Lunar Eclipse : ಚಂದ್ರಗ್ರಹಣ 2024 ಇದೇ ಹುಣ್ಣಿಮೆ – ಈ ವರ್ಷದ ಮೊದಲ ಚಂದ್ರ ಗ್ರಹಣ – ಕರ್ನಾಟಕದಲ್ಲಿ ಗ್ರಹಣದ ಸಮಯ.!

Lunar Eclipse : ಈ 2024 ರ ಮೊದಲ ಚಂದ್ರಗ್ರಹಣವು ಈ ದಿನಾಂಕದಂದು ಸಂಭವಿಸುತ್ತಿದೆ. ನಮ್ಮ ಭಾರತದಲ್ಲಿ ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಈ ಜಿಲ್ಲೆಗಳಲ್ಲಿ ಈ ಚಂದ್ರಗ್ರಹಣವು ಗೋಚರಿಸುತ್ತೆ. ನಮ್ಮ ಭಾರತೀಯ ಹಿಂದೂ ಸನಾತನ ಧರ್ಮ ಗ್ರಂಥಗಳ ಪ್ರಕಾರ, ಗ್ರಹಣಕ್ಕೆ ತನ್ನದೇ ಆದ ವಿಶೇಷವಾದ ಸ್ಥಾನವಿದೆ. ಗ್ರಹಣವು ಕೇವಲ ಭೌತಿಕ ಹಾಗು ವಿಸ್ಮಯಕಾರಿ ಕೌತುಕವಲ್ಲ.

ಗ್ರಹಣಗಳಿಂದಾಗಿ ರಾಶಿಚಕ್ರಗಳ ಮೇಲೆ ಬಹಳಷ್ಟು ಪ್ರಭಾವ ಉಂಟು ಮಾಡುತ್ತವೆ. ಗ್ರಹಣದ ಪ್ರಭಾವದಿಂದಾಗಿ ಕೆಲವು ರಾಶಿಗಳ ಜೀವನವೇ ಬದಲಾಗಿ ಅದೃಷ್ಟ ಉಂಟಾಗುತ್ತದೆ. ಈ 2024 ರಲ್ಲಿ ನಡೆಯುತ್ತಿರುವ ಮೊದಲ ಚಂದ್ರಗ್ರಹಣವು ಯಾವಾಗ ನಡೆಯುತ್ತೆ.? ಎಲ್ಲೆಲ್ಲಿ ಗೋಚರವಾಗುತ್ತೆ.? ಗ್ರಹಣದ ಸಮಯ ಯಾವುದು.? ಎನ್ನುವ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ.

WhatsApp Group Join Now
Telegram Group Join Now

ಇದನ್ನು ಕೂಡ ಓದಿ : Drought Relief : ಬರಪೀಡಿತ ಜಿಲ್ಲೆಗಳ ರೈತರಿಗೆ – ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ – ₹6000 ಹಣ ಖಾತೆಗೆ ಜಮೆ.!

2024 ರಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿವೆ. ಅವುಗಳಲ್ಲಿ ಎರಡು ಚಂದ್ರ ಗ್ರಹಣಗಳು ಮತ್ತು ಎರಡು ಸೂರ್ಯಗ್ರಹಣಗಳು. ಪಂಚಾಂಗದ ಪ್ರಕಾರ ಪಾಲ್ಗುಣ ತಿಂಗಳ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಅಂದರೆ 2024 ಮಾರ್ಚ್ 25 ಸೋಮವಾರ ಚಂದ್ರ ಗ್ರಹಣ ಸಂಭವಿಸಲಿದೆ. ಈ ಚಂದ್ರಗ್ರಹಣವು ಕನ್ಯಾ ರಾಶಿಯಲ್ಲಿ ಸಂಭವಿಸಲಿದೆ.

WhatsApp Group Join Now
Telegram Group Join Now

ವರ್ಷದ ಮೊದಲ ಚಂದ್ರಗ್ರಹಣವು ಬೆಳಿಗ್ಗೆ 10:23 ರಿಂದ ಪ್ರಾರಂಭವಾಗತ್ತದೆ. ಮತ್ತು ಮಧ್ಯಾಹ್ನ 3:02 ರ ವರೆಗೆ ಇರುತ್ತದೆ. ಅದಾಗಿಯೂ ಈ ಚಂದ್ರ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಈ ಕಾರಣದಿಂದಾಗಿ ಅದರ ಸೂತಕದ ಅವಧಿಯು ಇಲ್ಲಿ ಮಾನ್ಯವಾಗಿರುವುದಿಲ್ಲ. ವರ್ಷದ ಮೊದಲ ಚಂದ್ರಗ್ರಹಣ ಹಾಗಾದ್ರೆ ಎಲ್ಲಿ ಗೋಚರಿಸುತ್ತೆ ಅನ್ನೋದನ್ನ ನೋಡುವುದಾದರೆ ಅಮೆರಿಕ, ಜಪಾನ್, ರಷ್ಯಾ, ಐರ್ಲೆಂಡ್, ಇಂಗ್ಲೆಂಡ್, ಸ್ಪೇನ್, ಪೋರ್ಚುಗಲ್, ಇಟಲಿ, ಜರ್ಮನಿ, ಫ್ರಾನ್ಸ್, ಹಾಲೆಂಡ್, ಬೆಲ್ಜಿಯಂ, ದಕ್ಷಿಣ ನಾರ್ವೆ ಮತ್ತು ಸ್ವಿಝರ್ ಲ್ಯಾಂಡ್ ನಲ್ಲಿ ಈ ಚಂದ್ರ ಗ್ರಹಣ ಗೋಚರಿಸಲಿದೆ.

ಇದನ್ನು ಕೂಡ ಓದಿ : Gruhalakshmi Payment : ಗೃಹಲಕ್ಷ್ಮಿ ಇನ್ನು ಮುಂದೆ ಪ್ರತಿ ತಿಂಗಳಿಗೆ ₹4000 – ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್

WhatsApp Group Join Now
Telegram Group Join Now

ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಈಗಾಗಲೇ ಹೇಳಿರುವಂತೆ 2024 ರಲ್ಲಿ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಮೊದಲ ಚಂದ್ರ ಗ್ರಹಣ ಮಾರ್ಚ್ 25 ರ ಸೋಮವಾರ ಸಂಭವಿಸಲಿದೆ. ಎರಡನೇ ಚಂದ್ರ ಗ್ರಹಣ ಸೆಪ್ಟೆಂಬರ್ 18 ರ ಬುಧವಾರ ಸಂಭವಿಸಲಿದ್ದು, ಮೊದಲ ಸೂರ್ಯ ಗ್ರಹಣವು ಏಪ್ರಿಲ್ 8 ರ ಸೋಮವಾರ ಸಂಭವಿಸಲಿದ್ದು, ಎರಡನೇ ಸೂರ್ಯ ಗ್ರಹಣವು ಅಕ್ಟೋಬರ್ 2 ರ ಬುಧವಾರ ಸಂಭವಿಸಲಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply