾಜಿಕ ಭದ್ರತಾ ಯೋಜನೆಯ ಲಾಭವನ್ನು ಪಡೆಯುತ್ತೀರಿ. ಈ ಪೋರ್ಟಲ್ ಮೂಲಕ ನಿಮಗೆ ವಿಮಾ ಯೋಜನೆಯ ವಿಮಾ ರಕ್ಷಣೆಯನ್ನು ಸಹ ನೀಡಲಾಗುವುದು. ಇದರ ಮೂಲಕ ನೀವು ವಲಸೆ ಕಾರ್ಮಿಕರ ತಂಡವನ್ನು ಸಹ ಟ್ರ್ಯಾಕ್ ಮಾಡಬಹುದು. ಈ ಮೂಲಕ ನಿಮಗೆ ಆರ್ಥಿಕ ಸಹಾಯವನ್ನು ನೀಡಲಾಗುವುದು. ಉದ್ಯೋಗ ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಇದನ್ನೂ ಕೂಡ ಓದಿ : 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ – ಇನ್ನು ಮುಂದೆ ಪ್ರತಿ ತಿಂಗಳಿಗೆ ₹5000 ಹಣ – ವೃದ್ಧರ ಪಿಂಚಣಿ ಗುಡ್ ನ್ಯೂಸ್.!

ಅಗತ್ಯವಿರುವ ದಾಖಲೆಗಳು

ಹೆಸರು, ವಿಳಾಸ ಪುರಾವೆ, ವೃತ್ತಿ, ಶೈಕ್ಷಣಿಕ ಅರ್ಹತೆ, ಕುಟುಂಬದ ವಿವರಗಳು, ಆಧಾರ್ ಕಾರ್ಡ್, ಕೌಶಲ್ಯ ವಿತರಣೆ, ವಿದ್ಯುತ್ ಬಿಲ್, ಜನನ ಪ್ರಮಾಣ ಪತ್ರ, ಪಡಿತರ ಪತ್ರ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಂಡಿರುವ ಮೊಬೈಲ್ ನಂಬರ್ ಸೇರಿದಂತೆ ಹಲವು ದಾಖಲೆಗಳು ಅತ್ಯಾವಶ್ಯಕವಾಗಿದೆ.

ಅರ್ಹತೆ :-

ಈ-ಶ್ರಮ್(eShram) ಕಾರ್ಡ್ ಗಾಗಿ ಆನ್ ಲೈನ್ ಮೂಲಕ ಯಾರೆಲ್ಲ ನೋಂದಾಯಿಸಿಕೊಳ್ಳಬಹುದು ಅಂದರೆ, ಲೇಬಲಿಂಗ್ ಮತ್ತು ಪ್ಯಾಕಿಂಗ್ ಕಾರ್ಮಿಕರು, ಇಟ್ಟಿಗೆ ಕೆಲಸಗಾರರು, ವಲಸೆ ಕಾರ್ಮಿಕರು, ತರಕಾರಿ ಮತ್ತು ಹಣ್ಣು ಮಾರಾಟಗಾರರು, ಬಡಗಿ, ರೇಷ್ಮೆ ಕೃಷಿ ಕಾರ್ಮಿಕರು, ಮನೆ ಕೆಲಸಗಾರರು, ಕೃಷಿ ಕೆಲಸಗಾರರು, ಸಣ್ಣ ಮತ್ತು ಅತೀ ಸಣ್ಣ ರೈತರು, ಆಶಾ ಕಾರ್ಯಕರ್ತೆಯರು, ಬೀದಿಬದಿ ವ್ಯಾಪಾರಿಗಳು, ಹಾಲು ಉತ್ಪಾದಕ ರೈತರು, ರೇಷ್ಮೆ ಉತ್ಪಾದನಾ ಕೆಲಸಗಾರರು, ಪತ್ರಿಕೆ ಮಾರಾಟಗಾರರು, ಕ್ಷೌರಿಕರು, ಮೀನುಗಾರರು, ಸಾ ಮಿಲ್ ಕಾರ್ಮಿಕರು, ಟ್ಯಾಪರಿಂಗ್ ಕೆಲಸಗಾರರು, ಪಶು ಪಾಲನಾ ಕೆಲಸಗಾರರು, ಕಟ್ಟಡ ಮತ್ತು ನಿರ್ಮಾಣ ಕೆಲಸಗಾರರು, ಗೃಹ ಕಾರ್ಮಿಕರು, ಆಟೋ ಚಾಲಕರು ಸೇರಿದಂತೆ ಒಟ್ಟು 150ಕ್ಕಿಂತ ಹೆಚ್ಚು ಬಗೆಯ ಕಾರ್ಮಿಕರು ರಾಜ್ಯದಲ್ಲಿ ಈ-ಶ್ರಮ್(eShram) ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply