ಮನೆ ಖರೀದಿ ಅಥವಾ ಕಟ್ಟಡಕ್ಕೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್ / ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ / Housing Scheme

Housing Scheme : ಕೇಂದ್ರದ ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ದೇಶದ ಎಲ್ಲ ಬಡವರಿಗೆ ಬಾರಿ ದೊಡ್ಡ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಾರು ಸ್ವಂತ ಮನೆ ಖರೀದಿಸಲು ಬಯಸುತ್ತಾರೋ ಅಂತಹವರಿಗೆ ಅಥವಾ ಹೊಸ ಮನೆ ಕಟ್ಟಲು ಬಯಸುವವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ. ನೀವು ಕೂಡ ಇವತ್ತಿನವರೆಗೂ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ವಸತಿ ಯೋಜನೆ ಅಡಿಯಲ್ಲಿ ಮನೆಯನ್ನು ಪಡೆದುಕೊಂಡಿಲ್ಲ ಅಂದ್ರೆ ತಪ್ಪದೇ ಈ ಲೇಖನವನ್ನು ಕೊನೆವರೆಗೂ ನೋಡಿ.

ಕೇಂದ್ರ ಸರ್ಕಾರದಿಂದ ದೇಶದ ಪ್ರತಿಯೊಬ್ಬರಿಗೂ ಕೂಡ ಇರಲು ಸ್ವಂತ ಸೂರು ಇರಬೇಕು ಎನ್ನುವುದು ಕೇಂದ್ರದ ಆಶಯವಾಗಿದೆ. ಭಾರತವನ್ನು ಗುಡಿಸಲು ಮುಕ್ತ ಭಾರತವನ್ನಾಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಮೇಲಿಂದ ಮೇಲೆ ವಿವಿಧ ವಸತಿ ಯೋಜನೆಗಳ ಮೂಲಕ ಆಯಾ ಅರ್ಹ ಫಲಾನುಭವಿಗಳಿಗೆ ಹೊಸ ಮನೆಗಳ ನಿರ್ಮಾಣಕ್ಕೆ ಧನ ಸಹಾಯವನ್ನು ನೀಡುತ್ತಾ ಬರುತ್ತಿದೆ. ಇನ್ನು ಕೂಡ ದೇಶದಲ್ಲಿ ನಿಜವಾದ ಫಲಾನುಭವಿಗಳಿಗೆ ಮನೆ ದೊರೆತಿಲ್ಲ ಎನ್ನುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದ್ದು, ಇತ್ತೀಚೆಗೆ ಮದುವೆಯಾಗಿ ಹೊಸ ರೇಶನ್ ಕಾರ್ಡ್ ಮಾಡಿಕೊಂಡಿರುವ ಬಡ ಕುಟುಂಬಗಳು ಈ ಯೋಜನೆಯ ಫಲಾನುಭವಿಯಾಗಬಹುದು.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : ಪಿಯುಸಿ ಪಾಸಾದವರಿಗೆ ಗುಡ್ ನ್ಯೂಸ್.! ಗ್ರಾಮ ಪಂಚಾಯತ್ ನಲ್ಲಿ ಉದ್ಯೋಗಾವಕಾಶ.! ನೀವು ಈ ಡೈರೆಕ್ಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ

ಹೌದು, ಜೊತೆಗೆ ಇವತ್ತಿನವರೆಗೂ ಕೂಡ ಯಾವ ಮಹಿಳೆಯು ಸರ್ಕಾರದಿಂದ ಉಚಿತವಾಗಿ ಮನೆ ಪಡೆದುಕೊಂಡಿಲ್ಲವೋ ಅಂತಹವರು ಕೂಡ ಈ ಯೋಜನೆಯ ಫಲಾನುಭವಿಯಾಗಬಹುದಾಗಿದೆ. ಹಾಗಿದ್ದರೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮತ್ತೊಂದು ಹೊಸ ಯೋಜನೆ ಏನು? ಇಲ್ಲಿಯವರೆಗೂ ಸರ್ಕಾರದಿಂದ ಉಚಿತ ಮನೆ ಪಡೆದುಕೊಳ್ಳದೇ ಇರುವವರಿಗೆ ಎಲ್ಲಿ ಮತ್ತು ಹೇಗೆ ಮನೆ ನೀಡಲಾಗುತ್ತಿದೆ.? ನೋಡೋಣ…

WhatsApp Group Join Now
Telegram Group Join Now

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಾಡಿಗೆ ಮನೆಗಳಲ್ಲಿ ಅಥವಾ ಕೊಳಗೇರಿಗಳಲ್ಲಿ ವಾಸವಾಗಿರುವವರು ತಮ್ಮ ಸ್ವಂತ ಮನೆಗಳನ್ನು ಹೊಂದಲು ನೆರವಾಗಲು ಯೋಜನೆಯೊಂದನ್ನು ಗುರುವಾರ ಪ್ರಕಟಿಸಿದರು. ಮುಂದಿನ ಐದು ವರ್ಷಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಬಡವರಿಗಾಗಿ ಇನ್ನು 2 ಕೋಟಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ಅವರು ತನ್ನ ಮಧ್ಯಂತರ ಬಜೆಟ್ ಭಾಷಣದಲ್ಲಿ ಪ್ರಕಟಿಸಿದ್ದರು.

ಇದನ್ನೂ ಕೂಡ ಓದಿ : 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ – ಇನ್ನು ಮುಂದೆ ಪ್ರತಿ ತಿಂಗಳಿಗೆ ₹5000 ಹಣ – ವೃದ್ಧರ ಪಿಂಚಣಿ ಗುಡ್ ನ್ಯೂಸ್.!

WhatsApp Group Join Now
Telegram Group Join Now

ಮೋದಿ ಸರ್ಕಾರವು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ಭಾಗವಾಗಿ ಕಳೆದ 10 ವರ್ಷಗಳಲ್ಲಿ ಪ್ರತಿಯೊಬ್ಬರಿಗೂ ಮನೆ ನೀರು, ವಿದ್ಯುತ್, ಅಡುಗೆ ಅನಿಲ ಮತ್ತು ಬ್ಯಾಂಕ್ ಖಾತೆಯನ್ನು ಒದಗಿಸಲು ಶ್ರಮಿಸಿದೆ ಎಂದು ಹೇಳಿದ ಅವರು, ನಮ್ಮ ಸರ್ಕಾರವು ಬಾಡಿಗೆ ಮನೆಗಳು ಅಥವಾ ಕೊಳಗೇರಿಗಳಲ್ಲಿ ವಾಸವಿರುವ ಮಾಧ್ಯಮ ವರ್ಗದ ಅರ್ಹ ಜನರಿಗೆ ತಮಗಾಗಿ ಸ್ವಂತ ಮನೆಗಳನ್ನ ಖರೀದಿಸಲು ಅಥವಾ ನಿರ್ಮಿಸಲು ನೆರವಾಗುವ ಉದ್ದೇಶದಿಂದ ಯೋಜನೆಯೊಂದನ್ನ ಆರಂಭಿಸಲಾಗುವುದು ಎಂದು ತಿಳಿಸಿದರು.

ಕಾವಿಡ್ ಸಾಂಕ್ರಾಮಿಕವು ಉಂಟು ಮಾಡಿದ್ದ ಅಡೆ-ತಡೆಗಳ ಹೊರತಾಗಿಯೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅನುಷ್ಠಾನವು ಮುಂದುವರೆಯುತ್ತದೆ. 3 ಕೋಟಿ ಮನೆಗಳ ನಿರ್ಮಾಣದ ಗುರಿ ಸಾಧನೆಯನ್ನ ನಾವು ಸಮೀಪಿಸಿದ್ದೇವೆ. ಕುಟುಂಬಗಳ ಸಂಖ್ಯೆಯಲ್ಲಿ ಹೆಚ್ಚಳದಿಂದಾಗಿ ಹೆಚ್ಚುತ್ತಿರುವ ಅಗತ್ಯವನ್ನ ಪೂರೈಸಲು ನಾವು ಮುಂದಿನ ಐದು ವರ್ಷಗಳಲ್ಲಿ ಇನ್ನೂ 2 ಕೋಟಿ ಮನೆಗಳನ್ನ ನಿರ್ಮಿಸಲಿದ್ದೇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply