Bigg Boss Kannada : ಪ್ರತಾಪ್, ನಿನ್ನ ರೆಕ್ಕೆ-ಪುಕ್ಕ ಕಿತ್ತು ಹಾಕ್ತಿನಿ ಎಂದ ವಿನಯ್ ಗೆ ಡ್ರೋನ್ ಪ್ರತಾಪ್ ಕೊಟ್ಟ ತಿರುಗೇಟು ಏನು ನೋಡಿ.!

Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಅವರನ್ನು ವಿನಯ್ ಟಾರ್ಗೆಟ್ ಮಾಡಿದ್ದಾರಾ.? ಹೀಗೊಂದು ಪ್ರಶ್ನೆ ವೀಕ್ಷಕರ ವಲಯದಲ್ಲಿ ಮೂಡುವಂತಾಗಿದೆ, ಹೌದು, ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಟಾರ್ಗೆಟ್ ಆಗುತ್ತಿರುವುದು ಹೊಸದೇನೂ ಅಲ್ಲ. ಈ ಮೊದಲು ಸ್ನೇಹಿತ್ ಗೌಡ ಹಾಗು ತುಕಾಲಿ ಸಂತೋಷ್, ಪ್ರತಾಪ್ ನನ್ನ ಹಿಗ್ಗಾಮುಗ್ಗಾ ಟೀಕೆ ಮಾಡಿದ್ದರು. ಅದನ್ನೆಲ್ಲಾ ಸಹಿಸಿಕೊಂಡಿರುವ ಪ್ರತಾಪ್ ಇದೀಗ ನಿಧಾನವಾಗಿ ವೀಕ್ಷಕರ ಅನುಕಂಪ ಗಿಟ್ಟಿಸತೊಡಗಿದ್ದಾನೆ. ಆದರೆ ಸ್ನೇಹಿತ್ ಹಾಗು ಸಂತು ಅವರಿಂದ ತಪ್ಪಿಸಿಕೊಂಡೆ ಎಂದು ಡ್ರೋನ್ ಪ್ರತಾಪ್ ನಿಟ್ಟುಸಿರು ಬಿಡುವಷ್ಟರಲ್ಲಿ ವಿನಯ್ ಗೌಡ ಪ್ರತಾಪ್ ನನ್ನ ಬೈಯ್ಯುವ ಮೂಲಕ ಅವಮಾನ ಮಾಡಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Bigg Boss Kannada : ಬಿಗ್ ಬಾಸ್ ನಲ್ಲಿ ರಾತ್ರೋರಾತ್ರಿ ನಡೆಯಿತು ಲವ್ವಿ ಡವ್ವಿ.! ಸಂಗೀತಾ-ಕಾರ್ತಿಕ್ ಮಾಡಿದ್ದೇನು ನೋಡಿ.?

ಪ್ರತಾಪ್ ಅದೇನು ಹೇಳಿದರೋ ವಿನಯ್ ಗೆ. ಅದನ್ನು ಯಾರು, ಯಾವ ರೀತಿ ಸುದ್ದಿ ಮುಟ್ಟಿಸಿದರೋ, ಏನೋ.! ವಿನಯ್ ಗೌಡ, ಪ್ರತಾಪ್ ಅವರನ್ನು ಹಿಗ್ಗಾಮುಗ್ಗಾ ಬೈದಿದ್ದಾರೆ. ಪ್ರತಾಪ್ ಅವರು, ನಾನು ಆಗೆಲ್ಲಾ ಹೇಳಿಲ್ಲ ಬ್ರೋ.. ನಾನು ಹೇಳಿದ್ದು… ಎನ್ನುತ್ತಿದ್ದಂತೆ ವಿನಯ್ ಪ್ರತಾಪ್ ಮಾತಿಗೆ ಬಾಯಿ ಹಾಕುತ್ತಾ ಪ್ರತಾಪ್ ಸೈಲೆಂಟ್ ಮೂಡ್ ಗೆ ಜಾರುವಂತೆ ಮಾಡಿದ್ದಾರೆ. ಪ್ರತಾಪ್ ಕಿಚನ್ ಗೋಡೆಗೆ ಒರಗಿ ಬೇಸರದಿಂದ ಕುಳಿತಲ್ಲಿಗೆ ಪ್ರೊಮೊ ಕಟ್ ಮುಗಿದಿದೆ.

Whatsapp Group Join
Telegram channel Join

ಎಲ್ಲರೂ ಅಡುಗೆಮನೆಗೆ ಬಂದು ಏನಾಯಿತು ಎಂದು ವಿಚಾರಿಸುತ್ತಾರೆ. ನೀನು ಎಷ್ಟು ಚೆನ್ನಾಗಿ ಅಡುಗೆ ಮಾಡುತ್ತೀಯ ಎಂದು ನನಗೆ ಗೊತ್ತು ವಿನಯ್ ಅಣ್ಣ ಎಂದು ಹೇಳಿ ಸಹಸ್ಪರ್ಧಿಗಳೊಂದಿಗೆ ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿನಯ್, ನಾನುಂ ಕಣ್ಣಲ್ಲಿ ಕಣ್ಣಿಟ್ಟು, ಮುಖದ ಮೇಲೆ ಎಲ್ಲವನ್ನು ಹೇಳುತ್ತೇನೆ. ನಾನು ಹಿಂದೆ ಮಾತನಾಡುವ ವ್ಯಕ್ತಿಯಲ್ಲ ಎನ್ನುತ್ತಾರೆ. ಹೀಗೆ ಪ್ರತಾಪ್ ಹಾಗು ವಿನಯ್ ನಡುವೆ ಮಾತಿನ ಚಕಾಮಕಿ ನಡೆಯುತ್ತಿದೆ.

ಇದನ್ನೂ ಕೂಡ ಓದಿ : ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | ಆರೋಗ್ಯ ಸಲಹೆ

ನಿನ್ನ ಡ್ರೋನ್ ರೆಕ್ಕೆಪುಕ್ಕ ಕೀಳುತ್ತೇನೆ ಎಂದು ವಿನಯ್ ಅವಾಜ್ ಹಾಕುತ್ತಾರೆ. ವಿನಯ್ ಮಾತಿನಿಂದ ಬೇಸರ ವ್ಯಕ್ತಪಡಿಸುವ ಪ್ರತಾಪ್, ಯಾರೊಂದಿಗೂ ಮಾತನಾಡದದೇ ಒಂದೆಡೆ ಹೋಗಿ ಮೌನವಾಗಿ ಕುಳಿತುಕೊಳ್ಳುತ್ತಾರೆ. ಆದರೆ ಈ ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತೋ.? ಕಾದುನೋಡಬೇಕು. ನಿಮ್ಮ ಪ್ರಕಾರ ವಿನಯ್ ಹಾಗು ಡ್ರೋನ್ ಪ್ರತಾಪ್ ಇಬ್ಬರಲ್ಲಿ ಯಾರು ನಿಮ್ಮ ನೆಚ್ಚಿನ ಸ್ಪರ್ಧಿ ಎಂದು ಕಾಮೆಂಟ್ ಮಾಡಿ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply