Pension Scheme : ಎಲ್ಲಾ ಪಿಂಚಣಿದಾರರಿಗೆ ಬಿಗ್ ಶಾಕ್! ಜೂನ್ 20 ರೊಳಗೆ ಈ ಕೆಲಸ ಮಾಡಲೇಬೇಕು!

Pension Scheme : ನಮಸ್ಕಾರ ಸ್ನೇಹಿತರೇ, ವೃದ್ಯಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲರ ವೇತನ, ಮನಸ್ವಿನಿ, ಮೈತ್ರಿ, ಆಸಿಡ್ ದಾಳಿಗೊಳಗಾದ ಮಹಿಳೆಗೆ ಪಿಂಚಣಿ, ರೈತ ವಿಧವಾ ವೇತನ ಯೋಜನೆಗಳ ಫಲಾನುಭವಿಗಳಾಗಿದ್ದು, ಪಿಂಚಣಿ ಯೋಜನೆಗೂ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಎರಡೆರಡು ಪಿಂಚಣಿ ಪಾವತಿ ಮಾಡಲಾಗುತ್ತಿದೆ ಎನ್ನುವುದು ಇದೀಗ ಬಹಿರಂಗವಾಗಿದೆ.

Whatsapp Group Join
Telegram channel Join

ಮಾಸಿಕ ಪಿಂಚಣಿ ಯೋಜನೆಗಳನ್ನ ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಬೇಕು ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರವನ್ನ ಬರೆದಿದೆ. ರಾಜ್ಯದಲ್ಲಿ 39,689 ನಕಲಿ ಆಧಾರ್ ಪ್ರಕರಣಗಳಿವೆ. ಈ ಪ್ರಕರಣಗಳ ಸಂಬಂಧ ಜಿಲ್ಲೆಗಳಲ್ಲಿ ಪರಿಶೀಲಿಸಿ, ಒಬ್ಬ ಫಲಾನುಭವಿ ಎರಡೆರಡು ಪಿಂಚಣಿ ಪಡೆಯುತ್ತಿದ್ದಲ್ಲಿ, ಸರಿಯಾದ ಮಾಹಿತಿಯುಳ್ಳ ಪ್ರಕರಣವನ್ನ ಉಳಿಸಿಕೊಂಡು ಇನ್ನೊಂದು ಪ್ರಕರಣವನ್ನ ರದ್ದು ಪಡಿಸಬೇಕು. ಒಂದೇ ಆಧಾರ್ ಸಂಖ್ಯೆಯನ್ನು ಒಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಫಲಾನುಭವಿಗಳಿಗೆ ಜೋಡಣೆಯಾಗಿದ್ದಲ್ಲಿ, ಅಂತಹ ಪ್ರಕರಣಗಳಲ್ಲಿ ಫಲಾನುಭವಿಗಳ ಸರಿಯಾದ ಮಾಹಿತಿಯನ್ನ ಸಂಗ್ರಹಿಸಿ, ಸರಿಯಾದ ಆಧಾರ್ ಮಾಹಿತಿಯನ್ನ ಫಲಾನುಭವಿಗೆ ಜೋಡಣೆ ಮಾಡಬೇಕು ಎಂದು ನಿರ್ದೇಶಿಸಿದೆ.

ಇದನ್ನೂ ಕೂಡ ಓದಿ : Govt Scheme : ಈ ಪ್ಲಾನ್ ಮಾಡಿದ್ರೆ ಅತ್ತೆಗೂ 2,000 ಹಾಗೂ ಸೊಸೆಗೂ 2,000 ರೂ. ಸಿಗುತ್ತೆ! ಏನಿದು ಪ್ಲಾನ್?

Whatsapp Group Join
Telegram channel Join

ಸರ್ಕಾರದ ವೃದ್ಯಾಪ್ಯ, ಅಂಗವಿಕಲ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಸೇರಿದಂತೆ ಇತರೆ ಮಾಸಿಕ ಪಿಂಚಣಿ ಪಡೆಯುವವರು, ಜೂನ್ 20 ರೊಳಗೆ ಪಿಂಚಣಿ ಜಮಾ ಆಗುವ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೋಗಿ, ತಪ್ಪದೇ ಆಧಾರ್ ನಂಬರ್ ಲಿಂಕ್ ಮಾಡಿಸಬೇಕು. ಕೆಲ ತಾಂತ್ರಿಕ ಕಾರಣದಿಂದ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರುವುದಿಲ್ಲ. ಅಂತಹ ಲಿಂಕ್ ಆಗಿರದ ಫಲಾನುಭವಿಗಳ ಪಟ್ಟಿ, ಅಂಚೆ ಕಚೇರಿ ಹಾಗು ಗ್ರಾಮದ ಆಡಳಿತಾಧಿಕಾರಿ ಬಳಿ ಸಿಗುತ್ತದೆ. ಬ್ಯಾಂಕ್ ಖಾತೆಗೆ NPCI ಗೆ ಆಧಾರ್ ನಂಬರ್ ಲಿಂಕ್ ಆಗಿಲ್ಲ. ಆಧಾರ್ ನಂಬರ್ ಚಾಲ್ತಿಯಲ್ಲಿಲ್ಲ ಎನ್ನುವ ಮೂರು ರೀತಿಯ ಪಟ್ಟಿ ಇರುತ್ತದೆ. ಕೂಡಲೇ ಆಧಾರ್ ಲಿಂಕ್ ಮಾಡಿಸಬೇಕು. ತಪ್ಪಿದಲ್ಲಿ, ಸರ್ಕಾರದಿಂದ ಬರುವ ಪಿಂಚಣಿ ಪಡೆದುಕೊಳ್ಳಲು ತೊಂದರೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..