RTC ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ – ಸಿಎಂ ಸಿದ್ದರಾಮಯ್ಯ ಸರ್ಕಾರದ ಹೊಸ ಆದೇಶ – ರೈತರಿಗೆ ಶಾಕಿಂಗ್!

RTC : ಕರ್ನಾಟಕ ಸರ್ಕಾರದ ಹೊಸ ಆದೇಶವೊಂದು ರೈತರ ಆತಂಕಕ್ಕೆ ಕಾರಣವಾಗಿದೆ. ಪಹಣಿಗೆ, ಆಧಾರ್ ಜೋಡಣೆ ಕಡ್ಡಾಯ ಎಂದು ಸರ್ಕಾರ ಆದೇಶ ಹೊರಡಿಸಿದೆ. ಹೌದು, ಇನ್ಮುಂದೆ ಸರ್ಕಾರದ ಸೌಲಭ್ಯವನ್ನ ಪಡೆಯಲು ಆರ್‌ಟಿಸಿಗೆ ಅಂದ್ರೆ ನಿಮ್ಮ ಜಮೀನಿನ ಪಹಣಿಗೆ ನಿಮ್ಮ ಆಧಾರ್ ಲಿಂಕ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ ಎಂದು ಸರ್ಕಾರ ಹೇಳಿದೆ.

ಪಹಣಿಗೆ ಆಧಾರ್ ಜೋಡಣೆ ಮಾಡಲು ಅನುಕೂಲವಾಗುವಂತೆ ಸರ್ಕಾರ ಹೊಸದಾದ ತಂತ್ರಾಂಶವನ್ನ ಸಿದ್ಧಗೊಳಿಸಿದ್ದು. ನೀವು ಆನ್‌ಲೈನ್‌ನಲ್ಲಿಯೂ ನಿಮ್ಮ ಪಹಣಿಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಬಹುದು ಹಾಗೂ ನಿಮ್ಮ ಗ್ರಾಮ ಆಡಳಿತಾಧಿಕಾರಿಗಳನ್ನು ಭೇಟಿ ಮಾಡಿ ನಿಮ್ಮ ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. ಹೌದು, ಈ ಕುರಿತು ಪ್ರಕಟಣೆ ಮೂಲಕ ಮಾಹಿತಿಯನ್ನ ನೀಡಿದ್ದಾರೆ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Veterinary Department : ಕುರಿ, ಮೇಕೆ, ಹಸು, ಎಮ್ಮೆ ಆಕಸ್ಮಿಕ ಸಾವಿಗೆ ₹10,000/- ಗಳಷ್ಟು ಸಹಾಯಧನ – ಅನುಗ್ರಹ ಯೋಜನೆ ಜಾರಿಗೆ.!

ಈ ಕಡ್ಡಾಯವಾದ ಕಾರ್ಯವನ್ನು ಮಾಡಲು ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದೆ. ಸರ್ಕಾರದ ಸೌಲಭ್ಯಗಳನ್ನ ನೇರವಾಗಿ ಪಡೆಯಲು, ಬ್ಯಾಂಕಿಂಗ್ ಸೌಲಭ್ಯಗಳನ್ನು ಪಡೆಯಲು ಮತ್ತು ಕೃಷಿ ಇಲಾಖೆ ಸೌಲಭ್ಯಗಳನ್ನು ಪಡೆಯಲು ಮತ್ತು ಬೆಳೆ ಪರಿಹಾರ ಪಡೆಯಲು ಜಮೀನಿನ ಉತಾರಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿರುತ್ತದೆ.

WhatsApp Group Join Now
Telegram Group Join Now

ಜಮೀನಿನ ಉತಾರ ಮತ್ತು ಆಧಾರ್ ಕಾರ್ಡ್ ತೆಗೆದುಕೊಂಡು ಗ್ರಾಮ ಒನ್, ಕರ್ನಾಟಕ ಒನ್, ಹಾಗು ಬೆಂಗಳೂರು ಒನ್ ಆನ್‌ಲೈನ್ ಸೇವಾ ಕೇಂದ್ರಕ್ಕೆ ಭೇಟಿ ಮಾಡಿ ಹಾಗು ಗ್ರಾಮ ಅಥವಾ ಕಂದಾಯ ಆಡಳಿತ ಅಧಿಕಾರಿಗಳ ಕಚೇರಿಗೆ ಭೇಟಿ ಮಾಡಿ, ಅತಿ ಹೆಚ್ಚು ಮಾಹಿತಿ ಪಡೆದು ನಿಮ್ಮ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಸೂಚಿಸಲಾಗಿದೆ.

ಇದನ್ನೂ ಕೂಡ ಓದಿ : Loan Facility : ಕೇಂದ್ರ ಸರ್ಕಾರ ಯಾವುದೇ ಗ್ಯಾರಂಟಿ ಇಲ್ಲದೇ 2 ಲಕ್ಷ ಸಾಲ ನೀಡುತ್ತಂತೆ.? ನೀವೂ ಕೂಡ ಅರ್ಜಿ ಸಲ್ಲಿಸಬಹುದು

WhatsApp Group Join Now
Telegram Group Join Now

ಮುಖ್ಯವಾಗಿ ಆನ್‌ಲೈನ್‌ನಲ್ಲಿ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಕರ್ನಾಟಕ ಸರ್ಕಾರದ ವೆಬ್‌ಸೈಟ್‌ ಲಿಂಕ್ :- ಭೂಮಿ ನಾಗರಿಕ ಸೇವೆಗಳು (Bhoomi Citizen Services)

ಈ ಲಿಂಕ್ ಮೂಲಕ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ. ಹಾಗು ಆದಷ್ಟು ಈ ಮಾಹಿತಿ ಈ ವಿಡಿಯೋವನ್ನ ಎಲ್ಲ ರೈತರಿಗೆ, ರೈತ ಕುಟುಂಬಕ್ಕೆ ಸೇರಿದ ಎಲ್ಲರಿಗೂ ವಾಟ್ಸಪ್ ಹಾಗೂ ಫೇಸ್ ಬುಕ್ ನಲ್ಲಿ ಶೇರ್ ಮಾಡಿ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply