Darshan Thoogudeepa: ಡಿ ಬಾಸ್ ದರ್ಶನ್ ಅಭಿನಯದ ಕಾಟೇರ ಚಿತ್ರದ ದಾಖಲೆಯನ್ನ ಕೇವಲ 2 ಗಂಟೆಯಲ್ಲೇ ಧೂಳಿಪಟ ಮಾಡಿದೆಯಂತೆ ಯುವ ಸಿನಿಮಾದ ಟೀಸರ್.!

Darshan Thoogudeepa: ನಟ ಸಾರ್ವಭೌಮ ಡಾ| ರಾಜ್ ಕುಮಾರ್ ಕುಟುಂಬದ(ದೊಡ್ಮನೆ) ಮೂರನೇ ತಲೆಮಾರಿನ ಕುಡಿ ಆಗಿರುವಂತಹ ಯುವರಾಜ್ ಕುಮಾರ್(ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ) ಅವರು ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡುವುದು ಕನ್ಫರ್ಮ್ ಆಗಿದೆ. ಯುವರಾಜ್ ಕುಮಾರ್ ಅವರ ಮೊದಲ ಚಿತ್ರ ‘ಯುವ’ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ.

ಇದನ್ನೂ ಕೂಡ ಓದಿ : ಪವಿತ್ರ ಗೌಡ ಕಂಡರೆ ದರ್ಶನ್ ಅವರಿಗೆ ಏಕೆ ಅಷ್ಟೊಂದು ಇಷ್ಟ ಗೊತ್ತಾ.? | ಈ ಪವಿತ್ರ ಗೌಡ ಯಾರು.?

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದಲ್ಲಿ ಹಾಗು ಕೆಜಿಎಫ್, ಕಾಂತಾರ ದಂತಹ ಹಿಟ್ ಸಿನಿಮಾಗಳನ್ನ ಕೊಟ್ಟ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ನಾಯಕನಾಗಿ ಯುವರಾಜ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದು, ಚಿತ್ರವಂತೂ ಪಕ್ಕಾ ಆಗಿ ಮೂಡಿ ಬರಲಿದೆ ಅನ್ನುವಂತಹ ಸುಳಿವನ್ನ ಚಿತ್ರದ ಟೀಸರ್ ಈಗಾಗಲೇ ನೀಡಿದೆ. ಇನ್ನು ಯುವರಾಜ್ ಕುಮಾರ್ ತಮ್ಮ ಸಿನಿಮಾದ ಮೊದಲ ಟೀಸರ್ ಮೂಲಕವೇ ಕನ್ನಡ ಚಿತ್ರರಂಗದ ದೊಡ್ಡ ಸ್ಟಾರ್ ನಟನ ದಾಖಲೆಯನ್ನ ಸಹ ಮುರಿದಿದ್ದಾರಂತೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಫೆಬ್ರವರಿ 16 ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದಂದು ಅವರು  ನಾಯಕ ನಟನಾಗಿ ನಟಿಸುತ್ತಿರುವ ‘ಕಾಟೇರ’ ಚಿತ್ರದ ಟೈಟಲ್ ಅನೌನ್ಸ್ ಮೆಂಟ್ ಟೀಸರ್ ವಿಡಿಯೋ ಕೇವಲ 2 ವಾರದಲ್ಲಿ ಯೌಟ್ಯೂಬ್ ನಲ್ಲಿ 13 ಲಕ್ಷ ವ್ಯೂಸ್ ಪಡೆದುಕೊಂಡಿತ್ತು. ಆದರೆ, ಯುವರಾಜ್ ಕುಮಾರ್ ನಟನೆಯ ‘ಯುವ’ ಚಿತ್ರದ ಟೀಸರ್ ಇದೀಗ ಕೇವಲ ಎರಡೇ ಗಂಟೆಗಳಲ್ಲಿ ಬ್ರೇಕ್ ಮಾಡಿದೆಯಂತೆ.

ಇದನ್ನೂ ಕೂಡ ಓದಿ : ಹಣ ಕದ್ದು ಸಿಕ್ಕಿಬಿದ್ದ ನಟ ಡಿ ಬಾಸ್ ದರ್ಶನ್! ವಿಷಯ ತಿಳಿದು ಕಣ್ಣೀರಿಟ್ಟ ತಾಯಿ! ಆಗಿದ್ದೇನು ನೋಡಿ

ಈ ಮೂಲಕ ಕನ್ನಡ ಸಿನಿಮಾರಂಗದ ದೊಡ್ಡ ಸ್ಟಾರ್ ಆಗಿರುವ ಡಿ ಬಾಸ್ ದರ್ಶನ್ ಅವರ ಸಿನಿಮಾದ ಟೈಟಲ್ ಟೀಸರ್ ವಿಡಿಯೋದ ರೆಕಾರ್ಡ್ ಅನ್ನ ಕೂಡ ಯುವನಟ ಯುವರಾಜ್ ಕುಮಾರ್ ಅವರು ಕೇವಲ ತಮ್ಮ ಮೊದಲ ಚಿತ್ರದಲ್ಲಿಯೇ ಬ್ರೇಕ್ ಮಾಡುವ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಸ್ಟಾರ್ ಆಗುವ ಭರವಸೆಯನ್ನ ಮೂಡಿಸಿದ್ದಾರೆ. ‘ಯುವ’ ಚಿತ್ರದ ಟೀಸರ್ ಬಗ್ಗೆ ನಿಮಗಿರುವ ಅನಿಸಿಕೆ – ಅಭಿಪ್ರಾಯಗಳನ್ನ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply