Neethu Vanajakshi : ನೀತು ವನಜಾಕ್ಷಿ ಬಗ್ಗೆ ನಿಮಗೆ ಗೊತ್ತಿರದ ಕೆಲವೊಂದು ರಹಸ್ಯಗಳು / ನೀತು ಹಿಂದೆ ಹೇಗಿದ್ದರು ಗೊತ್ತಾ.?

Neethu Vanajakshi : ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋಗೆ ಮಂಗಳಮುಖಿ ನೀತು ವನಜಾಕ್ಷಿ ಕಾಲಿಟ್ಟಿದ್ದಾರೆ. ಆರಂಭದಿಂದಲೂ ಚೆನ್ನಾಗಿಯೇ ಆಡಿಕೊಡು ಬಂದಿದ್ದಾರೆ. ಆದರೆ ಇದೀಗ ತಮ್ಮ ಜೀವನದಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಸಿರಿ ಹಾಗು ಭಾಗ್ಯಶ್ರೀ ಮುಂದೆ ಹಹೇಳಿಕೊಂಡು ಅತ್ತರು. ಮಿಸ್ ಟ್ರಾನ್ಸ್ ಕ್ವೀನ್ ಇಂಡಿಯಾ 2019 ಪಟ್ಟ ಗೆದ್ದ ನೀತು, ಹುಟ್ಟಿದ್ದು ಗದಗದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ. ಇವರ ಬಾಲ್ಯದ ಹೆಸರು ಮಂಜುನಾಥ್. ಸಂಚಾರಿ ವಿಜಯ್ ಅವರ ನಾನು ಅವನಲ್ಲ, ಅವಳು ಸಿನಿಮಾ ಬಹುತೇಕರು ನೋಡಿರಬಹುದು. ಅದರಲ್ಲಿ ಪುರುಷ ವ್ಯಕ್ತಿ ಮಹಿಳೆಯಾಗಿ ಬದಲಾಗುವಾಗ ಯಾವೆಲ್ಲ ಸಂಗತಿಗಳನ್ನ ಎದುರಿಸುತ್ತಾನೆ ಎನ್ನುವುದು ಚೆನ್ನಾಗಿ ತೋರಿಸಿದ್ದರು ಸಂಚಾರಿ ವಿಜಯ್.

Whatsapp Group Join
Telegram channel Join

ಇದನ್ನೂ ಕೂಡ ಓದಿ : Bigg Boss Kannada : ಬಿಗ್ ಬಾಸ್ ನಲ್ಲಿ ರಾತ್ರೋರಾತ್ರಿ ನಡೆಯಿತು ಲವ್ವಿ ಡವ್ವಿ.! ಸಂಗೀತಾ-ಕಾರ್ತಿಕ್ ಮಾಡಿದ್ದೇನು ನೋಡಿ.?

ಅದೇ ರೀತಿ ನೀತು ಕೂಡ ತಾನು ಏನೆಲ್ಲಾ ಸಮಸ್ಯೆಗಳನ್ನ ಎದುರಿಸಿದ್ದೆ ಎನ್ನುವುದನ್ನ ಹೇಳಿಕೊಂಡರು. ನೀತು ಮಾತನಾಡಿ, ನಾನು ಅಕ್ಕನ ಬಟ್ಟೆ ಎಲ್ಲಾ ಹಾಕಿಕೊಳ್ಳುತ್ತಿದ್ದೆ. ಕಾಜಲ್ ಹಚ್ಚಿಕೊಳ್ಳುತ್ತಿದ್ದೆ. ನಾನು ಮೊದಲು ನಾನಾಗಿಯೇ ಇರಲಿಲ್ಲ. ನಿತ್ಯವೂ ಅಳುತ್ತಿದ್ದೆ. ಹುಡುಗರು, ಹುಡುಗಿಯರ ಬಗ್ಗೆ ಮಾತನಾಡುತ್ತಿದ್ದರು. ಆದರೆ ನನಗೆ ಆ ಫೀಲ್ ಬರುತ್ತಿರಲಿಲ್ಲ. ಹುಡುಗರನ್ನು ನೋಡಿ ನಾನು ಆಕರ್ಷಿತನಾಗುತ್ತಿದೆ. ಮೊದಲು ನಾನು ಗೇ ಎಂದುಕೊಂಡೆ. ನಾನು ಏಳನೇ ತರಗತಿಯಲ್ಲಿ ಇದ್ದಾಗ ನಾನು ಹುಡುಗ ಅಲ್ಲ ಎನ್ನುವ ವಿಚಾರ ಗೊತ್ತಾಗುವುದಕ್ಕೆ ಶುರುವಾಯಿತು. ಪ್ಯಾಂಟ್ ಹಾಕಿಕೊಳ್ಳುವಾಗ ನಾರ್ಮಲ್ ಜೀವನ ನನಗೆ ಮಾಡುವುದಕ್ಕೆ ಆಗುತ್ತಿಲ್ಲವಲ್ಲ ಎಂದು ಅನಿಸಲು ಶುರುವಾಯಿತು ಎಂದು ಕಣ್ಣೀರು ಹಾಕಿದರು.

Whatsapp Group Join
Telegram channel Join

ಇದನ್ನೂ ಕೂಡ ಓದಿ : ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | ಆರೋಗ್ಯ ಸಲಹೆ

ಸೂಪರ್ ಕ್ವೀನ್ಸ್ ರಿಯಾಲಿಟಿ ಶೋ ಮೂಲಕ ನೀತು ಗುರುತಿಸಿಕೊಂಡಿದ್ದರು. ನೀತು ವನಜಾಕ್ಷಿ, ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಯುಐ ಚಿತ್ರದಲ್ಲಿ ನಟಿಸಿದ್ದಾರೆ. ತೆಲುಗು ಚಿತ್ರದಲ್ಲೂ ಅಭಿನಯಿಸಿದ್ದಾರೆ. ನೀತು ಟ್ಯಾಟೊ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನೊಂದೆಡೆ ಉತ್ತರ ಕರ್ನಾಟಕ ತಿನಿಸುಗಳ ಘಮಘಮ ಎನ್ನುವ ಹೋಟೆಲ್ ವೊಂದನ್ನ ನಡೆಸುತ್ತಿದ್ದಾರೆ. ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸದ್ಯ ಚೆನ್ನಾಗಿ ಆಟವಾಡುತ್ತಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply