Veterinary Department : ಕುರಿ, ಮೇಕೆ, ಹಸು, ಎಮ್ಮೆ ಆಕಸ್ಮಿಕ ಸಾವಿಗೆ ₹10,000/- ಗಳಷ್ಟು ಸಹಾಯಧನ – ಅನುಗ್ರಹ ಯೋಜನೆ ಜಾರಿಗೆ.!

Veterinary Department : ನಮಸ್ಕಾರ ಸ್ನೇಹಿತರೇ, ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಅಡಿಯಲ್ಲಿ ರೈತರಿಗಾಗಿ ಹಲವು ಯೋಜನೆಗಳನ್ನ ಜಾರಿಗೊಳಿಸಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ರಾಜ್ಯ ಸರ್ಕಾರವು 2023 ರಿಂದ ಇಲ್ಲಿಯವರೆಗೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯಿಂದ ಹಲವಾರು ಜನೋಪಯೋಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಮುಖ್ಯವಾಗಿ ಕೃಷಿಕರಿಗೆ ಹಾಗು ಕೃಷಿಯೇತರ ಚಟುವಟಿಕೆಗಳನ್ನು ನಿರ್ವಹಿಸುವಂತಹ ರೈತರಿಗೆ ಮತ್ತು ರೈತ ಕಾರ್ಮಿಕರಿಗೆ ಅನುಕೂಲ ಆಗುವಂತಹ ಕ್ರಮಗಳನ್ನು ಕೈಗೊಂಡಿದೆ.

ಹಾಲು ಉತ್ಪಾದಕರಿಗೆ(Milk producers) ಪ್ರೋತ್ಸಾಹ :-

ರಾಜ್ಯದಲ್ಲಿ ಕೋಟ್ಯಂತರ ರೈತರು ಕೃಷಿ ಮತ್ತು ಕೃಷಿ ಚಟುವಟಿಕೆಗಳಾದ ಪಶುಪಾಲನೆಯಿಂದ ಲಕ್ಷಾಂತರ ಲೀಟರ್ ಹಾಲನ್ನು, ರಾಜ್ಯ ಸರ್ಕಾರದ ಸಂಸ್ಥೆಯಾದ ಕೆಎಂಎಫ್(KMF) ಗೆ ನೀಡುತ್ತಿದ್ದು, ಅದಕ್ಕೆ ಪರಿಹಾರವಾಗಿ ರಾಜ್ಯ ಸರ್ಕಾರವು 5 ರೂಪಾಯಿ ಪ್ರೋತ್ಸಾಹ ಧನವನ್ನು ರೈತರಿಗೆ ನೀಡುತ್ತಿದೆ.

ದನ-ಕರುಗಳ ಆಕಸ್ಮಿಕ ಸಾವುಗಳಿಗೆ ಪರಿಹಾರ ಘೋಷಣೆ :-

ರಾಜ್ಯದಲ್ಲಿ ಕಳೆದ ವರ್ಷ ಚರ್ಮ ಗಂಟು ರೋಗ, ಕಾಲು ಬಾಯಿ ರೋಗ ಸೇರಿದಂತೆ ಜಾನುವಾರಗಳು ಕೆಲವು ಭಯಾನಕ ರೋಗಕ್ಕೆ ತುತ್ತಾಗಿ, ಹಲವಾರು ದನ, ಎಮ್ಮೆ, ಕರುಗಳು ಸಾವನ್ನಪ್ಪಿದವು. ರೈತರ ಪ್ರತಿಭಟನೆ ಮತ್ತು ಹೋರಾಟದಿಂದ ಎಚ್ಚೆತ್ತ ರಾಜ್ಯ ಸರ್ಕಾರವು 6 ತಿಂಗಳ ನಂತರದ ದನ ಕರುಗಳ ಸಾವಿಗೆ ಸುಮಾರು ₹10,000/- ರೂಪಾಯಿಗಳಷ್ಟು ಪರಿಹಾರ ಹಣವನ್ನ ಘೋಷಣೆ ಮಾಡಿತ್ತು.

ಕುರಿ ಕಾಯುವವರಿಗೆ ಅನುಗ್ರಹ ಯೋಜನೆ ಜಾರಿಗೆ :-

ನಮ್ಮ ರಾಜ್ಯದಲ್ಲಿ ಕುರುಬ ಸಮಾಜದ ಲಕ್ಷಾಂತರ ಜನ ಇದ್ದು ಇವರ ಕುಲ ಕಸಬು ಕುರಿ ಕಾಯುವುದು ಆಗಿರುತ್ತದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಇದೇ ಸಮಾಜದವರಾಗಿದ್ದಾರೆ. ಸಂಚಾರಿ ಕುರಿಗಳು ಆಕಸ್ಮಿಕವಾಗಿ ಮರಣ ಹೊಂದಿದರೆ, ಅಥವಾ ಆರು ತಿಂಗಳ ವಯಸ್ಸು ಮೇಲ್ಪಟ್ಟಿದ್ದರೆ, ಒಂದು ಕುರಿಗೆ ತಲಾ ₹5,000/- ರೂಪಾಯಿಗಳು ಹಾಗು ಮೂರರಿಂದ ಆರು ತಿಂಗಳ ಒಳಗಿನ ಕುರಿಗಳು ಮರಣ ಹೊಂದಿದರೆ ₹3,500/- ರೂಪಾಯಿಗಳಷ್ಟು ಪರಿಹಾರ ಸಹಾಯಧನವನ್ನು ವಿತರಿಸಲಾಗುತ್ತಿದೆ.

ಸಂಚಾರಿ ಪಶು ಹಾಸ್ಪಿಟಲ್ ಸೇವೆ (Mobile Animal Hospital Service) :-

ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸಾವಿರಾರು ಸಂಖ್ಯೆಯ ಪಶುಗಳಿದ್ದು, ಜಾನುವಾರಗಳಿಗೆ ಸೂಕ್ತ ಸಮಯದಲ್ಲಿ, ಪಶು ವೈದ್ಯಕೀಯ ಚಿಕಿತ್ಸೆಗಳನ್ನು ತ್ವರಿತವಾಗಿ ನೀಡಲು ಸಂಚಾರಿ ಪುಶು ಹಾಸ್ಪಿಟಲ್ ಸೇವೆಯನ್ನು(Mobile Animal Hospital Service) ರಾಜ್ಯ ಸರ್ಕಾರವು ವ್ಯವಸ್ಥೆ ಮಾಡಲಾಗಿದೆ. ರೈತರು ಭಾಂದವರು 1962 ನಂಬರ್ ಗೆ ಕರೆ ಮಾಡಿ ಸೌಲಭ್ಯ ಪಡೆಯಬಹುದು. ಹಾಗು ರಾಜ್ಯದ ಪ್ರತಿಯೊಬ್ಬ ರೈತರೂ ಕೂಡ ಈ ಸೌಲಭ್ಯಗಳನ್ನ ಪಡೆಯಲು ಈ ಮಾಹಿತಿಯನ್ನ ಆದಷ್ಟು ಶೇರ್ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply