Tiger Claw : ನಟ ಜಗ್ಗೇಶ್ ಮನೆಯಲ್ಲಿ ಕೊಳೆತ ಪೆಂಡೆಂಟ್ ವಶ.? ಜಗ್ಗೇಶ್ ಗೂ ಉರುಳಾಗುತ್ತಾ ಹುಲಿ ಉಗುರಿನ ಪೆಂಡೆಂಟ್.!

Tiger Claw : ಒಂದೊಂದು ಸಂದರ್ಭದಲ್ಲಿ ಬಹಳ ಜೋಶಾಗಿ ಆಡಿದ ಮಾತುಗಳು ನಮ್ಮ ಕತ್ತಿಗೆ ಹೇಗೆ ಉರುಳಾಗುತ್ತೆ ಅನ್ನುವುದಕ್ಕೆ ನಟ ಹಾಗು ರಾಜ್ಯಸಭಾ ಸದಸ್ಯರಾಗಿರುವ ಜಗ್ಗೇಶ್ ಅವರೇ ಇದಕ್ಕೊಂದು ಉದಾಹರಣೆ ಅಂತ ಹೇಳಬಹುದು.

ಬಿಗ್ ಬಾಸ್ ಕನ್ನಡ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಪ್ರಕರಣದ ಬೆನ್ನಲ್ಲೇ ಹುಲಿ ಉಗುರು ಬಹಳ ತೀವ್ರ ಗಂಭೀರತೆಯನ್ನ ಪಡೆದುಕೊಳ್ಳುತ್ತಿದೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿಖಿಲ್ ಕುಮಾರಸ್ವಾಮಿ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಇನ್ನೂ ಹಲವು ನಾಯಕರುಗಳ ಮನೆಯಲ್ಲಿ ತಪಾಸಣೆಯನ್ನ ಅಧಿಕಾರಿಗಳು ನಡೆಸಿದ್ದಾರೆ. ಇನ್ನೊಂದು ಕಡೆ ಜಗ್ಗೇಶ್ ಅವರು ಈ ಹಿಂದೆ ಸಂದರ್ಶನದಲ್ಲಿ ನೀಡಿದ ಸ್ಟೇಟ್ ಮೆಂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಕೂಡ ಓದಿ : Darshan Thoogudeepa : ಹುಲಿ ಉಗುರು ಆರೋಪದಡಿ ದರ್ಶನ್ ಅವರನ್ನು ಅರೆಸ್ಟ್ ಮಾಡಬೇಕು ಎಂದವರಿಗೆ ಪತ್ನಿ ವಿಜಯಲಕ್ಷ್ಮಿ ಖಡಕ್ ಆಗಿ ಹೇಳಿದ್ದೇನು.?

ಜಗ್ಗೇಶ್ ಗೆ ಹುಲಿ ಉಗುರು ಉರುಳಾಗುತ್ತಾ.?

ನಟ, ಬಿಜೆಪಿ ಮುಖಂಡ ಹಾಗು ರಾಜ್ಯಸಭಾ ಸದಸ್ಯರಾಗಿರುವ ಜಗ್ಗೇಶ್ ಅವರ ಮನೆಯಲ್ಲಿ ಕೊಳೆತ ಹುಲಿ ಉಗುರಿನ ಪೆಂಡೆಂಟ್ ವಶಕ್ಕೆ, ಎಫ್ ಎಸ್ ಎಲ್ ವರದಿ ನಂತರ ಕಾನೂನು ಕ್ರಮ ತೆಗೆದುಕೊಳ್ಳಬಹುದು. ಹಳ್ಳಿಕಾರ್ ವರ್ತೂರು ಸಂತೋಷ್ ಗೆ ಹುಲಿ ಉಗುರು ಜೈಲಿಗಟ್ಟಿದೆ. ಸಂತೋಷ್ ಅರೆಸ್ಟ್ ಆದ ನಂತರ ಅರಣ್ಯ ಅಧಿಕಾರಿಗಳಿಗೆ ನಿಜವಾದ ಚಾಲೆಂಜ್ ಎದುರಾಗಿದೆ. ಹುಲಿ ಉಗುರಿನ ಲಾಕೆಟ್ ಧರಿಸಿಕೊಂಡಿರುವ ಸ್ಯಾಂಡಲ್ ವುಡ್ ನ ಸೆಲೆಬ್ರೆಟಿಗಳ ತಪಾಸಣೆಗೆ ಅರಣ್ಯ ಅಧಿಕಾರಿಗಳು ಮುಂದಾಗಿದ್ದಾರೆ.

ರಾಜ್ಯ ಸಭಾ ಸದಸ್ಯ, ನಟ ಜಗ್ಗೇಶ್ ಹುಲಿ ಉಗುರಿನ ಬಗ್ಗೆ ವಿವರಿಸಿರುವಂತಹ ವಿಡಿಯೋ ಕೂಡ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಜಗ್ಗೇಶ್ ವಿರುದ್ಧ ಮಾಜಿ ಎಂಎಲ್ಸಿ ಪಿ. ಆರ್ ರಮೇಶ್ ಅವರು ದೂರು ದಾಖಲಿಸಿದ್ದಾರೆ. ದೂರಿನ ಬೆನ್ನಲ್ಲೇ ಅರಣ್ಯ ಅಧಿಕಾರಿಗಳು ಮಲ್ಲೇಶ್ವರಂ ನಲ್ಲಿರುವ ನಟ ಜಗ್ಗೇಶ್ ನಿವಾಸದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದ್ದರು. ಅರಣ್ಯ ವಲಯ ಸಂರಕ್ಷಣಾ ಅಧಿಕಾರಿ ರವೀಂದ್ರ ನೇತೃತ್ವದಲ್ಲಿ ನಟ ಜಗ್ಗೇಶ್ ಮನೆಯಲ್ಲಿ ಪರಿಶೀಲನೆ ನಡೆಯಿತು.

ಇದನ್ನೂ ಕೂಡ ಓದಿ : Subsidy Scheme : ಲೋಕಸಭಾ ಚುನಾವಣಾ ಹಿನ್ನೆಲೆ ರೈತರಿಗೆ ಭರ್ಜರಿ ಸಿಹಿಸುದ್ಧಿ.! ಸಬ್ಸಿಡಿ ಹಣ ರೈತರ ಬ್ಯಾಂಕ್ ಖಾತೆಗೆ.!

ನಟ ಜಗ್ಗೇಶ್ ಮನೆಯಲ್ಲಿಲ್ಲದ ಕಾರಣ ಅವರ ಪತ್ನಿ ಪರಿಮಳ ಜಗ್ಗೇಶ್ ಅವರಿಗೆ ಅಧಿಕಾರಿಗಳು ನೋಟೀಸನ್ನ ನೀಡಿದ್ದಾರೆ. ನೋಟೀಸ್ ಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ. ಅರಣ್ಯಾಧಿಕಾರಿಗಳ ಮುಂದೆ ಜಗ್ಗೇಶ್ ಕುಟುಂಬ, ಹುಲಿ ಉಗುರಿನ ಲಾಕೆಟ್ ಅವರ ತಾಯಿ ಕೊಟ್ಟಿದ್ದು ಅನ್ನುವ ಮಾಹಿತಿ ನೀಡಿದ್ದಾರೆ. ವಶಕ್ಕೆ ಪಡೆದಿರುವ ಪೆಂಡೆಂಟ್ ೪೦ ವರ್ಷ ಹಳೆಯದಾಗಿದೆ. ಹೀಗಾಗಿ ಡಿಎನ್ ಎ ಮಾಡುವುದಕ್ಕಾಗಿ ಡೆಹ್ರಾಡೂನ್ ಲ್ಯಾಬ್ ಗೆ ಅರಣ್ಯಾಧಿಕಾರಿಗಳು ಕಳುಹಿಸಿಕೊಟ್ಟಿದ್ದಾರೆ. ವರದಿ ಬಂದ ನಂತರ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply