ಇಂದಿನ ಚಂದ್ರಗ್ರಹಣ ಮುಗಿದ ಬಳಿಕ ಈ ಚಿಕ್ಕ ಕೆಲಸ ಮಾಡಿದ್ರೆ ಶ್ರೀಮಂತರಾಗಿರುತ್ತಿರಿ! – 2024 Moon Eclipse

2024 Moon Eclipse : ಇಂದು ಚಂದ್ರಗ್ರಹಣ ಸಂಭವಿಸುತ್ತಿದ್ದು, ಹೋಳಿ ಹಬ್ಬದೊಂದಿಗೆ ಚಂದ್ರ ಗ್ರಹಣ ಗೋಚರಿಸುತ್ತಿರುವುದು ತುಂಬಾ ಅಪರೂಪವಾಗಿದೆ. ಗ್ರಹಣ ಮುಗಿದ ಬಳಿಕ ನೀವು ಈ ಕೆಲಸಗಳನ್ನು ಮಾಡಿದರೆ ಹಾಗು ಈ ನಿಯಮ ಪಾಲನೆ ಮಾಡಿದ್ರೆ ನಿಮಗೆ ಹಾಗೂ ನಿಮ್ಮ ಮನೆಯಲ್ಲಿ, ಕುಟುಂಬದಲ್ಲಿ ಶುಭ ಫಲ ದೊರೆಯುತ್ತದೆ. ಅದೇ ರೀತಿಯಾಗಿ ಲಕ್ಷಾಧಿಪತಿ, ಕೋಟ್ಯಾಧಿಪತಿ ಸೇರಿದಂತೆ ಮತ್ತೆ ಧನ ಲಕ್ಷ್ಮಿ ಒಲಿದು ಅಪಾರ ಧನ ಸಂಪತ್ತು ನಿಮ್ಮದಾಗಲಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ಸಮಯದಲ್ಲಿ ಭೂಮಿಯ ಮೇಲೆ ರಾಹುವಿನ ಪ್ರಭಾವ ಹೆಚ್ಚಾಗುತ್ತದೆ. ಗ್ರಹಣದ ಸಮಯದಲ್ಲಿ ಹಲವು ನಿಯಮಗಳನ್ನ ಪಾಲಿಸಲಾಗುತ್ತದೆ. ಅದರ ಅನಪೇಕ್ಷಿತ ಪರಿಣಾಮಗಳನ್ನು ತಪ್ಪಿಸಲು ಕೆಲವು ವಸ್ತುಗಳನ್ನು ಬಳಸುವುದು ತುಂಬಾ ಉಪಯುಕ್ತವೆಂದು ಪರಿಗಣಿಸಲಾಗಿದೆ.

ಇದನ್ನೂ ಕೂಡ ಓದಿ : Ration Card : ಹೊಸ ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದೀರಾ.? ನಾಳೆಯಿಂದಲೇ ಹೊಸ ಪಡಿತರ ಚೀಟಿಗಾಗಿ ಅರ್ಜಿ ಆಹ್ವಾನ.! ಎರಡು ದಿನ ಮಾತ್ರ ಅವಕಾಶ.!

ಗ್ರಹಣದಲ್ಲಿ ತುಳಸಿಯನ್ನ ಬಳಸಿ :- ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಗ್ರಹಣದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ತುಳಸಿ ಎಲೆಗಳನ್ನು ಆಹಾರದಲ್ಲಿ ಸೇರಿಸಬೇಕು. ಇದರಿಂದ ಆಹಾರವು ಅಶುದ್ಧವಾಗುವುದಿಲ್ಲ ಮತ್ತು ಗ್ರಹಣದ ನಂತರ ತಿನ್ನಬಹುದೆಂದು ನಂಬಲಾಗಿದೆ. ತುಳಸಿ ಎಲೆಗಳನ್ನ ಆಹಾರಕ್ಕೆ ಸೇರಿಸುವುದರಿಂದ ಗ್ರಹಣದ ಋಣಾತ್ಮಕ ಪರಿಣಾಮಗಳು ಕಡಿಮೆಯಾಗುತ್ತವೆ.

ದೂರ್ವಾ ಹುಲ್ಲು :- ಗ್ರಹಣದ ಸಮಯದಲ್ಲಿ ದೂರ್ವೆಯನ್ನ ಕೂಡ ಬಳಸಬಹುದು. ಹಿಂದೂ ಧರ್ಮದಲ್ಲಿ ದೂರ್ವೆಯನ್ನ ಪೂಜೆ ಮತ್ತು ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ. ದೂರ್ವಾ ಹುಲ್ಲು ಗ್ರಹಣದ ಅಶುಭ ಪರಿಣಾಮಗಳಿಂದ ರಕ್ಷಿಸುತ್ತದೆ. ಗ್ರಹಣದ ಮೊದಲು ಆಹಾರ ಮತ್ತು ನೀರಿನ ಪದಾರ್ಥಗಳಲ್ಲಿ ದೂರ್ವೆ ನೀಡಲಾಗುತ್ತದೆ. ದೂರ್ವೆ ಸೂರ್ಯನಿಂದ ಹೊರಹೊಮ್ಮುವ ಹಾನಿಕಾರಕ ಮತ್ತು ನಕಾರಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ.

ಇದನ್ನೂ ಕೂಡ ಓದಿ : Veterinary Department : ಕುರಿ, ಮೇಕೆ, ಹಸು, ಎಮ್ಮೆ ಆಕಸ್ಮಿಕ ಸಾವಿಗೆ ₹10,000/- ಗಳಷ್ಟು ಸಹಾಯಧನ – ಅನುಗ್ರಹ ಯೋಜನೆ ಜಾರಿಗೆ.!

ಎಳ್ಳು :- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ಸಮಯದಲ್ಲಿ ಅನೇಕ ಅಶುಭ ಮತ್ತು ದುಷ್ಟ ಶಕ್ತಿಗಳು ಜಾಗೃತಗೊಳ್ಳುತ್ತವೆ. ಇದರ ದುಷ್ಪರಿಣಾಮಗಳನ್ನು ತಪ್ಪಿಸಲು ಜನರು ಗ್ರಹಣದ ಸಮಯದಲ್ಲಿ ದಾನವನ್ನು ಮಾಡುತ್ತಾರೆ. ಎಳ್ಳು ಗ್ರಹಣದ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಗ್ರಹಣದ ಮೊದಲು ಎಳ್ಳನ್ನ ಖರೀದಿಸಿಟ್ಟುಕೊಳ್ಳಿ. ಗ್ರಹಣ ಮುಗಿದ ನಂತರ ಸ್ನಾನಮಾಡಿ ಪೂಜೆಯ ನಂತರ ಈ ಎಳ್ಳನ್ನ ನಿರ್ಗತಿಕರಿಗೆ ದಾನ ಮಾಡಿ ಗ್ರಹಣದ ನಂತರ ಎಳ್ಳನ್ನ ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ ರಾಹು ಮತ್ತು ಕೇತುಗಳು ಶಾಂತವಾಗಿರುತ್ತವೆ.

ಗ್ರಹಣದಲ್ಲಿ ಗಂಗಾಜಲ ಬಳಕೆ :- ಸನಾತನ ಧರ್ಮದಲ್ಲಿ ಗಂಗಾಜಲವನ್ನ ಅತ್ಯಂತ ಪವಿತ್ರ ಮತ್ತು ಪುಣ್ಯವೆಂದು ಪರಿಗಣಿಸಲಾಗಿದೆ. ಆದ್ದರಿಂದ ಗ್ರಹಣ ಕಾಲದಲ್ಲಿ ಗಂಗಾಜಲದ ಬಳಕೆ ಅತ್ಯಂತ ಮಂಗಳಕರ. ಗ್ರಹಣದ ನಂತರ ಗಂಗಾಜಲದಿಂದ ಸ್ನಾನ ಮಾಡುವುದರಿಂದ ಗ್ರಹಣದ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ. ಮತ್ತು ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ. ಗ್ರಹಣ ಮುಗಿದ ನಂತರ ಇಡೀ ಮನೆಯನ್ನ ಗಂಗಾಜಲದಿಂದ ಶುದ್ಧೀಕರಿಸಬೇಕು. ಹೀಗಾಗಿ ಇವೆಲ್ಲವೂ ಪಾಲನೆ ಮಾಡುವುದರಿಂದ ನಿಮಗೆ ಹಾಗು ನಿಮ್ಮ ಮನೆಯಲ್ಲಿ ಶುಭ ಫಲ ದೊರೆಯಲಿದೆ. ಎಲ್ಲವೂ ಒಳ್ಳೆಯದಾಗಲಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply