Rachitha Ram : ಈ ಒಂದು ಕಾರಣಕ್ಕೆ ರಚಿತಾ ರಾಮ್ ಇನ್ನು ಮದುವೆನೇ ಆಗಿಲ್ಲ.! ಅಷ್ಟಕ್ಕೂ ಕಾರಣ ಏನು ಗೊತ್ತಾ.?

Rachitha Ram : ರಚಿತಾ ರಾಮ್ ಚಿತ್ರರಂಗದ ಹೆಸರಾಂತ ನಟಿ. ಇವರು ಅಕ್ಟೋಬರ್ 3, 1992 ರಲ್ಲಿ ಜನಿಸಿದರು. ಇವರ ನಿಜವಾದ ಹೆಸರು ಬಿಂದಿಯಾ ರಾಮ್ . ಚಿತ್ರರಂಗದಲ್ಲಿ ರಚಿತಾ ರಾಮ್ ಎಂಬ ಹೆಸರಿನಿಂದ ಜನಪ್ರಿಯರಾದರು. ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದು ಹೆಸರಾಗಿದ್ದ ರಚಿತಾ ರಾಮ್.

Whatsapp Group Join
Telegram channel Join

ಇದನ್ನೂ ಕೂಡ ಓದಿ : ಪತ್ನಿ ವಿಜಯಲಕ್ಷ್ಮಿ ಜೊತೆ ಜಾಲಿ ಟ್ರಿಪ್ ಹೊರಟ ಡಿ ಬಾಸ್ ದರ್ಶನ್! ಎಲ್ಲಿಗೆ ಗೊತ್ತಾ.? | D Boss Darshan | Vijayalakshmi #Darshan

ಕನ್ನಡ ಕಿರುತೆರೆ ಯಲ್ಲಿ ಅರಸಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅರಸಿ‌‌ ಧಾರಾವಾಹಿಯಲ್ಲಿ‌ ಇವರ ಅಭಿನಯವನ್ನು ನೋಡಿ ದರ್ಶನ್ ಅಭಿನಯದ ಬುಲ್ ಬುಲ್ ಸಿನಿಮಾಕ್ಕೆ ಆಯ್ಕೆ ಮಾಡಲಾಯಿತು. ಮೊದಲಿಗೆ ಅವರು ಯಶಸ್ಸು ಕಂಡ ಚಿತ್ರ ಬುಲ್ ಬುಲ್ ಸಿನಿಮಾವಾಗಿತ್ತು‌. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ನಂಬರ್‌ ಒನ್‌ ನಟಿಯಾಗಿ ಮಿಂಚುತ್ತಿರುವ ರಚಿತಾ ರಾಮ್ ಅವರು, ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ‌ ಅಭಿನಯಿಸಿದ್ದಾರೆ.

Whatsapp Group Join
Telegram channel Join
rachitha ram

ಮೂಲತಃ ಚಿಕ್ಕಮಗಳೂರಿನವರಾದ ರಚಿತಾ ರಾಮ್ ಅವರು ಸದ್ಯಕ್ಕೆ ತಮ್ಮ ಇಡೀ ಕುಟುಂಬದ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸದ್ಯಕ್ಕೆ ರಚಿತಾ ರಾಮ್ ಅವರ ಕೈಯಲ್ಲಿ ಸುಮಾರು ಏಳೆಂಟು ಚಿತ್ರಗಳು ಇವೆ‌.

ಇದನ್ನೂ ಕೂಡ ಓದಿ : ಬಾಕ್ಸ್ ಆಫೀಸ್ ಧೂಳೆಬ್ಬಿಸಿರುವ D-ಬಾಸ್ ಟಾಪ್ 10 ಸಿನಿಮಾಗಳು | Darshan Top Movies

ಇತ್ತೀಚೆಗಷ್ಟೇ ರಚಿತಾ ಇಂಡಸ್ಟ್ರಿಯಲ್ಲಿ ದಶಕ ಪೂರೈಸಿದ್ದು, ಈ ಮೈಲಿಗಲ್ಲಿಗೆ ಅವರ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ರಚಿತಾ ರಾಮ್ ಮದುವೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನನಗೆ ಸರಿಯಾದ ಹುಡುಗ ಸಿಗುವವರೆಗೂ ಮದುವೆಯಾಗುವುದಿಲ್ಲ, ಚಿತ್ರರಂಗದಲ್ಲಿ ಇನ್ನೂ ಸಾಕಷ್ಟು ಸಾಧನೆ ಮಾಡಬೇಕಿದ್ದು, ಆ ನಂತರವೇ ಮದುವೆಯ ಬಗ್ಗೆ ಯೋಚಿಸುತ್ತೇನೆ ಎಂದಿದ್ದಾಳೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply