ಸದ್ದಿಲ್ಲದೇ ಇಷ್ಟೊಂದು ಶೂಟಿಂಗ್ ಆಗೋಯ್ತಾ.? D56 ನಲ್ಲಿ ಯಾವೆಲ್ಲಾ ಕಲಾವಿದರು ಇದ್ದಾರೆ ಗೊತ್ತಾ.? | D Boss Darshan

ಕನ್ನಡ ಚಿತ್ರರಂಗದಲ್ಲಿ ಬಾರಿ ಸದ್ದು ಮಾಡುತ್ತಿರುವ ಚಿತ್ರಗಳ ಪೈಕಿ ಡಿ56 ಚಿತ್ರ ಕೂಡ ಒಂದು. ಈ ಚಿತ್ರದ ಹೆಸರು ಡಿ56 ಅಲ್ಲ. ಬದಲಾಗಿ ದರ್ಶನ್ ಅವರ 56ನೇ ಚಿತ್ರ ಇದಾಗಿರುವುದರಿಂದಾಗಿ ಡಿ56 ಎಂದು ಕರೆಯುತ್ತಾ ಇದ್ದಾರೆ. ಈ ಚಿತ್ರದ ಟೈಟಲ್ ರಿವೀಲ್ ಆಗಿದೆ ಕಾಟೇರ ಅಂತ ಹೆಸರಿಡಲಾಗಿದೆ. ಈ ಸಿನಿಮಾದ ಬಗ್ಗೆ ಹೇಳುವುದಾದರೆ ರಾಬರ್ಟ್ ಸಿನಿಮಾದಲ್ಲಿ ಯಾರೆಲ್ಲ ಕಲಾವಿದರು ತಂತ್ರಜ್ಞರು ಇದ್ದರೋ ಬಹುತೇಕ ಅದೇ ತಂಡವನ್ನ ಇಟ್ಟುಕೊಂಡು ಈ ಸಿನಿಮಾವನ್ನ ನಿರ್ಮಾಣ ಮಾಡಲಾಗುತ್ತ ಇದೆ. ಈಗಾಗಲೇ 3ನೇ ಹಂತದ ಶೆಡ್ಯೂಲ್ ಶೂಟಿಂಗ್ ಮುಗಿದು ಹೋಗಿದೆ. ಅಷ್ಟೇ ಅಲ್ಲದೇ ಈ ವರ್ಷಾಂತ್ಯಕ್ಕೆ ಈ ಸಿನಿಮಾ ತೆರೆಗೆ ಬರುವುದು ಬಹುತೇಕ ಖಚಿತ ಅಂತ ಹೇಳಲಾಗುತ್ತಿದೆ.

ಇದನ್ನು ಕೂಡ ಓದಿ : ಬಾಕ್ಸ್ ಆಫೀಸ್ ಧೂಳೆಬ್ಬಿಸಿರುವ D-ಬಾಸ್ ಟಾಪ್ 10 ಸಿನಿಮಾಗಳು | Darshan Top Movies

darshan thoogudeepa kaatera movie release date

ಈ ಕಾಟೇರ ಚಿತ್ರದಲ್ಲಿ ಯಾರೆಲ್ಲಾ ಬಣ್ಣ ಹಚ್ಚಲಿದ್ದಾರೆ ಅಂತ ಹೇಳುವುದಾದರೆ, ರಾಧನ ರಾಮ್ ಈ ಚಿತ್ರದ ನಾಯಕ ನಟಿ, ಇವರು ಕನ್ನಡ ಖ್ಯಾತ ನಟಿ ಮಾಲಾಶ್ರೀ ಅವರ ಪುತ್ರಿ. ಇನ್ನುಳಿದ ಪಾತ್ರಗಳಲ್ಲಿ ರಾಬರ್ಟ್ ಚಿತ್ರದಲ್ಲಿ ನಾನ ಅನ್ನುವಂತಹ ಪಾತ್ರಕ್ಕೆ ಜೀವ ತುಂಬಿದಂತಹ ಜಗಪತಿ ಬಾಬು ಅವರು ಈ ಚಿತ್ರದಲ್ಲೂ ಕೂಡ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಶರಣ್ ಅವರು ಒಂದು ಪಾತ್ರಕ್ಕೆ ಜೀವ ತುಂಬಲಿದ್ದಾರೆ. ನಟ, ನಿರ್ದೇಶಕರಾದಂತಹ ಕುಮಾರ್ ಗೋವಿಂದ್ ಅವರು ಕೂಡ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದ ಮತ್ತೊಂದು ವಿಶೇಷತೆ ಏನೆಂದು ಹೇಳುವುದಾದರೆ ಶ್ರುತಿ ಅವರು ಕೂಡಾ ಈ ಚಿತ್ರದಲ್ಲಿ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಒಂದೇ ಚಿತ್ರದಲ್ಲಿ ಶ್ರುತಿ ಹಾಗು ಶರಣ್ ಅವರು ಅಭಿನಯಿಸಲಿದ್ದು, ಇದೇ ಮೊಟ್ಟಮೊದಲು. ಈ ಚಿತ್ರದ ಕತೆ ಬಗ್ಗೆ ಹೇಳುವುದಾದರೆ, ಇದು 70 ದಶಕದಲ್ಲಿ ಹಂಪಿಯಲ್ಲಿ ನಡೆದಂತಹ ನೈಜ ಘಟನೆ ಆಧಾರಿತ ಚಿತ್ರ. ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಅವರು ಆಕ್ಷನ್ ಕಟ್ ಹೇಳಲಿದ್ದಾರೆ. ಹಾಗೆಯೇ ರಾಕ್ ಲೈನ್ ವೆಂಕಟೇಶ್ ಅವರು ಈ ಚಿತ್ರಕ್ಕೆ ಬಂಡವಾಳವನ್ನ ಹೂಡಲಿದ್ದಾರೆ. ಹಾಗಾಗಿ ಈ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆಗಳಿವೆ. ಪೋಸ್ಟರ್ ಹೇಳುವಂತೆ ಇದೊಂದು ರಕ್ತಸಿಕ್ತ ಅಧ್ಯಾಯದ ಕಥಾಹಂದರವನ್ನ ಹೊಂದಿರುವಂತಹ ಸಿನಿಮಾ ಆಗಲಿದೆ ಎನ್ನುವುದು ಗ್ಯಾರಂಟಿ.

ಇದನ್ನೂ ಕೂಡ ಓದಿ : Darshan: ಹಣ ಕದ್ದು ಸಿಕ್ಕಿಬಿದ್ದ ನಟ ಡಿ ಬಾಸ್ ದರ್ಶನ್! ವಿಷಯ ತಿಳಿದು ಕಣ್ಣೀರಿಟ್ಟ ತಾಯಿ! ಆಗಿದ್ದೇನು ನೋಡಿ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply