Drought Relief : ಬರಪೀಡಿತ ಜಿಲ್ಲೆಗಳ ರೈತರಿಗೆ – ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ – ₹6000 ಹಣ ಖಾತೆಗೆ ಜಮೆ.!

Drought Relief : ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ರೈತರಿಗೆ ಗುಡ್ ನ್ಯೂಸ್.! ಈಗಾಗಲೇ ರಾಜ್ಯ ಸರ್ಕಾರದಿಂದ ಮೊದಲ ಕಂತಿನ ಬರ ಪರಿಹಾರ ಹಣ ₹2000 ಮಾತ್ರ ರಾಜ್ಯ ಸರ್ಕಾರದಿಂದ ಹಾಕಲಾಗಿತ್ತು. ಆದರೆ ಮತ್ತೊಮ್ಮೆ ರಾಜ್ಯ ಸರ್ಕಾರದಿಂದ 628 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿ ರಾಜ್ಯದ ಎಲ್ಲ ಬರ ಪೀಡಿತ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡಿ ರಾಜ್ಯ ಸರ್ಕಾರದಿಂದ ಎಲ್ಲ ಬರ ಪೀಡಿತರಿಗೆ ಗುಡ್ ನ್ಯೂಸ್ ನೀಡಿದೆ.

ಬರ ಪೀಡಿತ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಬರುವ ರೈತರು ರಾಜ್ಯ ಸರ್ಕಾರದಿಂದ ಎರಡನೇ ಕಂತಿನ ಬರ ಪರಿಹಾರ ಹಣವನ್ನ ಪಡೆದುಕೊಳ್ಳಬಹುದು. ಇನ್ನು ಕೂಡ ನಿಮ್ಮ ಖಾತೆಗೆ ಎರಡನೇ ಕಂತಿನ ರಾಜ್ಯ ಸರ್ಕಾರದ ಹಣ ವರ್ಗಾವಣೆ ಆಗಿಲ್ಲ ಅಂದ್ರೆ ತಪ್ಪದೆ ಈ ಲೇಖನವನ್ನ ಕೊನೆವರೆಗೂ ನೋಡಿ.

ಇದನ್ನೂ ಕೂಡ ಓದಿ : Crop Compensation : ರೈತರ ಬೆಳೆಹಾನಿ, ಬೆಳೆ ಪರಿಹಾರ ಹಣ ಜಮಾ – ನಿಮ್ಮ ಕೃಪೆಗೆ ಹಣ ಬಾರದಿದ್ದರೆ ಹೀಗೆ ಮಾಡಿ ಪಡೆಯಿರಿ! ರೈತರಿಗೆ ಸಿಹಿಸುದ್ದಿ

ಬರದಿಂದ ತತ್ತರಿಸಿರುವ ರಾಜ್ಯದ ರೈತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, 628 ಕೋಟಿ ರೂಪಾಯಿ ಹಣವನ್ನ ಬರ ಪರಿಹಾರವಾಗಿ ನೇರವಾಗಿ 33 ಲಕ್ಷ ರೈತರ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವರು, ಬರ ನಿರ್ವಹಣೆಗೆ ಪರಿಹಾರ ಕ್ರಮವಾಗಿ 2000 ಕೋಟಿ ರೂಪಾಯಿ ಅನುದಾನವನ್ನು ನಿಗದಿಪಡಿಸಿದ್ದು, ಈಗಾಗಲೇ 33 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನ ಬಿಡುಗಡೆ ಮಾಡಲಾಗಿದೆ.

1.6 ಲಕ್ಷ ರೈತರ ಬ್ಯಾಂಕ್ ಖಾತೆಗೆ ಮಾರ್ಪಾಡು ಪ್ರಕ್ರಿಯೆ ನಡೀತಾಇದ್ದು, ಇದು ಸರಿಯಾದ ಕೂಡಲೇ ಅವರ ಖಾತೆಗೆ ಹಣ ಜಮೆ ಆಗಲಿದೆ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರವು ರಾಜ್ಯದ 223 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಕುಡಿಯುವ ನೀರು, ಮೇವು ಹಾಗೂ ಇತರೆ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಗಳ ಖಾತೆಗಳಿಗೆ 870 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಇದನ್ನೂ ಕೂಡ ಓದಿ : ಪ್ಯಾನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್.! 10ಸಾವಿರ ದಂಡ ಫಿಕ್ಸ್.! ಈ ಕೆಲಸ ಕಡ್ಡಾಯ – ರಾತ್ರೋರಾತ್ರಿ ಹೊಸ ರೂಲ್ಸ್.!

ಅರ್ಹ ರೈತರಿಗೆ ಬರ ಪರಿಹಾರ ತಲುಪಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ರೈತರ ಹೆಸರು ಪ್ರಕಟಣೆ ಮಾಡಲಾಗಿದೆ. ಆ ಪಟ್ಟಿಯಲ್ಲಿ ರೈತರ ಹೆಸರು ಬಿಟ್ಟು ಹೋಗಿದ್ದಲ್ಲಿ, ಅಂತಹ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸ್ಥಳೀಯ ಕಂದಾಯ ಇಲಾಖೆ ಕಛೇರಿಗೆ ಭೇಟಿ ನೀಡಿ, ಹೆಸರು ಸೇರ್ಪಡೆಗೊಳಿಸಬೇಕು ಎಂದು ಮನವಿ ಕೂಡ ಮಾಡಿದ್ದಾರೆ.

ಇಷ್ಟಕ್ಕೂ ನಿಮ್ಮ ಬ್ಯಾಂಕ್ ಖಾತೆಗೆ ರಾಜ್ಯ ಸರ್ಕಾರದಿಂದ ಹಣವನ್ನ ಇನ್ನೂ ಕೂಡ ಮೊದಲನೇ ಕಂತಿನ ₹2,000 ಹಾಗು ಎರಡನೇ ಕಂತಿನ ಹಣ ಕೂಡ ಬಂದಿಲ್ಲ ಅಂದರೆ, ಈ ಕೂಡಲೇ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಗೆ ಯಾವ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿದೆ ಎಂದು ಪರಿಶೀಲಿಸಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ನ್ನ ಲಿಂಕ್ ಮಾಡಿಸಿಕೊಳ್ಳಿ. ಹಾಗು ಈ-ಕೆವೈಸಿ ಮಾಡಿಸಿಕೊಳ್ಳಿ. ಮುಂದಿನ ಮೂರು ದಿನದ ಒಳಗಾಗಿ ಈ ಕೆಲಸವನ್ನ ಮಾಡಿಸಿಕೊಳ್ಳಿ ಹಾಗು ಮುಂದಿನ ಮೂರು ಕೆಲಸದ ದಿನಗಳಲ್ಲಿ ಹಣ ವರ್ಗಾವಣೆಯಾಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply