Solar Eclipse : ಸೂರ್ಯಗ್ರಹಣ ಇಂದು 8 ಏಪ್ರಿಲ್ 2024 – ಸೂರ್ಯ ಗ್ರಹಣ ಸಂಪೂರ್ಣ ಮಾಹಿತಿ – ಗ್ರಹಣ ಸಮಯ

Solar Eclipse : ಸೂರ್ಯ ಗ್ರಹಣ ಎಂಬುದು ಭೂಗೋಳದಲ್ಲಿ ನಡೆಯುವಂತಹ ಒಂದು ನೈಸರ್ಗಿಕ ವಿದ್ಯಮಾನವಾಗಿದೆ. ಈ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ ಎಂಟರಂದು ಉಂಟಾಗಲಿದೆ. ಧಾರ್ಮಿಕ ದೃಷ್ಟಿಕೋನದಿಂದ ಯಾವುದೇ ಗ್ರಹಣವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಈ ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 25ಕ್ಕೆ ಉಂಟಾಗಿತ್ತು. ಅದಾಗಿ ಹದಿಮೂರನೇ ದಿನಕ್ಕೆ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಸೂರ್ಯಗ್ರಹಣದ ಸೂತಕ ಕಾಲ ಯಾವಾಗ.? ಭಾರತದಲ್ಲಿ ಈ ಸೂರ್ಯಗ್ರಹಣದ ಪ್ರಭಾವ ಹೇಗಿದೆ.? ವೈಜ್ಞಾನಿಕವಾಗಿ ನಡೆಯುವುದಾದರೆ ಗ್ರಹಣ ಬೀರುವ ಪ್ರಭಾವವೇನು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : Crop Insurance : ರೈತರ ಖಾತೆಗೆ ₹20,000 ಹಣ ಜಮಾ! ರೈತರ ಖಾತೆಗೆ ಹಿಂಗಾರು ಬೆಳೆ ವಿಮೆಯ ಹಣ ಜಮಾ.! ಹೀಗೆ ಚೆಕ್ ಮಾಡಿಕೊಳ್ಳಿ

WhatsApp Group Join Now
Telegram Group Join Now

2024 ರ ಮೊದಲ ಸೂರ್ಯಗ್ರಹಣ :- ವರ್ಷದ ಮೊದಲ ಸೂರ್ಯಗ್ರಹಣ ಸೋಮವಾರದಂದು ಅಂದ್ರೆ ಸೋಮಾವತಿ ಅಮವಾಸ್ಯೆಯಂದು ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಸೂರ್ಯಗ್ರಹಣವು ಏಪ್ರಿಲ್ 8 ರಂದು ರಾತ್ರಿ 9:12 ಕ್ಕೆ ಪ್ರಾರಂಭವಾಗುತ್ತದೆ. ಮತ್ತು ಏಪ್ರಿಲ್ 9 ರಂದು ಮುಂಜಾನೆ 2:22 ಕ್ಕೆ ಕೊನೆಗೊಳ್ಳುತ್ತದೆ.

ಈ ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರಿಸಲಿದೆ.? :- 2024 ರ ಮೊದಲ ಸೂರ್ಯಗ್ರಹಣವು ಕೆನಡಾ, ಮೆಕ್ಸಿಕೋ, ಯುನೈಟೆಡ್ ಸ್ಟೇಟ್ಸ್, ಬರ್ಮುಡಾ, ಕೆರಿಬಿಯನ್, ನೆದರ್ಲ್ಯಾಂಡ್, ಕೊಲಂಬಿಯಾ, ಕೋಸ್ಟರಿಕಾ, ಕ್ಯೂಬಾ, ಡೊಮಿನಿಕ, ಗ್ರೀನ್‌ಲ್ಯಾಂಡ್, ಐರ್ಲೆಂಡ್, ಐಸ್ಲ್ಯಾಂಡ್, ಜಮೈಕಾ ನಾರ್ವೇ. ಪನಾಮ, ನಿಕಾರಗುವ, ರಷ್ಯಾ, ಪೋರ್ಟರಿಕೋ ಮಾರ್ಟಿನ್, ಸ್ಪೇನ್, ಬಹಮಾಸ್, ಯುನೈಟೆಡ್ ಕಿಂಗ್‌ಡಂ ಮತ್ತು ವೆನಿಜುವೆಲ ಸೇರಿದಂತೆ ಹೀಗೆ ವಿವಿಧ ಭಾಗಗಳಲ್ಲಿ ಕಂಡು ಬರುವುದು. ಆದರೆ ಭಾರತದಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Govt Updates : ನೀವು ಕುರಿ, ಕೋಳಿ, ಹಸು ಹೊಂದಿದ್ದರೆ ನಿಮಗೆ ಸಿಗಲಿದೆ ₹40,000/- | ರೈತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.!

ವರ್ಷದ ಮೊದಲ ಸೂರ್ಯ ಗ್ರಹಣ ಭಾರತದಲ್ಲಿ ಗೋಚರಿಸುತ್ತದೆಯೇ.?

ಚಂದ್ರ ಗ್ರಹಣದಂತೆ ವರ್ಷದ ಮೊದಲ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಏಕೆಂದರೆ ಭಾರತದಲ್ಲಿ ಸಮಯ ರಾತ್ರಿ. ಹಾಗಾಗಿ ಈ ಗ್ರಹಣ ನಮಗೆ ಕಾಣಿಸುವುದಿಲ್ಲ. ಇದರ ಸೂತಕ ಅವಧಿಯು ಸೂರ್ಯಗ್ರಹಣಕ್ಕೆ 12 ಗಂಟೆಗಳ ಮೊದಲು ಪ್ರಾರಂಭವಾಗುವುದು. ನಂತರ ಗ್ರಹಣ ಮುಗಿದಾಗ ಮುಕ್ತಾಯವಾಗುವುದು. ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ಸೂತಕದ ಅವಧಿ ಭಾರತದಲ್ಲಿ ಮಾನ್ಯವಾಗಿರುವುದಿಲ್ಲ.

WhatsApp Group Join Now
Telegram Group Join Now

ಈ ಗ್ರಹಣದ ಪ್ರಭಾವ. ಭಾರತದ ಮೇಲೆ ಇರುವುದಿಲ್ಲ. ಹಾಗಾಗಿ ಗ್ರಹಣದ ಸಮಯದಲ್ಲಿ ಯಾವುದೇ ನಿಯಮ ಪಾಲಿಸಬೇಕಾಗಿಲ್ಲ. ಆದರೆ ಗ್ರಹಣದ ಸೂತಕದ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡಿದರೆ ಒಳ್ಳೆಯದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply