Bigg Boss Kannada : ಕಿಚ್ಚನ ಬೆಂಬಲ ಸಿಗುತ್ತಿದ್ದಂತೆ ಹೊಸ ಹುಮ್ಮಸ್ಸಿನಲ್ಲಿ ಡ್ರೋನ್ ಪ್ರತಾಪ್ / ಸಹಸ್ಪರ್ಧಿಗಳು ಶಾಕ್.!

Bigg Boss Kannada : ಕಿಚ್ಚ ಸುದೀಪ್(Kiccha Sudeep) ನಡೆಸಿಕೊಡುವ ಬಿಗ್ ಬಾಸ್ ಕನ್ನಡ ಸೀಸನ್ ೧೦ ರ ವಾರದ ಕಥೆ ಕಿಚ್ಚನ ಜೊತೆ ವೀಕೆಂಡ್ ಪಂಚಾಯಿತಿಯಲ್ಲಿ ಸುದೀಪ್ ಅವರು ಬಿಗ್ ಬಾಸ್ ಸ್ಪರ್ಧಿಗಳಿಗೆ ಚಳಿ ಬಿಡಿಸಿದ್ದಾರೆ. ಡ್ರೋನ್ ಪ್ರತಾಪ್(Drone Pratap) ಅವರನ್ನು ಹೀಯಾಳಿಸಿದವರಿಗೆ ಸುದೀಪ್ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಿಚ್ಚನ ಸಪೋರ್ಟ್ ಸಿಗುತ್ತಿದ್ದಂತೆ ಪ್ರತಾಪ್ ಭಾರೀ ಖುಷಿಯಲ್ಲಿದ್ದಾರೆ.

Whatsapp Group Join
Telegram channel Join

ಪ್ರತಾಪ್ ನನ್ನ ಹೀಯಾಳಿಸಿದ್ದ ಸಹ ಸ್ಪರ್ಧಿ ತುಕಾಲಿ ಸಂತುವಿಗೆ ಕಿಚ್ಚ ಸುದೀಪ್ ಖಡಕ್ ಕ್ಲಾಸ್ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಮನೆಯಲ್ಲಿ ಅತೀ ಹೆಚ್ಚು ಟಾರ್ಗೆಟ್ ಆಗಿದ್ದರು. ಇದರ ನಂತರ ಕಿಚ್ಚನ ಬೆಂಬಲ ಸಿಗುತ್ತಿದ್ದಂತೆ ಡ್ರೋನ್ ಪ್ರತಾಪ್ ಅವರಿಗೆ ಹೊಸ ಜೋಶ್ ಶುರುವಾಗಿದೆ. ದೊಡ್ಮನೆ ಸಹಸ್ಪರ್ಧಿಗಳು ಪ್ರತಾಪ್ ನಡೆಯಲ್ಲಿ ಆಗಿರುವ ಬದಲಾವಣೆ ಕಂಡು ಶಾಕ್ ಆಗಿದ್ದಾರೆ.

ಇದನ್ನೂ ಕೂಡ ಓದಿ : Bigg Boss Kannada : ಪ್ರತಾಪ್, ನಿನ್ನ ರೆಕ್ಕೆ-ಪುಕ್ಕ ಕಿತ್ತು ಹಾಕ್ತಿನಿ ಎಂದ ವಿನಯ್ ಗೆ ಡ್ರೋನ್ ಪ್ರತಾಪ್ ಕೊಟ್ಟ ತಿರುಗೇಟು ಏನು ನೋಡಿ.!

Whatsapp Group Join
Telegram channel Join

ಚಾರ್ಲಿ ನಟಿ ಸಂಗೀತಾ ಹಾಗು ತನಿಷಾ ಜೊತೆ ‘ಸೂಪರ್ ಸಂಡೇ ವಿಥ್ ಸುದೀಪ್’ ಕಾರ್ಯಕ್ರಮದಲ್ಲಿ ದ್ರನೇ ಪ್ರತಾಪ್ ಅವರು ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಪ್ರತಾಪ್ ಸಹಸ್ಪರ್ಧಿಗಳು ಕೂಡ ಪ್ರತಾಪ್ ಅವರ ಜೋಶ್ ಕಂಡು ನಕ್ಕಿದ್ದಾರೆ. ಸುದೀಪ್ ಅವರು, ತುಕಾಲಿ ಸಂತು ಅವರೇ, ಡ್ರೋನ್ ಪ್ರತಾಪ್ ಗೆ ಓಪನ್ ಅಪ್ ಆಗಿ ಅಂತ ಹೇಳ್ತಿದ್ರಿ, ಓಪನ್ ಅಪ್ ಆಗುವುದು ಹೀಗೆ ಎಂದು ತುಕಾಲಿ ಸಂತು ಅವರ ಕಾಲೆಳೆದಿದ್ದಾರೆ.

ಡ್ರೋನ್ ಪ್ರತಾಪ್ ಅವರ ಹಿಂದಿನ ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಾಪ್ ಅವರು ಟೀಕೆಗೆ ಗುರಿಯಾಗಿದ್ದರ ಬಗ್ಗೆ ತುಕಾಲಿ ಸಂತು, ವಿನಯ್, ಸ್ನೇಹಿತ್ ಹಾಗು ವರ್ತೂರ್ ಸಂತೋಷ್ ಅವರು ಹೀಯಾಳಿಸಿ ತಿವಿದಿದ್ದರು. ಈ ವಿಚಾರಕ್ಕೆ ನೊಂದ ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply