Crop Compensation : ರೈತರ ಬೆಳೆಹಾನಿ, ಬೆಳೆ ಪರಿಹಾರ ಹಣ ಜಮಾ – ನಿಮ್ಮ ಕೃಪೆಗೆ ಹಣ ಬಾರದಿದ್ದರೆ ಹೀಗೆ ಮಾಡಿ ಪಡೆಯಿರಿ! ರೈತರಿಗೆ ಸಿಹಿಸುದ್ದಿ

Crop Compensation : 2023ನೇ ಸಾಲಿನ ಮುಂಗಾರು ಹಂಗಾಮಿನ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರಿಗೆ ಬೆಳೆ ಹಾನಿ ಪರಿಹಾರದ ಮೊದಲನೆಯ ಕಂತಿನ ಹಣವನ್ನ ಈಗಾಗಲೇ ಹಲವು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಹೌದು, ಎಸ್‌ಡಿಆರ್‌ಎಫ್(SDRF) ಹಾಗೂ ಎನ್‌ಡಿಆರ್‌ಎಫ್(NDRF) ಮಾರ್ಗಸೂಚಿಯಂತೆ ಬೆಳೆ ಹಾನಿ ಪರಿಹಾರದ ಮೊತ್ತ ಮೊದಲ ಕಂತಿನ ಹಣ 2000 ರೂಪಾಯಿ ಹಣವನ್ನ ಎಲ್ಲ ರೈತರ ಬ್ಯಾಂಕ್ ಖಾತೆಗೆ ಈಗಾಗಲೇ ರಾಜ್ಯ ಸರಕಾರ ಪಾವತಿ ಮಾಡಿದೆ.

ಇದನ್ನೂ ಕೂಡ ಓದಿ : Aadhar Card Updates : ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್ – ಮಾರ್ಚ್ 14ರ ಒಳಗಾಗಿ ಈ ಕೆಲಸ ಕಡ್ಡಾಯ – ಇಲ್ಲಾಂದ್ರೆ ಆಧಾರ್ ಕಾರ್ಡ್ ಬಂದ್!

ಆದರೆ, ಇನ್ನು ಹಲವು ರೈತರ ಅಕೌಂಟ್ ಗೆ ಬೆಳೆ ಪರಿಹಾರ ಮೊದಲ ಕಂತಿನ ಹಣ ಜಮಾವಣೆ ಆಗಿಲ್ಲ. ಹೀಗಾಗಿ ರೈತರು ಈ ಚಿಕ್ಕ ಕೆಲಸ ಮಾಡಿದರೆ ನಿಮ್ಮ ಖಾತೆಗೂ ಬೆಳೆ ಪರಿಹಾರ, ಸಹಾಯಧನ ಕಂತುಗಳು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಜಮಾ ಆಗಲಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರದ ಅನುದಾನದ ಅಡಿಯಲ್ಲಿ ಬೆಳೆ ಪರಿಹಾರದ ಹಣವನ್ನ ಹಂತ ಹಂತವಾಗಿ ಕಂತುಗಳ ಮೂಲಕ ಜಮಾ ಮಾಡಲಾಗುತ್ತದೆ.

ನಿಮ್ಮ ಖಾತೆಗೂ ಬೆಳೆ ಪರಿಹಾರದ ಹಣ ಜಮಾ ಆಗಿಲ್ವ. ಹಾಗಾದ್ರೆ ನೀವು ಈ ಕೆಲಸ ಮಾಡಿ. ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇಲೆ ಎಲ್ಲಾ ರೈತರು ಫ್ರೂಟ್ಸ್ ಐಡಿಯನ್ನು ಹೊಂದಿರಲೇಬೇಕು. ಫ್ರೂಟ್ಸ್ ಐಡಿಯೊಂದಿಗೆ ನಿಮ್ಮ ಜಮೀನಿನ ಹೊಲದ ಪಹಣಿ ಜೋಡಣೆ ಆಗಿರಬೇಕು. ಅಂತಹ ರೈತರಿಗೆ ಮಾತ್ರ ಈ ಬೆಳೆ ಪರಿಹಾರ, ಹಣ, ಸಹಾಯಧನ ವರ್ಗಾವಣೆ ಆಗುತ್ತಿದೆ.

ಇದನ್ನೂ ಕೂಡ ಓದಿ : LPG Cylinder : ಪ್ರತಿ ತಿಂಗಳು ಎಲ್ಪಿಜಿ ಗ್ಯಾಸ್ ತುಂಬಿಸಿಕೊಳ್ಳುವ ಗ್ರಾಹಕರಿಗೆ – ಇನ್ನು ಮುಂದೆ ಸಬ್ಸಿಡಿ ಬಂದ್.! ಈ ಕೆಲಸ ಕಡ್ಡಾಯ.!

ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು ಫ್ರೂಟ್ಸ್ ಐಡಿಗೆ ಪಹಣಿ ಜೋಡಣೆ ಆಗಿರುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ನೀವು ಒಮ್ಮೆ ಫ್ರೂಟ್ಸ್ ಐಡಿ ನಿಮ್ಮ ಪಹಣೆಗೆ ಲಿಂಕ್ ಇದೆಯಾ ಅಥವಾ ಇಲ್ವಾ? ಎಂದು ಇಲ್ಲಿ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನ ನಮೂದಿಸಿ ಖಚಿತಪಡಿಸಿಕೊಳ್ಳಿ.

ಫ್ರೂಟ್ಸ್ ಐಡಿ ಇಲ್ಲಿ ಚೆಕ್ ಮಾಡಿ : ಫ್ರೂಟ್ಸ್ ಪಿಎಂ ಕಿಸಾನ್(FRUITS PM KISAN )

ಇನ್ನು ಒಂದು ವೇಳೆ ನಿಮ್ಮ ಪಹಣಿಯ ಜೊತೆಗೆ ಫ್ರೂಟ್ಸ್ ಐಡಿ ಲಿಂಕ್ ಇಲ್ಲದೇ ಇದ್ದರೆ, ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಆಡಳಿತ ಅಧಿಕಾರಿ ಅಥವಾ ಕೃಷಿ ಇಲಾಖೆಗೆ ಇಂದೇ ಭೇಟಿ ನೀಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply