Meghana Raj : ಚಿರು ಸರ್ಜಾ ಸಮಾಧಿ ಬಳಿ ಪುತ್ರ ರಾಯನ್ ಮಾಡಿದ ಕೆಲಸಕ್ಕೆ ಕಣ್ಣೀರಿಟ್ಟ ಚಿರು ತಾಯಿ ಅಮ್ಮಾಜಿ.! ಚಿರು ಪುತ್ರ ತಂದೆಗೆ ಹೇಳಿದ್ದೇನು ಗೊತ್ತಾ.?

Meghana Raj : ಕನ್ನಡದ ಚಿತ್ರರಂಗದ ಯುವನಟ ಚಿರಂಜೀವಿ ಸರ್ಜಾ(Chiranjeevi Sarja) ಆಗಲಿ ಮೂರು ವರ್ಷ. ಪ್ರತೀ ವರ್ಷವೂ ಕುಟುಂಬಸ್ಥರು, ಸ್ಬೇಹಿತರು ಹಾಗು ಅಭಿಮಾನಿಗಳು ಸಮಾಧಿಗೆ ಪೂಜೆ ಮಾಡುತ್ತಾರೆ. ಚಿರು ಅಗಲಿದ ದಿನ ಹಾಗು ಹುಟ್ಟುಹಬ್ಬದ ದಿನ ಸಮಾಧಿಯನ್ನು ವಿಶೇಷವಾಗಿ ಅಲಂಕಾರ ಮಾಡಲಾಗುತ್ತದೆ. ಹೂಗಳಿಂದ ತುಂಬಿಸಿರುತ್ತಾರೆ. ವರ್ಷ ವರ್ಷವೂ ರಾಯನ್ ರಾಜ್ ಸರ್ಜಾ ವಿಶೇಷವಾಗಿ ಕಾಣಿಸಿಕೊಂಡು ತಂದೆಯ ಸಮಾಧಿ ಬಳಿ ಏನಾದರೂ ಒಂದು ಮಾಡುತ್ತಿರುವ ವಿಡಿಯೋ ಹಾಗು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೀವೆಲ್ಲಾ ನೋಡಿರಬಹುದು.

Whatsapp Group Join
Telegram channel Join

Free Current Scheme : ಉಚಿತ ವಿದ್ಯುತ್ ಪಡೆಯುವ ಗೃಹಜ್ಯೋತಿ ಬಳಕೆದಾರರಿಗೆ.! ಉಚಿತ ಕರೆಂಟ್ ನಿಲ್ಲಿಸಿ ಶಾಕ್ ನೀಡುತ್ತಾ ಸರ್ಕಾರ.?

ಇದೀಗ ಚಿರು ಸರ್ಜಾ ಸಮಾಧಿ ಬಳಿ ಪುತ್ರ ರಾಯನ್ ಮಾಡಿದ ಕೆಲಸಕ್ಕೆ ಚಿರು ತಾಯಿ ಅಮ್ಮಾಜಿ ಅವರು ಕಣ್ಣೀರು ಹಾಕಿದ್ದಾರೆ. ಹಾಗಾದ್ರೆ ಚಿರು-ಮೇಘನಾ ದಂಪತಿ ಪುತ್ರ ರಾಯನ್ ಮಾಡಿದ್ದಾದರೂ ಏನು.? ನೋಡೋಣ. ಅಕ್ಟೋಬರ್ ೧೭ ರಂದು ಚಿರಂಜೀವಿ(Chiranjeevi Sarja) ಹುಟ್ಟುಹಬ್ಬವಿದ್ದು, ಇಡೀ ಕುಟುಂಬ ಚಿರು ಸಮಾಧಿಗೆ ಪೂಜೆ ಸಲ್ಲಿಸಿದ್ದರು.

Whatsapp Group Join
Telegram channel Join

ಟೀ ಶರ್ಟ್, ಚಡ್ಡಿಯಲ್ಲಿ ಎಂಟ್ರಿ ಕೊಟ್ಟ ಚಿರು ಪುತ್ರ ರಾಯನ್ ರಾಜ್, ತಂದೆಯ ಫೋಟೋಗೆ ಹೂ ಹಾಕಿ ನಮಸ್ಕಾರ ಮಾಡಿದ್ದಾನೆ. ಪದೇ ಪದೇ ನಮಸ್ತೆ ಅಪ್ಪ ಎಂದು ಹೇಳಿದ್ದಾನೆ. ಅದಾದ ಮೇಲೆ ಸಮಾಧಿ ಬಳಿ ಹೋಗಿ ಹೂವನ್ನ ಹಾಕಿ ಹ್ಯಾಪಿ ಬರ್ತ್ ಡೇ ಹಾಡನ್ನು ಹಾಡಿದ್ದಾನೆ. ಮೊದಲು ಸಮಾಧಿ ಮೇಲೆ ನಿಲ್ಲಿಸುವಂತೆ ಹಠ ಮಾಡುತ್ತಾನೆ. ಆ ನಂತರ ಒಂದು ಚೇರ್ ಹಾಕಿ ನಿಲ್ಲಿಸಿದ ಮೇಲೆ ಹೂವು ಹಾಕುತ್ತಲೇ ಹ್ಯಾಪಿ ಬರ್ತ್ ಡೇ ಅಂತ ಹಾಡಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Bigg Boss Kannada : ಸಂಗೀತಾ ಹಾಗು ಕಾರ್ತಿಕ್ ಮಧ್ಯೆ ಹುಳಿ ಹಿಂಡಿದ ವಿನಯ್.! ದೊಡ್ಮನೆಯಲ್ಲಿ ನಡೆದೇ ಹೋಯ್ತು ದೊಡ್ಡ ಬಿರುಕು.!

ಅದಾದ ಮೇಲೆ ತಾಯಿ ಮೇಘನಾ(Meghana Raj) ಹೇಳಿಕೊಡುವ ರೀತಿಯಲ್ಲಿ ಪಾರ್ಟಿ ಮಾಡಿದ್ಯಾ.? ಕೇಕ್ ತಿಂದ್ಯಾ.? ಎಂದು ರಾಯನ್ ತಂದೆ ಜೊತೆ ಮಾತನಾಡುತ್ತಾನೆ. ತಂದೆಯ ಸಮಾಧಿ ಮುಂದೆ ಮಗನ ಮುಗ್ದ ಮಾತುಗಳನ್ನ ಕೇಳಿ ಚಿರು ತಾಯಿ ಅಮ್ಮಾಜಿ ಅವರು ತುಂಬಾನೇ ನೋವಿನಿಂದ ಕಣ್ಣೀರು ಹಾಕಿದ್ದಾರೆ. ರಾಯನ್ ನನ್ನು ಎತ್ತಿ ಮುದ್ದಾಡಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಕಾಮೆಂಟ್ ಮೂಲಕ ನಮಗೆ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply